ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಾ ಮಟ್ಟದ ಸಾಮಾನ್ಯ ಸಭೆ 7-1-2026ರಂದು ರಾಮದುರ್ಗದ ಸಾಮಾನ್ಯ ಹೌಸ್‌ನಲ್ಲಿ ನಡೆಯಿತು. ಸಭೆಯ ತೀರ್ಮಾನದಂತೆ ತಾಲೂಕು ಮಟ್ಟದ ಪದಾಧಿಕಾರಿಗಳು ಹಾಗೂ ಸದಸ್ಯರ ಬದಲಾವಣೆ ಮಾಡಿ ಹೊಸ ತಂಡವನ್ನು ಆಯ್ಕೆ ಮಾಡಲಾಯಿತು.
ತಾಲೂಕು ಅಧ್ಯಕ್ಷರಾಗಿ ಸುರೇಶ ಗುಂಜೇರಿ, ಗೌರವ ಅಧ್ಯಕ್ಷರಾಗಿ ಮಹಾದೇವ ತ್ಯಾವಟಗಿ, ಉಪಾಧ್ಯಕ್ಷರಾಗಿ ಮಂಜುನಾಥ ದೇಸಾಯಿ, ಕಾರ್ಯದರ್ಶಿಯಾಗಿ ಈರಪ್ಪ ರಾಜನಾಳ, ಸಹ ಕಾರ್ಯದರ್ಶಿಯಾಗಿ ನಾಗಪ್ಪ ಶಿ. ಮಾಯನ್ನವರ, ಖಜಾಂಚಿಯಾಗಿ ಧ್ಯಾನಕ್ಕಿಂತ ಪೊತ್ತೆನ್ನವರ, ಸಂಘಟನಾ ಕಾರ್ಯದರ್ಶಿಯಾಗಿ ಬಸವರಾಜ ಯಾದವಾಡ, ಕಾರ್ಯಾಧ್ಯಕ್ಷರಾಗಿ ಭೀಮಶಿ ಕಡ್ಡೆನ್ನವರ, ಸಹ ಖಜಾಂಚಿಯಾಗಿ ಕರಿಯಪ್ಪ ಬಸರಗಿ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಮಲ್ಲಿಕಾರ್ಜುನ ರಾಮದುರ್ಗ ಸೇರಿದಂತೆ ಅನೇಕ ರೈತ ಮುಖಂಡರು ಮಾತನಾಡಿದರು. ಹೊಸ ಪದಾಧಿಕಾರಿಗಳು ರೈತರ ಹಿತಾಸಕ್ತಿಯನ್ನು ಕಾಪಾಡುವ ಜೊತೆಗೆ ನೀರಾವರಿ ಯೋಜನೆಗಳು, ಬೆಳೆ ಸಾಲ ಮನ್ನಾ, ಭೂಸ್ವಾಧೀನ ಪರಿಹಾರ ಸೇರಿದಂತೆ ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಹೋರಾಟ ನಡೆಸುವುದಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಯಲ್ಲಪ್ಪ ದೊಡ್ಡಮನಿ, ಯಂಕಪ್ಪ ಕೆಂಚರಡ್ಡಿ, ಮಹಾಬುಬಸಾಬ ಸಂಕದಾಳ, ಮಾರುತಿ ಮಾದರ ಸೇರಿದಂತೆ ರೈತ ಸಂಘಟನೆಯ ಮುಖಂಡರು ಮತ್ತು ಸದಸ್ಯರು ಉಪಸ್ಥಿತರಿದ್ದರು.




