11 ಚುನಾವಣೆಗಳ ಅನುಭವದೊಂದಿಗೆ ಮತ್ತೆ ಸ್ಪರ್ಧೆಗೆ ನಿಂತ ವಿಕಲ ಚೇತನ ಅಭ್ಯರ್ಥಿ

Date:

ಚುನಾವಣೆಯ ಅಖಾಡದಲ್ಲಿ ಸಾಮಾನ್ಯವಾಗಿ ಗುಂಪು, ಪ್ಯಾನೆಲ್, ಹಣ ಬಲವೇ ಮುಖ್ಯವೆಂದು ಭಾಸವಾಗುತ್ತದೆ. ಆದರೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಡ್ಲಿಕೊಪ್ಪ ಗ್ರಾಮದ ವಿಕಲ ಚೇತನರಾದ ಗದಿಗೆಪ್ಪ ಬೇಲೂರ ಅವರು ಈ ಕಲ್ಪನೆಗೆ ಸವಾಲು ಹಾಕುತ್ತಿದ್ದು, ಸೆಪ್ಟೆಂಬರ್ 14ರಂದು ನಡೆಯಲಿರುವ ರಾಮದುರ್ಗ ತಾಲೂಕಿನ ಖಾನಪೇಟ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರ ಚುನಾವಣೆಯಲ್ಲಿ, 3 ಗುಂಪುಗಳು ಸ್ಪರ್ಧೆ ಮಾಡಿದ್ದು ಇವರುಗಳ ಮಧ್ಯೆ ವಿಕಲ ಚೇತನ ಅಭ್ಯರ್ಥಿ ಗದಿಗೆಪ್ಪ ಬೇಲೂರ ಅವರ ಎಕಾಂಗಿಯ ಸ್ಪರ್ಧೆ ಹೊಸ ಕುತೂಹಲ ಮೂಡಿಸಿದೆ.

ಈ ಕುರಿತು ಈದಿನ. ಕಾಮ್ ಜತೆ ಮಾತನಾಡಿದ ಅವರು ನಾನು ಇದುವರೆಗೂ ಅನೇಕ ಚುನಾವನೆಗಳಲ್ಲಿ ಸ್ಪರ್ಧೆ ಮಾಡಿದ್ದೇನೆ ಆದರೆ ಯಾವ್ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿಲ್ಲ ನನ್ನಗೆ ಸ್ಪರ್ಧೆ ಮಾಡುವದು ಮುಖ್ಯ ಮತದಾರರಿಗೆ ಇಷ್ಟವಾದರೆ ಗೆಲ್ಲಿಸುತ್ತಾರೆ, ಮತ್ತು ನಾನು ಗುಂಪುಗಳಲ್ಲಿ ಸ್ಪರ್ಧೆ ಮಾಡಿಲ್ಲಾ ಸೋಲೋ ಗೆಲುವೋ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೇನೆ. ಮನುಷ್ಯನಿಗೆ ಆತ್ಮವಿಸ್ವಾಸ ಮತ್ತು ಧೈರ್ಯ ಮುಖ್ಯ ಹಾಗೂ ಸ್ಪರ್ಧಾ ಮನೋಭಾವನೆಯು ಇರಬೇಕು ಇಂದಲ್ಲ ನಾಳೆ ಗೆಲುವು ಸಿಗುತ್ತದೆ ಎಂಬ ಆತ್ಮವಿಶ್ವಾಸದ ಮಾತುಗಳನ್ನು ಹೇಳಿದ್ದಾರೆ.

ಗದಿಗೆಪ್ಪ ಇದುವರೆಗೆ 11 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ತಾಲೂಕು ಪಂಚಾಯತ್‌ನಿಂದ ಹಿಡಿದು ಗ್ರಾಮ ಪಂಚಾಯತ್, ಪುರಸಭೆ, ಜಿಲ್ಲಾ ಪಂಚಾಯತ್, ಎಪಿಎಂಸಿ,ವಿಧಾನಸಭಾ ಎಲ್ಲ ಕಣಗಳಲ್ಲೂ ಅವರ ಹೆಜ್ಜೆ ಗುರುತು ಇದೆ. ಆದರೆ ಯಾವ ಚುನಾವಣೆಯಲ್ಲೂ ಅವರಿಗೆ ಗೆಲುವು ಸಿಕ್ಕಿಲ್ಲ ಆದರೂ ಛಲ ಬಿಡದೆ ಚುನಾವಣೆಯಲ್ಲಿ ಸ್ಪರ್ಧೆಸುವದನ್ನು ಬಿಟ್ಟಿಲ್ಲ. ಸೋಲು ಅವರ ಜೀವನದ ಅತಿಥಿಯಾಗಿರಬಹುದು, ಆದರೆ ಸೋಲು ಅವರನ್ನು ನಿಲ್ಲಿಸಿಲ್ಲ. ಶಾರೀರಿಕ ಅಡಚಣೆಗಳು ಎಷ್ಟು ಗಂಭೀರವಾದರೂ ಮನೋಬಲವೇ ದೊಡ್ಡ ಬಲ ಎಂಬುದಕ್ಕೆ ಗದಿಗೆಪ್ಪ ಜೀವಂತ ಸಾಕ್ಷಿ. ರಾಜಕೀಯ ಲೆಕ್ಕಾಚಾರ, ಹಣದ ಆರ್ಭಟಗಳ ನಡುವೆ ಅವರು ತೋರಿಸಿರುವ ಎಕಾಂಗಿಯ ಹೋರಾಟವೂ ಇತರರಿಗೂ ನಿಜವಾದ ಪ್ರೇರಣೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಂತಿಮವಾಗಿ, ಈ ಚುನಾವಣೆಯಲ್ಲಿ ಗದಿಗೆಪ್ಪ ಗೆಲ್ಲುವರೋ, ಸೋಲುವರೋ ಅದು ಭವಿಷ್ಯದ ವಿಷಯ. ಆದರೆ ಪ್ರಜಾಪ್ರಭುತ್ವದ ನಿಜವಾದ ಗೆಲುವು ಅವರ ಧೈರ್ಯ, ಅವರ ಹಠಮಾರಿ ನಂಬಿಕೆಯಲ್ಲಿ ಈಗಾಗಲೇ ಕಂಡುಬರುತ್ತಿದೆ.

IMG 20251111 WA0000
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಮದುವೆ ನಿರಾಕರಿಸಿದ ಯುವತಿಯ ಕುಟುಂಬದ ಮೇಲೆ ಹಲ್ಲೆ ಮಾಡಿದ ಯುವಕ

ಮದುವೆ ಪ್ರಸ್ತಾವನೆ ನಿರಾಕರಿಸಿದ ವಿಚಾರವಾಗಿ ಯುವಕನೊಬ್ಬ ಯುವತಿ ಹಾಗೂ ಅವರ ಕುಟುಂಬ...

ಬೆಳಗಾವಿ | ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ₹11.06 ಕೋಟಿ ಕಾಣಿಕೆ ಸಂಗ್ರಹ

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿ...

ಬೆಳಗಾವಿ | ಆಲಿಕಲ್ಲು ಮಳೆ ಅಟ್ಟಹಾಸ: 39 ಕುರಿಗಳ ಸಾವು

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಸುತ್ತಮುತ್ತ ಮಂಗಳವಾರ ರಾತ್ರಿ ಸುರಿದ...

ಬೆಳಗಾವಿ | 15 ದಿನಗಳ ಹೆಣ್ಣು ಮಗು ಅನುಮಾನಾಸ್ಪದವಾಗಿ ಸಾವು: ತಂದೆಯ ಮೇಲೆ ವಿಷಪ್ರಾಶನ ಆರೋಪ

ಕೇವಲ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಹೆಣ್ಣು ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ...