ಬೆಳಗಾವಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆ ಕಾಳಗ ತಾರಕಕ್ಕೇರಿದ್ದು ಸಚಿವ ಸತೀಶ್ ಜಾರಕಿಹೊಳಿಯನ್ನು ಬೆಂಬಲಿಸಿದ್ದಕ್ಕೆ ಪತಿಯನ್ನೇ ಪತ್ನಿ ಎಳೆದು ಹೊಡೆದ ಘಟನೆ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮದಿಹಳ್ಳಿ ಗ್ರಾಮದ ಪಿಕೆಪಿಎಸ್ ಸದಸ್ಯ ಮಾರುತಿ ಸನದಿ ಎಂಬಾತ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಬೆಂಬಲ ನೀಡಿದ್ದ. ಈ ಬೆನ್ನಲ್ಲೇ ಆಕ್ರೋಶಗೊಂಡ ಆತನ ಪತ್ನಿ ಸಚಿವರ ಎದುರಲ್ಲೇ ಕೊರಳ ಪಟ್ಟಿ ಹಿಡಿದು ಹೊಡೆದಿದ್ದಾಳೆ. ಈಕೆ ರಮೇಶ್ ಕತ್ತಿ ಬೆಂಬಲಿಸುವಂತೆ ಜಗಳ ಮಾಡಿದ್ದಾಳೆ.
ಘಟನೆ ನಡೆದ ಸಂದರ್ಭದಲ್ಲಿ ಕೊಂಚ ವಿಚಲಿತರಾದ ಸಚಿವ ಸತೀಶ್ ಜಾರಕಿಹೊಳಿ ಅವರು ಜಗಳ ಬಿಡಿಸುವ ಪ್ರಯತ್ನ ಮಾಡಿದ್ದಾರೆ. ಸಧ್ಯ ಹುಕ್ಕೇರಿ ತಾಲೂಕಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಸಂಸದ ರಮೇಶ್ ಕತ್ತಿ ನಡುವಿನ ಕಾಳಗ ಜೋರಾಗಿದೆ.
ಕಳೆದ ಹದಿನೈದು ದಿನಗಳ ಹಿಂದಿನಿಂದ ಮದಿಹಳ್ಳಿ ಪಿಕೆಪಿಎಸ್ ನಿಂದ ಮೂವರು ಸದಸ್ಯರನ್ನು ಹೈಜಾಕ್ ಮಾಡಿರುವ ಸತೀಶ್ ಜಾರಕಿಹೊಳಿ ಬೆಂಬಲಿಗರು ಅಜ್ಞಾತ ಸ್ಥಳದಲ್ಲಿ ಇರಿಸಿದ್ದರು.
ಹೈಜಾಕ್ ಮಾಡಿದ ಸಚಿವ ಸತೀಶ ಜಾರಕಿಹೊಳಿ ಕಳೆದ ಹದಿನೈದು ದಿನಗಳ ಹಿಂದಿನಿಂದ ಮದಿಹಳ್ಳಿ ಪಿಕೆಪಿಎಸ್ ನಿಂದ ಮೂವರು ಸದಸ್ಯರನ್ನು ಹೈಜಾಕ್ ಮಾಡಿರುವ ಸತೀಶ್ ಜಾರಕಿಹೊಳಿ ಬೆಂಬಲಿಗರು ಅಜ್ಞಾತ ಸ್ಥಳದಲ್ಲಿ ಇರಿಸಿದ್ದರು.
ಆದರೆ ಹೈಜಾಕ್ ಒಳಪಟ್ಟವರು ಮೂಲತಃ ರಮೇಶ್ ಕತ್ತಿ ಬೆಂಬಲಿಗರು. ಇದೇ ಕಾರಣಕ್ಕೆ ಮಾರುತಿ ಸನದಿಯನ್ನು ಆತನ ಪತ್ನಿ ಲಗಮವ್ವ ಸನದಿ ಸಚಿವರ ಎದುರಲ್ಲೇ ಹೊಡೆದು ರಮೇಶ್ ಕತ್ತಿ ಬೆಂಬಲಿಸುವಂತೆ ಆಗ್ರಹಿಸಿದ್ದಾಳೆ.





