ಬೆಳಗಾವಿ : ಸವದತ್ತಿ ತಾಲೂಕಿನ 35 ಹಳ್ಳಿಗಳು ಬೈಲಹೊಂಗಲ ತಾಲೂಕಿಗೆ ಸೇರ್ಪಡೆ

Date:

ಆಡಳಿತ ವ್ಯವಸ್ಥೆಯನ್ನು ಸುಗಮಗೊಳಿಸುವುದು ಹಾಗೂ ಸಾರ್ವಜನಿಕರ ದೈನಂದಿನ ಸಂಕಷ್ಟ ನಿವಾರಿಸುವ ಉದ್ದೇಶದಿಂದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ 35 ಹಳ್ಳಿಗಳನ್ನು ಬೈಲಹೊಂಗಲ ತಾಲೂಕಿಗೆ ಸೇರಿಸಿ ರಾಜ್ಯ ಸರ್ಕಾರ ಬುಧವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಬೈಲಹೊಂಗಲಕ್ಕೆ ಕೇವಲ 3 ರಿಂದ 10 ಕಿ.ಮೀ ದೂರದಲ್ಲಿದ್ದರೂ 40–50 ಕಿ.ಮೀ ದೂರದ ಸವದತ್ತಿಗೆ ತಾಲೂಕು ಕಾರ್ಯಗಳಿಗಾಗಿ ಅಲೆಯಬೇಕಾಗಿದ್ದ ಸಾವಿರಾರು ಜನರಿಗೆ ಈ ನಿರ್ಧಾರ ಮಹತ್ತರ ಪರಿಹಾರವಾಗಿದೆ. ವಿದ್ಯಾರ್ಥಿಗಳು, ರೈತರು, ಮಹಿಳೆಯರು, ವೃದ್ಧರು ಹಾಗೂ ಸರ್ಕಾರಿ ನೌಕರರು ದಿನನಿತ್ಯ ಅನುಭವಿಸುತ್ತಿದ್ದ ತೀವ್ರ ತೊಂದರೆಗೆ ಇದರಿಂದ ಅಂತ್ಯ ಕಂಡಿದೆ.

ಮರಕುಂಬಿ ಗ್ರಾಮ ಬೈಲಹೊಂಗಲದಿಂದ ಕೇವಲ 3 ಕಿ.ಮೀ ದೂರದಲ್ಲಿದ್ದರೂ ಇದುವರೆಗೆ ಸವದತ್ತಿ ತಾಲ್ಲೂಕಿನ ವ್ಯಾಪ್ತಿಯಲ್ಲಿತ್ತು. ಹಾರೂಗೊಪ್ಪ, ಇಂಚಲ, ಹೊಸೂರು ಗ್ರಾಮಗಳು 5 ಕಿ.ಮೀ ವ್ಯಾಪ್ತಿಯಲ್ಲಿದ್ದರೂ ತಾಲೂಕು ಕೇಂದ್ರಕ್ಕೆ 40 ಕಿ.ಮೀ ಪ್ರಯಾಣ ಅನಿವಾರ್ಯವಾಗಿತ್ತು. ಚಚಡಿ ಗ್ರಾಮ 10 ಕಿ.ಮೀ ದೂರದಲ್ಲಿದ್ದರೂ 40 ರಿಂದ 50 ಕಿ.ಮೀ ದೂರದ ಸವದತ್ತಿಗೆ ತೆರಳಬೇಕಾಗುತ್ತಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಣ್ಣ ಪ್ರಮಾಣಪತ್ರ, ಜನನ–ಮರಣ ಪ್ರಮಾಣಪತ್ರ, ಆಸ್ತಿ ನೋಂದಣಿ, ಪತ್ರವ್ಯವಹಾರ ಸೇರಿದಂತೆ ಪ್ರತಿಯೊಂದು ಸರ್ಕಾರಿ ಕೆಲಸಕ್ಕೂ ಜನರು ದಿನವಿಡೀ ಪ್ರಯಾಣ ಮಾಡಿ ಸಮಯ ಹಾಗೂ ಹಣ ವ್ಯಯ ಮಾಡಬೇಕಾಗುತ್ತಿತ್ತು. ಈಗ ಈ ಹಳ್ಳಿಗಳನ್ನು ಬೈಲಹೊಂಗಲ ತಾಲ್ಲೂಕಿಗೆ ಸೇರಿಸಿರುವುದರಿಂದ ಕೇವಲ 5 ರಿಂದ 15 ನಿಮಿಷಗಳಲ್ಲಿ ತಾಲೂಕು ಕೇಂದ್ರ ತಲುಪಲು ಸಾಧ್ಯವಾಗಲಿದೆ.

ಈ ಭಾಗದ ಜನರು ದಶಕಗಳಿಂದ ತಾಲೂಕು ಕೇಂದ್ರ ಬದಲಾವಣೆಗೆ ಆಗ್ರಹಿಸುತ್ತಲೇ ಬಂದಿದ್ದರು. ಮತಗಳ ವಿಭಜನೆಯ ಭೀತಿಯಿಂದ ಇದುವರೆಗೆ ಜನಪ್ರತಿನಿಧಿಗಳು ನಿರ್ಧಾರ ಕೈಗೊಳ್ಳಲು ಹಿಂಜರಿದಿದ್ದರು. ಇದೀಗ ಸರ್ಕಾರ ಮೌನವಾಗಿ ಗೆಜೆಟ್ ಅಧಿಸೂಚನೆ ಹೊರಡಿಸಿರುವುದು ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ಐದು ವರ್ಷಗಳ ಹಿಂದೆ ಸವದತ್ತಿ ತಾಲ್ಲೂಕನ್ನು ವಿಭಜಿಸಿ ಯರಗಟ್ಟಿ ಕೇಂದ್ರವಾಗಿ ಹೊಸ ತಾಲೂಕು ರಚಿಸಲಾಗಿತ್ತು. ಸದ್ಯ ಸವದತ್ತಿ ತಾಲ್ಲೂಕಿನಲ್ಲಿ 32 ಗ್ರಾಮ ಪಂಚಾಯಿತಿಗಳು ಹಾಗೂ 88 ಹಳ್ಳಿಗಳಿದ್ದವು. ಇದೀಗ ಅವುಗಳಲ್ಲಿ 35 ಹಳ್ಳಿಗಳನ್ನು ಬೈಲಹೊಂಗಲ ತಾಲ್ಲೂಕಿಗೆ ಸೇರಿಸಲಾಗುತ್ತಿದ್ದು, ಬೈಲಹೊಂಗಲ ತಾಲ್ಲೂಕಿನ ಹಳ್ಳಿಗಳ ಸಂಖ್ಯೆ 117ಕ್ಕೆ ಏರಲಿದೆ. ಸವದತ್ತಿ ತಾಲ್ಲೂಕಿನ ಹಳ್ಳಿಗಳ ಸಂಖ್ಯೆ 53ಕ್ಕೆ ಇಳಿಯಲಿದೆ.

ಜನಸಂಖ್ಯೆ, ಭೂ ಪ್ರದೇಶ, ಭೂ ಕಂದಾಯ ಹಾಗೂ ಸಾರ್ವಜನಿಕ ಬೇಡಿಕೆಗಳನ್ನು ಪರಿಗಣಿಸಿ ಕರ್ನಾಟಕ ಭೂ ಕಂದಾಯ ಕಾಯ್ದೆ–1964ರ ಸೆಕ್ಷನ್ 4(4) ಅಡಿಯಲ್ಲಿ ಈ ಪುನರ್ವಿಂಗಡಣೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ತಕರಾರುಗಳಿದ್ದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

1001118926 2

ಬೈಲಹೊಂಗಲ ತಾಲೂಕಿಗೆ ಸೇರ್ಪಡೆಯಾಗುವ ಹಳ್ಳಿಗಳು

ಬೈಲಹೊಂಗಲ ತಾಲೂಕಿಗೆ ಸೇರ್ಪಡೆಯಾಗುವ ಹಳ್ಳಿಗಳಲ್ಲಿ ಮುರಗೋಡ, ಸುಬ್ಬಾಪೂರ, ರಾಮಾಪೂರ, ರಾಮಾಪೂರ ತಾಂಡಾ, ಬಸರಗಿ ಕೆ.ಎಂ., ಚಚಡಿ, ಗುಂಡೂರು, ಹಾರೂಗೊಪ್ಪ, ಗೊಂತಮಾರ, ತಡಸನೂರ, ಹಲಕಿ, ಹಲಕಿ ತಾಂಡಾ, ಹೂಲಿಕೇರಿ ತಾಂಡಾ, ಜಂಗಮ ಬುಡಕಟ್ಟಿ, ಹಿರೆ ಬೂದನೂರ, ಚಿಕ್ಕ ಬೂದನೂರ, ಮಲಗಲಿ, ಕುಟ್ರನಟ್ಟಿ, ಓಬಲದ್ದಿನಿ, ಇಂಚಲ, ಮುತವಾಡ, ಮರಕುಂಬಿ, ಚಿಕ್ಕೊಪ್ಪ (ಎಂ.ಕೆ), ಹಿರೆಕೊಪ್ಪ (ಎಂ.ಕೆ), ಹೊಸೂರು, ಮಲ್ಲೂರು, ಮಾತೊಳ್ಳಿ, ಸೊಗಲ, ಇಂಗಳಗಿ, ಕಾಗಿನಾಳ, ಕಾಗಿನಾಳ ತಾಂಡಾ, ರುದ್ರಾಪೂರ, ಗಿರಿನಗರ, ಕರಿಮಣಿ, ದುಂಡನಕೊಪ್ಪ ಸೇರಿವೆ.

IMG 20251111 WA0000
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಮದುವೆ ನಿರಾಕರಿಸಿದ ಯುವತಿಯ ಕುಟುಂಬದ ಮೇಲೆ ಹಲ್ಲೆ ಮಾಡಿದ ಯುವಕ

ಮದುವೆ ಪ್ರಸ್ತಾವನೆ ನಿರಾಕರಿಸಿದ ವಿಚಾರವಾಗಿ ಯುವಕನೊಬ್ಬ ಯುವತಿ ಹಾಗೂ ಅವರ ಕುಟುಂಬ...

ಬೆಳಗಾವಿ | ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ₹11.06 ಕೋಟಿ ಕಾಣಿಕೆ ಸಂಗ್ರಹ

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿ...

ಬೆಳಗಾವಿ | ಆಲಿಕಲ್ಲು ಮಳೆ ಅಟ್ಟಹಾಸ: 39 ಕುರಿಗಳ ಸಾವು

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಸುತ್ತಮುತ್ತ ಮಂಗಳವಾರ ರಾತ್ರಿ ಸುರಿದ...

ಬೆಳಗಾವಿ | 15 ದಿನಗಳ ಹೆಣ್ಣು ಮಗು ಅನುಮಾನಾಸ್ಪದವಾಗಿ ಸಾವು: ತಂದೆಯ ಮೇಲೆ ವಿಷಪ್ರಾಶನ ಆರೋಪ

ಕೇವಲ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಹೆಣ್ಣು ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ...