ಬೆಳಗಾವಿ | ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಅಪರಾಧಿಗಳ ಬಂಧನ– ಶಸ್ತ್ರಾಸ್ತ್ರ, ಹೆರಾಯಿನ್ ವಶಕ್ಕೆ

Date:

ಬೆಳಗಾವಿ ನಗರದ ಮಜಗಾವಿ ಕ್ರಾಸ್‌ನಲ್ಲಿ ಶಸ್ತ್ರಾಸ್ತ್ರ ಸಾಗಾಟದಲ್ಲಿ ತೊಡಗಿದ್ದ ಮಜಗಾವಿಯ ವಾಲ್ಮೀಕಿ ಗಲ್ಲಿಯ ಮಂಜು ಸಿತಿಮಣಿ (27) ಎಂಬಾತನನ್ನು ಉದ್ಯಮಬಾಗ್ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಆರೋಪಿಯಿಂದ ಇನ್ನೋವಾ ಕಾರು, ಅದರೊಳಗಿದ್ದ ಖಡ್ಗ ಮತ್ತು ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನೊಂದು ಪ್ರಕರಣದಲ್ಲಿ, ಸಾಂಬ್ರಾ ಕೆಳಸೇತುವೆ ಬಳಿ ಸಂಚರಿಸುತ್ತಿದ್ದ ಹೊಸ ಗಾಂಧಿ ನಗರದ ಅಪ್ಪಾರ ಶೇಖ್ (42) ಎಂಬಾತನನ್ನು ಮಾಳಮಾರುತಿ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಈತನಿಂದ ದ್ವಿಚಕ್ರ ವಾಹನ ಹಾಗೂ ಅದರ ಲಾಕರ್‌ನಲ್ಲಿದ್ದ ಶಸ್ತ್ರಾಸ್ತ್ರವನ್ನು ವಶಪಡಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಶಾಹೂನಗರದ ಕೆರೆ ಬಳಿ ರೌಡಿಶೀಟರ್ ರಾಹುಲ್ ಜಾಧವ ಎಂಬಾತನನ್ನು ಎಪಿಎಂಸಿ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಂಧಿತನಿಂದ 2.20 ಗ್ರಾಂ ಹೆರಾಯಿನ್ ಹೊಂದಿರುವ 24 ಪ್ಯಾಕೆಟ್‌ಗಳೊಂದಿಗೆ ದ್ವಿಚಕ್ರ ವಾಹನವನ್ನೂ ವಶಪಡಿಸಿಕೊಂಡಿದ್ದಾರೆ.

ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಮದುವೆ ನಿರಾಕರಿಸಿದ ಯುವತಿಯ ಕುಟುಂಬದ ಮೇಲೆ ಹಲ್ಲೆ ಮಾಡಿದ ಯುವಕ

ಮದುವೆ ಪ್ರಸ್ತಾವನೆ ನಿರಾಕರಿಸಿದ ವಿಚಾರವಾಗಿ ಯುವಕನೊಬ್ಬ ಯುವತಿ ಹಾಗೂ ಅವರ ಕುಟುಂಬ...

ಬೆಳಗಾವಿ | ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ₹11.06 ಕೋಟಿ ಕಾಣಿಕೆ ಸಂಗ್ರಹ

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿ...

ಬೆಳಗಾವಿ | ಆಲಿಕಲ್ಲು ಮಳೆ ಅಟ್ಟಹಾಸ: 39 ಕುರಿಗಳ ಸಾವು

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಸುತ್ತಮುತ್ತ ಮಂಗಳವಾರ ರಾತ್ರಿ ಸುರಿದ...

ಬೆಳಗಾವಿ | 15 ದಿನಗಳ ಹೆಣ್ಣು ಮಗು ಅನುಮಾನಾಸ್ಪದವಾಗಿ ಸಾವು: ತಂದೆಯ ಮೇಲೆ ವಿಷಪ್ರಾಶನ ಆರೋಪ

ಕೇವಲ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಹೆಣ್ಣು ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ...