ಮಹಿಳೆಯ 30 ಗ್ರಾಂ ಚಿನ್ನದ ಮಾಂಗಲ್ಯದ ಸರ ಎಗರಿಸಿದ್ದ ಇಬ್ಬರು ಕಳ್ಳರ ಪೈಕಿ ಒಬ್ಬನನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಗಳಖೋಡ ಪಟ್ಟಣದ ರೂಪಾ ಮಹೇಶ ಖೇತಗೌಡರ ಅವರ ಮಾಂಗಲ್ಯವನ್ನು ಸಂಕೇಶ್ವರದಿಂದ ಮರಳುವಾಗ ಬೈಕ್‌ನಲ್ಲಿ ಬಂದ ಸರಗಳ್ಳರು ಕಿತ್ತುಕೊಂಡು ಪರಾರಿಯಾಗಿದ್ದರು.
ಈ ವೇಳೆ ಸಿಪಿಐ ಬಿ.ಎಸ್. ಮಂಟೂರ ಅವರ ನೇತೃತ್ವದಲ್ಲಿ ಪೊಲೀಸರು ಕ್ಷಿಪ್ರ ಚಟುವಟಿಕೆ ನಡೆಸಿ, ಗೃಹರಕ್ಷಕ ಸಿಬ್ಬಂದಿ ಕಾರ್ಯಪ್ರವತ್ತರಾಗಿಯೇ ಸಿನಿಮೀಯ ರೀತಿಯಲ್ಲಿ ಬೈಕ್ ಬೆನ್ನಟ್ಟಿದರು. ಕೊನೆಗೆ ಒಬ್ಬ ಆರೋಪಿಯನ್ನು ಬಂಧಿಸಲು ಸಾಧ್ಯವಾಯಿತು.





