ಬೆಳಗಾವಿ | ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಅಭಿವೃದ್ಧಿ, ಮದ್ಯಪಾನ ನಿಷೇಧ

Date:

ಬೆಳಗಾವಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮೊಹ್ಮದ್ ರೋಷನ್ ಮಾತನಾಡಿ ಸವದತ್ತಿ ಯಲ್ಲಮ್ಮನ ದೇವಸ್ಥಾನವನ್ನು ಪ್ರವಾಸೋದ್ಯಮ ಇಲಾಖೆ ಮತ್ತು ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರದ ಸಹಯೋಗದಲ್ಲಿ ಆಧುನಿಕತೆಯೊಂದಿಗೆ ಐತಿಹಾಸಿಕತೆಯನ್ನು ಸಂರಕ್ಷಿಸಿ ಭಕ್ತರಿಗೆ ಮೂಲ ಸೌಲಭ್ಯ ಹಾಗೂ ಮದ್ಯಪಾನ ನಿಷೇಧಗೊಳಿಸಿ ಅವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ದೇವಿಯ ಸರಾಗ ದರ್ಶನ, ಭಕ್ತರಿಗೆ ಮೂಲ ಸೌಲಭ್ಯ, ಪಾರ್ಕಿಂಗ್, ಮದ್ಯ- ಗುಟಕಾ ನಿರ್ಬಂಧ, ಮುಕ್ತ ಅಡುಗೆ ಮನೆ, ಗೌರವ ಘಟಕ, ದೇವಸ್ಥಾನಕ್ಕೆ ಮೂಲ ರೂಪ, ತಿರುಮಲದ ಮಾದರಿಯಲ್ಲಿ ಕ್ಯೂ ಕೌಂಟರ್, ಹಾಲ್, ದಾಸೋಹ ಭವನ, ಮೆವು ದಾಸೋಹ, ಆನ್‌’ಲೈನ್ ಹುಂಡಿ, ವ್ಯಾಪಾರ ವಹಿವಾಟಿಗೆ ಮತ್ತು ಮೂಲ ಪರಂಪರೆಗಳಿಗೆ ತೊಂದರೆಯಾಗದಂತೆ ಅಭಿವೃದ್ಧಿಯನ್ನು ಕೈಗೊಳ್ಳಲಾಗುತ್ತಿದೆ. ತಾವು ಬೇರೆಯ ಧರ್ಮದವರಾದರೂ ಕೂಡ ಸವದತ್ತಿ ಯಲ್ಲಮ್ಮ ದೇವಿ ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ಸಿಕ್ಕಿರುವುದು ಸೌಭಾಗ್ಯ ಎಂದು ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಹೇಳಿದರು.

ಭೀಮಗಡ ಅಭಯಾರಣ್ಯ, ಚಾಪಗಾಂವ್‌, ತಳೇವಾಡಿ, ಆಮಗಾಂವನಂತರಹ ಕಾಡುಪ್ರದೇಶದ ಜನರು ಸ್ವಇಚ್ಛೆಯಿಂದ ಜನವಸತಿಗೆ ಬರಲು ಇಚ್ಚಿಸಿದರೇ, 15 ಲಕ್ಷ ರೂಪಾಯಿ ನೆರವು ನೀಡಿ, ಕಾಡಿನ ಜನರಿಗೆ ಶೈಕ್ಷಣಿಕ ಮತ್ತು ಆರೋಗ್ಯ ವ್ಯವಸ್ಥೆಗಳನ್ನು ನೀಡುವ ನಿಟ್ಟಿನಲ್ಲಿ ಮತ್ತು ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು. ಇನ್ನು ಬೆಳಗಾವಿಯ ನಾಳೆಯ ತಾಂತ್ರಿಕ ದೋಷವನ್ನು ನಿವಾರಿಸಲು ಈಗಾಗಲೇ ಟನಲ್ ನಿರ್ಮಾನ, ಓವರ್ ಪ್ಲೋಗೆ ಪರ್ಯಾಯ ವ್ಯವಸ್ಥೆ ಮಾಡಲೂ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿಯನ್ನು ಮಾಡಲಾಗಿದೆ. ಎನ್.ಜಿ.ಓ ಕೈಜೋಡಿಸಿದರೇ, ಮುಂದಿನ ಡಿಸೆಂಬರ್ ನಲ್ಲಿ ಕ್ರಮ ಪುನರುಜ್ಜಿವನ ಕೈಗೊಳ್ಳಲಾಗುವುದು ಎಂದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ : ಪರಸಗಡ ನಾಟಕೋತ್ಸವ: ರಂಗ ಆರಾಧಕ–ರಂಗ ಚಂದ್ರ ಪ್ರಶಸ್ತಿಗಳಿಗೆ ಆಯ್ಕೆ

ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯಿಂದ ಪ್ರತಿ ವರ್ಷ ನೀಡಲಾಗುವ ರಂಗ ಆರಾಧಕ...

ಬೆಳಗಾವಿ | ಅಕ್ರಮ ಲ್ಯಾಟರೈಟ್ ಗಣಿಗಾರಿಕೆ; ಅಧಿಕಾರಿಗಳೂ ಶಾಮೀಲಾಗಿರುವ ಆರೋಪ

ಕಳೆದ ಮೂರು ತಿಂಗಳಿನಿಂದ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಅಕ್ರಮ ಲ್ಯಾಟರೈಟ್ (ಕೆಂಪು...