ಬೆಳಗಾವಿ | ಪೆಟ್ರೋಲ್ ಸಾಗಿಸುತ್ತಿದ್ದ ಲಾರಿ ಪಲ್ಟಿ

Date:

ಬೆಳಗಾವಿ ಜಿಲ್ಲೆಯ ಹಲಗಾ ಗ್ರಾಮದ ಸುವರ್ಣ ವಿಧಾನಸೌಧ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಪೆಟ್ರೋಲ್‌ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಲಕ್ಷಾಂತರ ಮೌಲ್ಯದ ಪೆಟ್ರೋಲ್ ರಸ್ತೆ ಪಾಲಾಗಿದೆ.

ಬೈಲಹೊಂಗಲದ ಕಡೆ ಹೊರಟಿದ್ದ ಟ್ಯಾಂಕ‌ರ್ ವೇಗವಾಗಿ ಸಾಗುತ್ತಿರುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಿಭಜಕಕ್ಕೆ ಡಿಕ್ಕಿ ಹೊಡೆದು, ಹೆದ್ದಾರಿಯ ಮತ್ತೊಂದು ಬದಿಯಲ್ಲಿ ಬಿದ್ದಿದೆ.

ಲಾರಿ ಪಲ್ಟಿಯಾಗಿದ್ದರಿಂದ ಹೆದ್ದಾರಿಯಲ್ಲಿ ಸಾಕಷ್ಟು ಪ್ರಮಾಣದ ಪೆಟ್ರೋಲ್‌ ರಸ್ತೆ ಪಾಲಾಗಿದೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ, ಕ್ರೇನ್ ಮೂಲಕ ವಾಹನ ಮೇಲೆತ್ತಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಅಕ್ರಮ ಲ್ಯಾಟರೈಟ್ ಗಣಿಗಾರಿಕೆ; ಅಧಿಕಾರಿಗಳೂ ಶಾಮೀಲಾಗಿರುವ ಆರೋಪ

ಕಳೆದ ಮೂರು ತಿಂಗಳಿನಿಂದ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಅಕ್ರಮ ಲ್ಯಾಟರೈಟ್ (ಕೆಂಪು...

ಬೆಳಗಾವಿ : ಬಾಲಕನಿಗೆ ಮದ್ಯ ಸೇವನೆ ಮಾಡಿಸಿದ ಅಮಾನವೀಯ ಕೃತ್ಯ ಬಾರ್ ಮಾಲಿಕರ ವಿರುದ್ಧ ಕ್ರಮ

ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಬಾರ್ ಒಂದರಲ್ಲಿ ತಾತನೊಬ್ಬ ತನ್ನ ಅಪ್ರಾಪ್ತ...

ಬೆಳಗಾವಿ | ಸಾಂಪ್ರದಾಯಿಕವಾಗಿ ಹಿಂದೂ ಮಹಿಳೆಯ ಅಂತ್ಯಕ್ರಿಯೆ: ಸೌಹಾರ್ದತೆ ಮೆರೆದ ಮುಸ್ಲಿಂ, ಕ್ರಿಶ್ಚಿಯನ್ನರು

ಬೆಳಗಾವಿಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 70 ವರ್ಷದ ಹಿಂದೂ ಮಹಿಳೆಯ ಅಂತ್ಯಕ್ರಿಯೆಯನ್ನು ಮುಸ್ಲಿಂ...