ಬೆಳಗಾವಿ | ಫೈನಾನ್ಸ್ ಕಂಪನಿಯಿಂದ ಮನೆ ಜಪ್ತಿಯಾಗಿದ್ದ ಕುಟುಂಬಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ನೆರವು

Date:

ಬೆಳಗಾವಿ ಜಿಲ್ಲೆಯ ವಾಗ್ವಾಡೆ ಗ್ರಾಮದಲ್ಲಿ 8 ತಿಂಗಳ ಹಿಂದೆ ಜಪ್ತಿ ಮಾಡಿದ್ದ ಮನೆಯನ್ನು ಬಿಡಿಸಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕುಟುಂಬವೊಂದಕ್ಕೆ ನೆರವಾಗಿದ್ದಾರೆ.

ಬೆಳಗಾವಿ ತಾಲೂಕಿನ ವಾಗ್ವಾಡೆ ಗ್ರಾಮದ ಸುರೇಶ ಕಾಂಬಳೆ ಎಂಬುವವರು ಫೈನಾನ್ಸ್ ವೊಂದರಲ್ಲಿ 2020ರಲ್ಲಿ 7 ಲಕ್ಷ ಸಾಲ ಪಡೆದಿದ್ದರು. ಆರ್ಥಿಕ ಸಮಸ್ಯೆಯಿಂದ 2.50ಲಕ್ಷ ಬಾಕಿ ಮರುಪಾವತಿ ಮಾಡದ ಹಿನ್ನೆಲೆ ಫೈನಾನ್ಸ್‌ ಸಿಬ್ಬಂದಿ ಮನೆ ಜಪ್ತಿ ಮಾಡಿದ್ದರು. ಕಳೆದ 8 ತಿಂಗಳ ಹಿಂದೆಯೇ ಕೋರ್ಟ್ ಆದೇಶದಂತೆ ಫೈನಾನ್ಸ್‌ನವರು ಮನೆ ಸೀಜ್ ಮಾಡಿ ಮನೆಯನ್ನ ಹರಾಜಿಗಿಟ್ಟಿದ್ದರು. ಕಳೆದ ಎರಡು ದಿನಗಳ ಹಿಂದೆ ಮನೆ ಬಿಡಿಸಿಕೊಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ಗೆ ಸುರೇಶ್‌ ಮನವಿ ಮಾಡಿದ್ದರು. ಸಚಿವರ ಸೂಚನೆಯಂತೆ ಆಪ್ತಸಹಾಯಕ ಮಹಾಂತೇಶ ಹಿರೇಮಠ ನೇತೃತ್ವದಲ್ಲಿ ಫೈನಾನ್ಸ್ ಮನವೊಲಿಸಿ ಮನೆ ಓಪನ್ ಮಾಡಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಮದುವೆ ನಿರಾಕರಿಸಿದ ಯುವತಿಯ ಕುಟುಂಬದ ಮೇಲೆ ಹಲ್ಲೆ ಮಾಡಿದ ಯುವಕ

ಮದುವೆ ಪ್ರಸ್ತಾವನೆ ನಿರಾಕರಿಸಿದ ವಿಚಾರವಾಗಿ ಯುವಕನೊಬ್ಬ ಯುವತಿ ಹಾಗೂ ಅವರ ಕುಟುಂಬ...

ಬೆಳಗಾವಿ | ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ₹11.06 ಕೋಟಿ ಕಾಣಿಕೆ ಸಂಗ್ರಹ

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿ...

ಬೆಳಗಾವಿ | ಆಲಿಕಲ್ಲು ಮಳೆ ಅಟ್ಟಹಾಸ: 39 ಕುರಿಗಳ ಸಾವು

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಸುತ್ತಮುತ್ತ ಮಂಗಳವಾರ ರಾತ್ರಿ ಸುರಿದ...

ಬೆಳಗಾವಿ | 15 ದಿನಗಳ ಹೆಣ್ಣು ಮಗು ಅನುಮಾನಾಸ್ಪದವಾಗಿ ಸಾವು: ತಂದೆಯ ಮೇಲೆ ವಿಷಪ್ರಾಶನ ಆರೋಪ

ಕೇವಲ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಹೆಣ್ಣು ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ...