ಟಿ-20 ವಿಶ್ವಕಪ್ ಅನ್ನು ಭಾರತ ತಂಡ ಗೆದ್ದ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಸಂಭ್ರಮಾಚರಣೆ ನಡೆದ ವೇಳೆ ‘ಜೈ ಮಹಾರಾಷ್ಟ್ರ’ ಎಂದು ಘೋಷಣೆ ಕೂಗಿದ ಆರೋಪದಡಿ ಆರು ಮಂದಿಯ ವಿರುದ್ಧ ಖಡೇ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಭಾನುವಾರ ರಾತ್ರಿ ವಿಜಯೋತ್ಸವ ನಡೆಯುತ್ತಿದ್ದ ವೇಳೆ ಕೆಲವರು ‘ಜೈ ಮಹಾರಾಷ್ಟ್ರ’ ಎಂದು ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ. ಈ ಕುರಿತು ಬಾಪಟ್ ಗಲ್ಲಿಯ ವಿನಾಯಕ ರಜಪೂತ, ಕಂಗ್ರಾಳ ಗಲ್ಲಿಯ ಸುನಿಲ್ ಪಾಟೀಲ, ಗಣಾಚಾರಿ ಗಲ್ಲಿಯ ಶುಭಂ ಠಾಕೂರ್ ಸೇರಿದಂತೆ ಮೂವರು ಅಪರಿಚಿತರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ನಾಗರಾಜ ಲಕ್ಕಪ್ಪಗೋಳ ದೂರು ನೀಡಿದ್ದಾರೆ.
ಈ ಸುದ್ದಿ ಓದಿದ್ದಿರಾ ? ಯುವಕರ ಖಾತೆಗಳಲ್ಲಿ ಕೋಟಿ ಹಣ ವರ್ಗಾವಣೆ: ಬೆಳಗಾವಿಯಲ್ಲಿ ಸೈಬರ್ ಜಾಲ ಬಯಲು
ದೂರಿನ ಆಧಾರದಲ್ಲಿ ಖಡೇ ಬಜಾರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.




