ಬೆಳಗಾವಿ : ರಾಮದುರ್ಗದಲ್ಲಿ ನಾಳೆ ಕರ್ನಾಟಕ ಮುಸ್ಲಿಂ ಯುನಿಟಿ ಪದಾಧಿಕಾರಿಗಳ ಆಯ್ಕೆ

Date:

ಬೆಳಗಾವಿ ಜಿಲ್ಲೆಯ ರಾಮದುರ್ಗ ನಗರದಲ್ಲಿ ನಾಳೆ (30) ಬೆಳಿಗ್ಗೆ 10:30ಕ್ಕೆ ನಗರದ ಪ್ರಗತಿ ಸಭಾಭವನದಲ್ಲಿ ಕರ್ನಾಟಕ ಮುಸ್ಲಿಂ ಯುನಿಟಿ ಪದಾಧಿಕಾರಿಗಳ ಆಯ್ಕೆ ಸಮಾರಂಭ ನಡೆಯಲಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಮಹ್ಮದ್ ಶಫೀ ಬೆಣ್ಣೀ ತಿಳಿಸಿದ್ದಾರೆ.

ಸಮಾರಂಭದಲ್ಲಿ ಮುಸ್ಲಿಂ ಸಮುದಾಯದಲ್ಲಿ ದೇಶಪ್ರೇಮ, ಭಾರತದ ಸಂವಿಧಾನಕ್ಕೆ ಗೌರವ, ಸಮಾಜ ಸೇವೆ, ಯುವಕರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಹಿರಿಯರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.

ಕರ್ನಾಟಕ ಮುಸ್ಲಿಂ ಯುನಿಟಿಯ ಉದ್ದೇಶಗಳು ಮತ್ತು ಧ್ಯೇಯಗಳು:

  1. ಸ್ವಯಂಸೇವಾ ಸಂಘಟನೆಯಾಗಿ ದೇಶಸೇವೆಯಲ್ಲಿ ತೊಡಗುವುದು.
  2. ಸಮುದಾಯದಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯತೆಯನ್ನು ಪ್ರೇರೇಪಿಸುವುದು.
  3. ಸಂವಿಧಾನಕ್ಕೆ ಗೌರವ, ಹಕ್ಕುಗಳಿಗೆ ಧಕ್ಕೆ ಬಂದರೆ ಹೋರಾಟದ ಮೂಲಕ ರಕ್ಷಿಸುವುದು.
  4. ಸರ್ಕಾರದ ಅನ್ಯಾಯದ ವಿರುದ್ಧ ಶಾಂತಿಯುತ ಚಳುವಳಿ ನಡೆಸುವುದು.
  5. ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಶಾಖೆ ಸ್ಥಾಪನೆ.
  6. ಸಮುದಾಯದ ವ್ಯಕ್ತಿತ್ವ ನಿರ್ಮಾಣ ಹಾಗೂ ವಿಕಸನಕ್ಕೆ ಶ್ರಮಿಸುವುದು.
  7. ಯುವಕರ ದೈಹಿಕ ಸದೃಢತೆಗೆ ವಿವಿಧ ಚಟುವಟಿಕೆಗಳು.
  8. ಯುವಕರಲ್ಲಿ ನಾಗರಿಕ ಪ್ರಜ್ಞೆ, ಸಮಾಜಸೇವೆ, ದೇಶಭಕ್ತಿ ಬೆಳವಣಿಗೆ.
  9. ಸದಸ್ಯರಿಗೆ ಪ್ರಥಮ ಚಿಕಿತ್ಸೆ ಹಾಗೂ ಜೀವ ರಕ್ಷಣೆ ತರಬೇತಿ.
  10. ಸ್ಥಳೀಯ ಮಟ್ಟದಲ್ಲಿ ಸ್ವಚ್ಛತೆ, ಪರಿಸರ ಸಂರಕ್ಷಣೆ, ಸಸಿ ನೆಡುವಿಕೆ ಮತ್ತು ಅಭಿವೃದ್ಧಿ ಕಾರ್ಯ.
  11. ರಾಷ್ಟ್ರೀಯ ಮತ್ತು ಧಾರ್ಮಿಕ ಹಬ್ಬಗಳ ಶಾಂತಿಯುತ ಸಾರ್ವಜನಿಕ ಆಚರಣೆ.
  12. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ ಕೇಂದ್ರಗಳ ಸ್ಥಾಪನೆ.
  13. ಬಡವರು, ನಿರ್ಗತಿಕರು, ಅಂಗವೈಕಲ್ಯ ಹೊಂದಿದವರಿಗೆ ನೆರವು.
  14. ಶಿಕ್ಷಣಕ್ಕೆ ಆದ್ಯತೆ – ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಕೈಜೋಡಣೆ.
  15. ಸರ್ವಜನಾಂಗದಲ್ಲಿ ಸ್ನೇಹ, ಪ್ರೀತಿ, ಭಾತೃತ್ವ, ಸೌಹಾರ್ದತೆ ಬೆಳೆಸುವುದು.
  16. ಮಹಿಳಾ ಸಬಲೀಕರಣ – ಸ್ವಸಹಾಯ ಗುಂಪುಗಳ ರಚನೆ ಹಾಗೂ ಆರ್ಥಿಕ ಬಲವರ್ಧನೆ.
IMG 20251111 WA0000
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಮದುವೆ ನಿರಾಕರಿಸಿದ ಯುವತಿಯ ಕುಟುಂಬದ ಮೇಲೆ ಹಲ್ಲೆ ಮಾಡಿದ ಯುವಕ

ಮದುವೆ ಪ್ರಸ್ತಾವನೆ ನಿರಾಕರಿಸಿದ ವಿಚಾರವಾಗಿ ಯುವಕನೊಬ್ಬ ಯುವತಿ ಹಾಗೂ ಅವರ ಕುಟುಂಬ...

ಬೆಳಗಾವಿ | ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ₹11.06 ಕೋಟಿ ಕಾಣಿಕೆ ಸಂಗ್ರಹ

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿ...

ಬೆಳಗಾವಿ | ಆಲಿಕಲ್ಲು ಮಳೆ ಅಟ್ಟಹಾಸ: 39 ಕುರಿಗಳ ಸಾವು

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಸುತ್ತಮುತ್ತ ಮಂಗಳವಾರ ರಾತ್ರಿ ಸುರಿದ...

ಬೆಳಗಾವಿ | 15 ದಿನಗಳ ಹೆಣ್ಣು ಮಗು ಅನುಮಾನಾಸ್ಪದವಾಗಿ ಸಾವು: ತಂದೆಯ ಮೇಲೆ ವಿಷಪ್ರಾಶನ ಆರೋಪ

ಕೇವಲ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಹೆಣ್ಣು ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ...