ಮಕ್ಕಳ ವೈದ್ಯರಾದ ಡಾ. ರಾಹುಲ್ ವಿಠಲ ಬಂಟಿ ಅವರ ಮನೆಯಲ್ಲಿ ಗಾಂಜಾ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಬೆಳಗಾವಿ ನಗರದ ಮಾಳಮಾರುತಿ ಠಾಣೆ ಪೊಲೀಸರು ಶಿವಬಸವ ನಗರದಲ್ಲಿರುವ ವೈದ್ಯರ ಮನೆ ಮೇಲೆ ದಾಳಿ ನಡೆಸಿ, ಬೆಡ್ ರೂಮಿನಿಂದ 134 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಗಾಂಜಾ ಸೇವಿಸಿರುವುದೂ ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರು, ಜನವರಿ 9ರಂದು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಗಾಂಜಾವನ್ನು ಎಲ್ಲಿಂದ ತಂದಿದ್ದಾರೆ? ಮಾರಾಟಕ್ಕಾಗಿತ್ತೋ ಅಥವಾ ಸೇವನೆಗಾಗಿ ಇಟ್ಟುಕೊಂಡಿದ್ದರೋ ಎಂಬ ಕುರಿತು ಗಂಭೀರ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಮಕ್ಕಳ ಆರೋಗ್ಯದ ಹೊಣೆ ಹೊತ್ತಿರುವ ವೃತ್ತಿಪರನಿಂದ ನಡೆದ ಈ ಕೃತ್ಯ ವೈದ್ಯ ವೃತ್ತಿಯ ಗೌರವಕ್ಕೆ ಮಸಿ ಬಳಿದಂತಾಗಿದೆ.




