ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಒಟ್ಟು ಏಳು ಕ್ಷೇತ್ರಗಳಲ್ಲಿ ಮತ ಎಣಿಕೆ ನಡೆದಿದ್ದರೂ, ಕೇವಲ ಮೂರು ಕ್ಷೇತ್ರಗಳ ಫಲಿತಾಂಶವನ್ನು ಮಾತ್ರ ಅಧಿಕೃತವಾಗಿ ಘೋಷಿಸಲಾಗಿದೆ. ಉಳಿದ ನಾಲ್ಕು ಕ್ಷೇತ್ರಗಳ ಫಲಿತಾಂಶವನ್ನು ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪ್ರಕಟಿಸಲು ಅವಕಾಶ ನೀಡಲಾಗಿಲ್ಲ.
ಘೋಷಿತ ಕ್ಷೇತ್ರಗಳ ಫಲಿತಾಂಶ

ರಾಮದುರ್ಗ ತಾಲೂಕು:
ಮಲಣ್ಣಾ ಯಾದವಾಡ – 19 ಮತಗಳು
ಶ್ರೀಕಾಂತ್ ಧವನ – 16 ಮತಗಳು
ಮಲಣ್ಣಾ ಯಾದವಾಡ 3 ಮತಗಳಿಂದ ಜಯ

ಅಥಣಿ ತಾಲೂಕು:
ಲಕ್ಷ್ಮಣ ಸವದಿ – 122 ಮತಗಳು
ಮಹೇಶ್ ಕುಮಟಳ್ಳಿ – 3 ಮತಗಳು
ಲಕ್ಷ್ಮಣ ಸವದಿ 119 ಮತಗಳಿಂದ ಭಾರೀ ಜಯ

ರಾಯಭಾಗ ತಾಲೂಕು:
ಅಪ್ಪಾಸಾಹೇಬ್ ಕುಲಗೋಡೆ – 120 ಮತಗಳು
ಬಸನಗೌಡ ಆಸಂಗಿ – 64 ಮತಗಳು
ಅಪ್ಪಾಸಾಹೇಬ್ ಕುಲಗೋಡೆ 56 ಮತಗಳಿಂದ ಗೆಲುವು
ನ್ಯಾಯಾಲಯದ ಆದೇಶದಿಂದ ಪ್ರಕಟಣೆ ನಿಲ್ಲಿಸಿದ ಕ್ಷೇತ್ರಗಳು

ಹುಕ್ಕೇರಿ:
ರಮೇಶ ಕತ್ತಿ – 59 ಮತಗಳು
ರಾಜೇಂದ್ರ ಪಾಟೀಲ್ – 30 ಮತಗಳು
ರಮೇಶ ಕತ್ತಿ 29 ಮತಗಳಿಂದ ಮುನ್ನಡೆ

ನಿಪ್ಪಾಣಿ:
ಅಣ್ಣಾಸಾಹೇಬ ಜೊಲ್ಲೆ – 71 ಮತಗಳು
ಉತ್ತಮ ಪಾಟೀಲ್ – 55 ಮತಗಳು
ಅಣ್ಣಾಸಾಹೇಬ ಜೊಲ್ಲೆ 16 ಮತಗಳಿಂದ ಮುನ್ನಡೆ
ಬೈಲಹೊಂಗಲ:
ವಿ.ಐ. ಪಾಟೀಲ್ – 20 ಮತಗಳು
ಮಹಾಂತೇಶ ದೊಡ್ಡಗೌಡರ – 53 ಮತಗಳು
ಮಹಾಂತೇಶ ದೊಡ್ಡಗೌಡರ 33 ಮತಗಳಿಂದ ಮುನ್ನಡೆ
ಕಿತ್ತೂರು:
ನಾನಾಸಾಹೇಬ ಪಾಟೀಲ್ – 15 ಮತಗಳು
ವಿಕ್ರಮ ಇನಾಮದಾರ – 15 ಮತಗಳು
ಭದ್ರತಾ ಕ್ರಮ ಕಠಿಣ
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಈ ನಾಲ್ಕು ಕ್ಷೇತ್ರಗಳ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲು ಅವಕಾಶ ನೀಡಲಾಗಿಲ್ಲ. ಬೆಳಗಾವಿ ನಗರದ ಬಿ.ಕೆ. ಮಾದಲ್ ಕಾಲೇಜು ಸುತ್ತಮುತ್ತ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪೊಲೀಸರು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕಟ್ಟುನಿಟ್ಟಿನ ಭದ್ರತೆ ಒದಗಿಸಿದ್ದಾರೆ.





