ಬೆಳಗಾವಿ ನಗರದ ಜೋಶಿಮಾಳದಲ್ಲಿ ಮೂರು ಜನರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಬೊರಸೆ ತಿಳಿಸಿದ್ದಾರೆ.
ಮೃತರು ಸಂತೋಷ ಕುರಡೇಕರ್, ಸುವರ್ಣ ಕುರಡೇಕರ್ ಮತ್ತು ಮಂಗಳಾ ಕುರಡೇಕರ್ ಎಂಬವರಾಗಿದ್ದು, ಅವರು ಬರೆದಿದ್ದ ಡೆತ್ ನೋಟ್‌ನಲ್ಲಿ ಉಲ್ಲೇಖಗೊಂಡಿದ್ದ ರಾಜೇಶ್ ಕುಡತರಕರ, ಭಾಸ್ಕರ್ ಸೋನಾರ್ಕರ್ ಮತ್ತು ನಾನಾಸೋ ಶಿಂಧೆ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಇನ್ನೊಬ್ಬ ಮಹಿಳೆ ಸುನಂದಾ ಕುರಡೇಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ. “ಅವರು ನೀಡಿದ ಮಾಹಿತಿಯಂತೆ, 500 ಗ್ರಾಂ ಚಿನ್ನ ರಾಜೇಶ್ ಮನೆಯಲ್ಲಿ ಇತ್ತು. ಶಹಾಪುರ ಪೊಲೀಸರು ದಾಳಿ ನಡೆಸಿದಾಗ 600 ಗ್ರಾಂ ಚಿನ್ನ ಹಾಗೂ ₹4 ಲಕ್ಷ ನಗದು ಪತ್ತೆಯಾಗಿದೆ. ತನಿಖೆ ಮುಂದುವರಿದಿದೆ,” ಎಂದು ಆಯುಕ್ತರು ಹೇಳಿದರು.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ : ಹುಲಿ ಪ್ರತ್ಯಕ್ಷ ಡಂಗೂರದ ಮೂಲಕ ಜನರಿಗೆ ಎಚ್ಚರಿಕೆ
ಪೆದೆ ಬೊರಸೆ ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಾ, “ಸಾಲ ತೆಗೆದುಕೊಳ್ಳುವ ಸಂದರ್ಭದಲ್ಲಿ ನೊಂದಾಯಿತ ಬ್ಯಾಂಕ್ ಅಥವಾ ಸಹಕಾರ ಸಂಘಗಳಿಂದಲೇ ಸಾಲ ಪಡೆಯಬೇಕು. ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದರೆ ಕಿರುಕುಳಕ್ಕೆ ಒಳಗಾಗುವ ಸಾಧ್ಯತೆಗಳಿವೆ” ಎಂದು ತಿಳಿಸಿದ್ದಾರೆ.





