ಮಗಳ ಪ್ರೇಮ ಸಂಬಂಧ ಮನನೊಂದು ತಂದೆಯೊಬ್ಬರು ಜೀವಂತ ಮಗಳ ತಿಥಿ ಕಾರ್ಯ ಮಾಡಿ ಊರಿಗೆ ಊಟ ಹಾಕಿಸಿದ ವಿಚಿತ್ರ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆದಿದೆ.
ಮಗಳ ತಿಥಿ ಮಾಡಿದವರು ಶಿವನಗೌಡ ಪಾಟೀಲ. ಮಗಳು ಸುಶ್ಮಿತಾ ಶಿವಗೌಡ ಪಾಟೀಲ ಪ್ರೇಮ ಬಲೆಯಲ್ಲಿ ಬಿದ್ದು ಅದೇ ಗ್ರಾಮದ ವಿಠಲ ಬಸ್ತವಾಡೆ ಎಂಬ ಯುವಕನ ಜೊತೆ ಪರಾರಿಯಾಗಿದ್ದಾಳೆ ಎಂದು ತಿಳಿದು ಬಂದಿದೆ.

ಈ ನಡೆ ಮನೆಯ ಗೌರವ ಹಾಳುಮಾಡಿದೆ ಎಂಬ ನೋವಿನಿಂದ ಮನನೊಂದ ತಂದೆ, ತಿಥಿ ಕಾರ್ಯ ನೆರವೇರಿಸಿ ಸಂಬಂಧಿಕರಿಗೆ ಊಟ ಹಾಕಿಸುವುದರೊಂದಿಗೆ ಗ್ರಾಮದಲ್ಲಿ ಕೆಲವು ಕಡೆ “ಭಾವಪೂರ್ಣ ಶ್ರದ್ಧಾಂಜಲಿ ಸುಶ್ಮಿತಾ ಪಾಟೀಲ” ಎಂಬ ಶೀರ್ಷಿಕೆಯೊಂದಿಗೆ ಬ್ಯಾನರ್‌ಗಳನ್ನು ಹಾಕಿಸಿದ್ದಾನೆ.
ಈ ವಿಚಿತ್ರ ಘಟನೆ ಗ್ರಾಮದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ





