ಬೆಳಗಾವಿ ನಗರದ ಜೋಷಿಮಾಳದಲ್ಲಿ ಮಂಗಳವಾರ ಮನಕಲುಕುವ ಘಟನೆ ನಡೆದಿದ್ದು. ಒಂದೇ ಕುಟುಂಬದ ನಾಲ್ವರು ಸದಸ್ಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ.
ಮೃತರನ್ನು ಸಂತೋಷ ಕುರಡೇಕರ್ (44), ಸುವರ್ಣ ಕುರಡೇಕರ್ ಮತ್ತು ಮಂಗಳಾ ಕುರಡೇಕರ್ ಎಂದು ಗುರುತಿಸಲಾಗಿದೆ. ಸುನಂದ ಕುರಡೇಕರ್ ಎಂಬವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ವಿಷ ಸೇವನೆ ನಡೆದಿದೆ. ಘಟನೆ ಕುರಿತು ಮಾಹಿತಿ ದೊರಕಿದ ತಕ್ಷಣವೇ ಶಹಾಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸುದ್ದಿ ಓದಿದ್ದಿರಾ? ಬೆಳಗಾವಿ : ಹುಲಿ ಪ್ರತ್ಯಕ್ಷ ಡಂಗೂರದ ಮೂಲಕ ಜನರಿಗೆ ಎಚ್ಚರಿಕೆ
ಈ ದುರ್ಘಟನೆಯ ನಿಖರ ಕಾರಣವೇಕೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.





