ಬೆಳಗಾವಿ ಜಿಲ್ಲೆಯ ಬೈಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದ ಕೆಇಬಿಯಿಂದ ಗ್ರಾಮಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಸಂಪಗಾಂವದ ಹೆಸ್ಕಾಮ್ ಕಚೇರಿಗೆ ಘೇರಾವ್ ಹಾಕಿ ರೈತ ಸಂಘಟನೆಗಳು ಪ್ರತಿಭಟನೆ ಮಾಡಿದ್ದಾರೆ.
ಸಂಪಗಾಂವ ಕೆಇಬಿ ವ್ಯಾಪ್ತಿಯಲ್ಲಿರುವ ಚಿಕ್ಕಭಾಗೆವಾಡಿ, ಬೆನಚಿನಮರಡಿ, ಗೆದ್ಧಿರೆವನಕೊಪ್ಪ, ಮರಡಿನಾಗಲಾಪೂರ, ಸಂಪಗಾಂವ್ ಗ್ರಾಮಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಮುಂಡ ಬೀರಪ್ಪ ದೇಶನೂರ, “ಸಂಪಗಾಂವ ಗ್ರಾಮದ ಸುತ್ತಲಿನ ಗ್ರಾಮಗಳಿಗೆ ಸರಿಯಾಗಿ ವಿದ್ಯುತ್ ನಿಡುತ್ತಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೈತರ ಹಕ್ಕೊತ್ತಾಯ ಪತ್ರ ಸ್ವೀಕರಿಸಿ ಮಾತನಾಡಿದ ಹೆಸ್ಕಾಂನ ಎಇಇ ವೈಶಾಲಿ, “ರೈತರ ಸಮಸ್ಯೆ ಬಗ್ಗೆ ಅರಿತಿದ್ದೇವೆ. ನಾಳೆಯಿಂದ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮ ವಹಿಸುತ್ತೇವೆ” ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಪ್ರಕಾಶಗೌಡ ಪಾಟಿಲ್, ಮಲ್ಲಿಕಾರ್ಜುನ್ ಹುಂಬಿ, ಮಲ್ಲಿಕಾರ್ಜುನ್ ಜುಟ್ಟನವವರ, ಬಸವರಾಜ್ ಹೆಣ್ಣಿಕೇರಿ, ಅರ್ಜುನ್ ಪಡೆನವರ್, ವೆಂಕನಗೌಡ ಪಾಟೀಲ್, ಬಾಹುಬಲಿ ಅಕ್ಕಿ, ಈರಣ್ಣಗೌಡ ದೇ ಪಾಟೀಲ್, ದೇಮನಗೌಡ ಪಾಟೀಲ್, ಉದಯ್ ಚೌಗಲೇ ಇದ್ದರು.




