ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವುದರ ಜತೆಗೆ ಅಗತ್ಯವಿರುವ ವಿಷಯಕ್ಕೆ ಒತ್ತು ನೀಡಬೇಕು. ಅಲ್ಲದೆ ಭಾಷಾ ಕೌಶಲ್ಯ ಮತ್ತು ಸಂವಹನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಅತಿಥಿಯಾಗಿ ಆಗಮಿಸಿದ ಸಂಧ್ಯಾ ಶೆಟ್ಟಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಪ್ರತಿಷ್ಠಿತ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ವಿಜೃಂಭಣೆಯಿಂದ ಹಮ್ಮಿಕೊಂಡಿದ್ದ ಹತ್ತನೇ ಪದವಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಗಳು, ಮೂಡಬಿದ್ರೆಯ ಅಲ್-ಫುರ್ಕಾನ್ ವಿದ್ಯಾ ಸಂಸ್ಥೆ ವ್ಯಯಸ್ಥಾಪಕ ಮುಹ್ತರಮಃ ಮುಮ್ತಾಜ್ ಬಿನ್ತ್ ಮೊಯ್ದೀನ್ ಕುಂಞ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿ, “ಜೀವನದಲ್ಲಿ ಅಡೆತಡೆಗಳು ವಿಫಲತೆಗೆ ಕಾರಣಗಳಲ್ಲ. ಬದಲಾಗಿ ಜೀವನದಲ್ಲಿ ಸಾಧನೆ ಮಾಡಬೇಕಾದರೆ ಅದಕ್ಕೆ ಸಮರ್ಪಣೆ, ಶ್ರಮ ಮತ್ತು ದೃಢಸಂಕಲ್ಪ ಅಗತ್ಯ. ಗುರಿಯ ಕಡೆಗೆ ದೃಢವಾಗಿ ಪ್ರಯತ್ನಿಸುತ್ತ ಹೋದರೆ ಯಶಸ್ಸು ಖಚಿತ” ಎಂದು ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದರು.
ವಾಣಿಜ್ಯ ವಿಭಾಗದ ಉಪನ್ಯಾಸಕಿ ಪ್ರಜ್ಞಾ ಎಂ ಅವರು 2024-25ನೇ ಸಾಲಿನ ಬಿಎ ಮತ್ತು ಬಿಕಾಂ ಪದವಿ ಪೂರೈಸಿದ ವಿದ್ಯಾರ್ಥಿನಿಯರ ಪಟ್ಟಿ ವಾಚನ ಮಾಡಿದರು.
ಅನುಗ್ರಹ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಯಾಸಿನ್ ಬೇಗ್ ಸಭೆಯನ್ನು ಉದ್ದೇಶಿಸಿ ಕಾಲೇಜಿನ ಸ್ಥಾಪನೆ ಮತ್ತು ಕಾಲೇಜಿನಲ್ಲಿ ನೀಡುತ್ತಿರುವ ಮೌಲ್ಯಧಾರಿತ ಶಿಕ್ಷಣದ ಬಗ್ಗೆ ಮಾತನಾಡುತ್ತ, “ಎಲ್ಲ ವಿದ್ಯಾರ್ಥಿನಿಯರು ಗುಣಮಟ್ಟದ ಶಿಕ್ಷಣವನ್ನು ಪಡೆದು ಉತ್ತಮ ಪ್ರಜೆಯಾಗಿ ಸಮಾಜದಲ್ಲಿ ಬದುಕಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬಾಗೇಪಲ್ಲಿ ತಾಲೂಕಿನ 24 ಕೆರೆಗಳಿಗೆ ಹೆಚ್ ಎನ್ ವ್ಯಾಲಿ ನೀರು ಹರಿಸುವ ಕಾರ್ಯ ಲೋಕಾರ್ಪಣೆ
ವೇದಿಕೆಯಲ್ಲಿ ಇನ್ನೋರ್ವ ಅತಿಥಿ ಸಫೀನ ಬಾನು, ಉಪನ್ಯಾಸಕಿ, ಏನಪೋಯ ಇನ್ಸ್‌ಟಿಟ್ಯೂಟ್ಸ್ ಮಂಗಳೂರು, ಕಾಲೇಜಿನ ಪ್ರಾಂಶುಪಾಲೆ ಡಾ। ಹೇಮಲತ ಬಿ ಡಿ, ಸಲಹಾ ಸಮಿತಿಯ ಕಾರ್ಯದರ್ಶಿ ತಾರಾಕ್ಷಿ, ಪದವಿ ಪೂರ್ವ ವಿಭಾಗದ ಸಂಯೋಜಕಿ ಮಮಿತಾ ಎಸ್ ರೈ, ಪದವಿ ವಿಭಾಗದ ಸಂಯೋಜಕಿ ಆಬಿದ ಬಿ ಸೇರಿದಂತೆ ಕಾರ್ಯಕ್ರಮದಲ್ಲಿ ಅನುಗ್ರಹ ವಿದ್ಯಾಸಂಸ್ಥೆಗಳ ಖಜಾಂಜಿ ಹೈದರ್ ಅಲಿ, ಸಹ ಕಾರ್ಯದರ್ಶಿ ಅಬ್ದುಲ್ಲಾ ಕುಂಞ, ಕಾಲೇಜಿನ ಸಂಚಾಲಕ ಅಮಾನುಲ್ಲಾ ಖಾನ್, ಆಡಳಿತ ಮಂಡಳಿ ಸದಸ್ಯರು, ಬೋಧಕ ಬೋಧಕೇತರ ವೃಂದ, ವಿದ್ಯಾರ್ಥಿನಿಯರು ಮತ್ತು ಪೋಷಕರು ಇದ್ದರು.
ಪ್ರಥಮ ವಿಜ್ಞಾನ ವಿಭಾಗದ ಕುಮಾರಿ ನುಹಾ ಮರಿಯಮ್ ಹೈದರ್ ಖಿರಾಅತ್ ಪಠಿಸಿದರು. ದ್ವಿತೀಯ ವಿಜ್ಞಾನ ವಿಭಾಗದ ಖತೀಜ ಮಾಹಿರ ಸ್ವಾಗತಿಸಿ, ದ್ವಿತೀಯ ವಾಣಿಜ್ಯ ವಿಭಾಗದ ಕುಮಾರಿ ಆಸಿಯ ಅಫ್ಸಾನ ವಂದಿಸಿ, ತೃತೀಯ ಬಿಕಾಂ ವಿಭಾಗದ ಕುಮಾರಿ ಮಶೀದ ಕಾರ್ಯಕ್ರಮವನ್ನು ನಿರೂಪಿಸಿದರು.





