ಬಂಟ್ವಾಳ | ಮನೆಯ ಬಳಿ ಚಿರತೆ ಪ್ರತ್ಯಕ್ಷ; ಆತಂಕದಲ್ಲಿ ಗ್ರಾಮಸ್ಥರು

Date:

ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ಬಾಬತೋಟದ ರೈತರೊಬ್ಬರ ಮನೆಗೆ ಚಿರತೆ ಬಂದು ನಾಯಿಗಳ ಮೇಲೆ ದಾಳಿ ನಡೆಸಲು ಪ್ರಯತ್ನಿಸುವ ವೇಳೆ ನಾಯಿಗಳು ಜೋರಾಗಿ ಕೂಗಿಕೊಂಡಾಗ ಚಿರತೆ ಓಡಿಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇತ್ತ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಬಾಬತೋಟ ನಿವಾಸಿ ಪ್ರಕಾಶ್ ಪೂಜಾರಿ ಅವರ ಮನೆಯಂಗಳಕ್ಕೆ ಜು.17ರ ತಡರಾತ್ರಿ ಚಿರತೆ ಬಂದಿದೆ. ಸಿಸಿಟಿವಿಯ ಮಾನಿಟರ್ ಹಾಳಾಗಿದ್ದ ಕಾರಣ ಬಂದಿರುವುದು ಚಿರತೆ ಎಂಬುದು ರವಿವಾರ ಮಾನಿಟ‌ರ್ ದುರಸ್ತಿಯಾದ ಬಳಿಕ ಮನೆಯವರ ಗಮನಕ್ಕೆ ಬಂದಿದೆ.

ಇದನ್ನೂ ಓದಿ: ಶಕ್ತಿ ಯೋಜನೆ: ಮಹಿಳಾ ಸಬಲೀಕರಣಕ್ಕೆ ಹೊಸ ದಿಕ್ಕು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಚಿರತೆ ಬಂದ ವೇಳೆ ಮನೆಯಲ್ಲಿದ್ದ 2 ನಾಯಿಗಳು ಜೋರಾಗಿ ಕೂಗಿಕೊಂಡ ಸಂದರ್ಭದಲ್ಲಿ ಪ್ರಕಾಶ್ ಹೊರಗೆ ನೋಡುವುದಕ್ಕೆ ಹೊರಟಾಗ ಹೆದರಿಕೆಯಿಂದ ಮನೆಮಂದಿ ನಿಲ್ಲಿಸಿದ್ದರು. ಸಿಸಿಟಿವಿಯಲ್ಲಿ ಚಿರತೆಯು ನಾಯಿಗಳು ಬೊಗಳಿದ್ದರಿಂದ ಓಡಿ ಹೋಗಿರುವ ದೃಶ್ಯ ಸೆರೆಯಾಗಿದ್ದರೂ, ಅದನ್ನು ನೋಡುವ ಮಾನಿಟ‌ರ್ ಹಾಳಾಗಿತ್ತು.

ರಾತ್ರಿಯಲ್ಲಿ ಯಾರೋ ಬಂದು ಹೋಗಿದ್ದಾರೆ ಎಂಬ ಆತಂಕದಲ್ಲಿ ಮನೆಯವರು ಕಾಲ ಕಳೆಯುತ್ತಿದ್ದರು. ಮರುದಿನ ಮಾನಿಟರ್ ದುರಸ್ತಿಗೆ ಕೊಟ್ಟು ರವಿವಾರ ದುರಸ್ತಿಯಾಗಿ ಸಿಕ್ಕ ಬಳಿಕವೇ ಬಂದಿರುವುದು ಮನುಷ್ಯರಲ್ಲ ಅದು ಚಿರತೆ ಎಂದು ಗೊತ್ತಾಗಿದೆ. ಚಿರತೆಯು ದಾಳಿ ಮಾಡುವ ವೇಳೆ ಒಂದು ನಾಯಿಗೆ ಸಣ್ಣ ಗಾಯವಾಗಿದೆ. ಅದು ನಾಯಿಗಳೇ ಜಗಳ ಮಾಡಿಕೊಂಡು ಗಾಯ ಮಾಡಿಕೊಂಡಿರಬಹುದು ಮನೆಯವರು ಭಾವಿಸಿದ್ದರು.

ಇದನ್ನೂ ಓದಿ: ಉಳ್ಳಾಲ | ರೈಲ್ವೆ ಟ್ರ್ಯಾಕ್‌ ಅಂಡರ್‌ಪಾಸ್‌ ಕಾಮಗಾರಿಗೆ ರೈಲ್ವೆಯಿಂದ ಗ್ರೀನ್ ಸಿಗ್ನಲ್

ಮನೆಗಳ ಬಳಿಯಲ್ಲಿ ಚಿರತೆಗಳ ಓಡಾಟ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೇಳಿದರೂ, ಅವರು ಪಟಾಕಿ ಸಿಡಿಸಿ ಓಡಿಸಿ ಎಂದು ಸಲಹೆ ನೀಡುತ್ತಾರೆ ಎಂದು ಪ್ರಕಾಶ್ ಪೂಜಾರಿ ದೂರಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...