ಬೆಳಗಾವಿ ನಗರದ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸೈಫಅಲಿ ಶೇರಅಲಿ ನಾಗಾರ್ಜೀ (25) ಹಾಗೂ ನೇಹಾನ್ @ ಅನೀಶ ಮೂಶೀನ ಮುಜಾವರ (18) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ವಿವಿಧ ಕಂಪನಿಗಳ ಒಟ್ಟು ₹1.25 ಲಕ್ಷ ಮೌಲ್ಯದ ಐದು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕಾನೂನು ಕ್ರಮ ಜರುಗಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಮಗನ ಅಂತ್ಯಸಂಸ್ಕಾರ ಮಾಡಲಾಗದೆ ಪರಿತಪಿಸಿದ ತಾಯಿ: ಮನಕಲಕುವ ಘಟನೆ
ಪ್ರಕರಣವನ್ನು ಭೇದಿಸುವಲ್ಲಿ ಪಿಐ ಯು.ಎಸ್. ಅವಟಿ, ಪಿಎಸ್‌ಐ ಎಸ್.ಆರ್. ಮುತ್ತತ್ತಿ, ಎಎಸ್‌ಐ ಎಂ.ಎ. ಪಾಟೀಲ ಹಾಗೂ ಸಿಬ್ಬಂದಿಗಳಾದ ಬಸವರಾಜ ನರಗುಂದ, ಖಾದರಸಾಬ ಖಾನಮ್ಮನವರ, ಗೋವಿಂದಪ್ಪ ಪೂಜಾರ, ರಫೀಕ್ ಮುಜಾವರ, ರಮೇಶ್ ಪಾಟೀಲ, ತಾಂತ್ರಿಕ ವಿಭಾಗದ ರಮೇಶ್ ಅಕ್ಕಿ ಮತ್ತು ಮಹದೇವ ಅವರ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ




