ಮನೆಗೆ ನುಗ್ಗಿ ಮಹಿಳೆಯ ಮುಖಕ್ಕೆ ಖಾರದ ಪುಡಿ ಎರಚಿ ದರೋಡೆ ಮಾಡಿರುವ ಘಟನೆ ಬೆಳಗಾವಿಯ ರಾಣಿ ಚನ್ನಮ್ಮ ನಗರದಲ್ಲಿ ನಡೆದಿದೆ.
ಮುರುಗನ್ ಎನ್ನುವವರ ಮನೆಯಲ್ಲಿ ಈ ಕಳ್ಳತನವಾಗಿದೆ, ಮುರುಗನ್ ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಮನೆಗೆ ನುಗ್ಗಿದ ದರೋಡೆಕೋರ, ಅವರ ಪತ್ನಿಯ ಕಣ್ಣಿಗೆ ಖಾರದಪುಡಿ ಎರಚಿ ಕತ್ತು ಹಿಸುಕಿ ಕೊರಳಲ್ಲಿದ್ದ ಮಾಂಗಲ್ಯ, ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಕ್ರೈಮ್ ಡಿಸಿಪಿ ನಿರಂಜನ್ ಅರಸ, ಖಡೇಬಜಾರ್ ಎಸಿಪಿ ಶೇಖರಪ್ಪ, ಉದ್ಯಮಬಾಗ ಪೊಲೀಸ್ ಠಾಣೆಯ ಸಿಪಿಐ ಡಿ. ಕೆ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಉದ್ಯಮಬಾಗ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





