ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಘಟಪ್ರಭಾ ನದಿಗೆ ಉರುಳಿ ಬಿದ್ದ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ರಸ್ತೆಗೆ ತಡೆಗೋಡೆ ಇಲ್ಲದ ಕಾರಣ ಈ ಘಟನೆ ಸಂಭವಿಸಿದ್ದು, ಸಂಕೇಶ್ವರದಿಂದ ಬೆಳಗಾವಿಯತ್ತ ತೆರಳುತ್ತಿದ್ದ ಟ್ರಕ್ ಘಟಪ್ರಭಾ ನದಿಗೆ ಉರುಳಿ ಬಿದ್ದಿದೆ.
ಇದನ್ನು ಓದಿದ್ದೀರಾ? ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಿಂದ ಮತ್ತೊಂದು ಅಸಹ್ಯಕರ ಹೇಳಿಕೆ: ವ್ಯಾಪಕ ಖಂಡನೆ
ಟ್ರಕ್ ಘಟಪ್ರಭಾ ನದಿಗೆ ಚಾಲಕನ ನಿಯಂತ್ರಣ ಮೀರಿ ಬೀಳುತ್ತಿದ್ದಂತೆ ಚಾಲಕ ಈಜಿಕೊಂಡು ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ. ಜೆಸಿಬಿಯ ಸಹಾಯದಿಂದಾಗಿ ಟ್ರಕ್ ಅನ್ನು ಕಾರ್ಯಾಚರಣೆ ನಡೆಸಿ, ಮೇಲೆತ್ತಲಾಗಿದೆ.





