ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ರಾಷ್ಟ್ರೀಯ ಹೆದ್ದಾರಿ ಮೇಲಿನ ಹಿರೇಹಳ್ಳ ಸೇತುವೆ ಬಳಿ ಭಾನುವಾರ ನಿಯಂತ್ರಣ ತಪ್ಪಿದ ಬೈಕ್ ಹೆದ್ದಾರಿ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ನಡೆದಿದೆ.
ಅಪಘಾತದಲ್ಲಿ ಹಳೇ ಹುಬ್ಬಳ್ಳಿಯ ಈಶ್ವರ ನಗರದ ರಮೇಶ ಅಂದೆಪ್ಪ ಅಂಬಿಗೇರ (22) ಮತ್ತು ಎಸ್.ಎಂ ಕೃಷ್ಣ ಕಾಲೊನಿಯ ಮದನ ಚಂದ್ರಕಾಂತ ಮೇಟಿ (20) ಎಂಬುವರು ಮೃತಪಟ್ಟಿದ್ದಾರೆ.
ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ರಾಯಣ್ಣನ ಸಮಾಧಿ ದರ್ಶನ ಪಡೆದು ವಾಪಸು ಊರಿಗೆ ಹೊರಟಾಗ ಈ ಘಟನೆ ನಡೆದಿದೆ’ ಎಂದು ಕಿತ್ತೂರು ಠಾಣೆ ಪೊಲೀಸರು ತಿಳಿಸಿದ್ದಾರೆ.





