ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ತಡರಾತ್ರಿ ಕತ್ತೆ ಕಿರುಬಿನ ದಾಳಿಗೆ ಎರಡು ಮೇಕೆ ಮರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.
ಗ್ರಾಮದ ಸಿದರಾಯ ಹಣಮಂತ ಗಾವಡೆ ಅವರಿಗೆ ಸೇರಿದ ಮೇಕೆ ಮರಿಗಳ ಮೇಲೆ ಕತ್ತೆ ಕಿರುಬು ದಾಳಿ ನಡೆಸಿ ಕೊಂದು ಹಾಕಿದೆಯೆಂದು ಹೇಳಲಾಗುತ್ತಿದೆ. ಬೆಳಗಿನ ಜಾವ ಈ ಘಟನೆ ಗೊತ್ತಾಗಿದ್ದು, ಗ್ರಾಮದಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದೆ.
ಸುದ್ದಿ ತಿಳಿದ ಕೂಡಲೇ ಅಥಣಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಣಿಗಳ ಮೇಲೆ ಕಂಡುಬಂದ ಗಾಯದ ಗುರುತುಗಳನ್ನು ಪರಿಶೀಲಿಸಿ, ಇದು ಕತ್ತೆ ಕಿರುಬಿನ ದಾಳಿಯೇ ಎಂಬುದನ್ನು ಪ್ರಾಥಮಿಕವಾಗಿ ದೃಢಪಡಿಸಿದ್ದಾರೆ.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಮಗನ ಅಂತ್ಯಸಂಸ್ಕಾರ ಮಾಡಲಾಗದೆ ಪರಿತಪಿಸಿದ ತಾಯಿ: ಮನಕಲಕುವ ಘಟನೆ
ಘಟನೆ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕತ್ತೆ ಕಿರುಬು ಮತ್ತೆ ದಾಳಿ ನಡೆಸಬಹುದೆಂಬ ಭೀತಿಯಲ್ಲಿ ಗ್ರಾಮಸ್ಥರು ಹಾಗೂ ಪಶುಪಾಲಕರು ಆತಂಕದಲ್ಲಿದ್ದಾರೆ. ಕತ್ತೆ ಕಿರುಬನ್ನು ಶೀಘ್ರವಾಗಿ ಸೆರೆ ಹಿಡಿದು ಗ್ರಾಮಕ್ಕೆ ರಕ್ಷಣೆ ಒದಗಿಸಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.




