ಬ್ಯಾಂಕಿಂಗ್ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ₹2 ಲಕ್ಷ ದಂಡ ವಿಧಿಸಿದೆ ಎಂದು ತಿಳಿದುಬಂದಿದೆ.
ಫೆಬ್ರವರಿ 23ರಂದು ಈ ಕುರಿತು ಆದೇಶ ಹೊರಡಿಸಲಾಗಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ-1949ರ ಸೆಕ್ಷನ್ 20 ಅನ್ನು ಸೆಕ್ಷನ್ 56ರೊಂದಿಗೆ ಓದಿದ ನಿಯಮಗಳ ಉಲ್ಲಂಘನೆ ಹಾಗೂ ‘ಗೋಲ್ಡ್ ಲೋನ್ – ಬುಲೆಟ್ ರಿಪೇಮೆಂಟ್’ ಯೋಜನೆ ಮತ್ತು ‘ವಾಣಿಜ್ಯ ರಿಯಲ್ ಎಸ್ಟೇಟ್‌ಗೆ ಎಕ್ಸ್‌ಪೋಜರ್’ ಸಂಬಂಧ ಆರ್‌ಬಿಐ ನೀಡಿದ್ದ ಮಾರ್ಗಸೂಚಿಗಳನ್ನು ಪಾಲಿಸದಿರುವುದು ದಂಡಕ್ಕೆ ಕಾರಣವಾಗಿದೆ.
ಸೆಕ್ಷನ್ 47A(1)(ಸಿ) ಅನ್ನು ಸೆಕ್ಷನ್ 46(4)(i) ಮತ್ತು 56ರೊಂದಿಗೆ ಓದಿದ ಅಧಿಕಾರದಡಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಿರ್ದೇಶಕರಿಗೆ ಸಂಬಂಧಿತ ವ್ಯಕ್ತಿಗಳಿಗೆ ಸಾಲ ಮಂಜೂರು ಮಾಡಿರುವುದು, ನಿಗದಿತ ಮಿತಿಯನ್ನು ಮೀರಿ ‘ಬುಲೆಟ್ ರಿಪೇಮೆಂಟ್’ ಯೋಜನೆಯಡಿ ಚಿನ್ನದ ಸಾಲ ನೀಡಿರುವುದು ಹಾಗೂ ವಸತಿಯೇತರ ವಾಣಿಜ್ಯ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಸಾಲ ನೀಡಿರುವುದು ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ದಂಡ ವಿಧಿಸಲಾಗಿದೆ.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಮೂರು ತಿಂಗಳ ಹಸುಗೂಸು ಸಮೇತ ಕುಟುಂಬವನ್ನು ಬೀದಿಗೆ ಹಾಕಿದ ಫೈನಾನ್ಸ್ ಕಂಪನಿ
ಈ ಕ್ರಮವು ಬ್ಯಾಂಕ್‌ನ ಹಣಕಾಸು ಸ್ಥಿತಿಗತಿಗೆ ಸಂಬಂಧಿಸಿದ ತೀರ್ಪಲ್ಲ; ನಿಯಮ ಪಾಲನೆಯಲ್ಲಿ ಕಂಡುಬಂದ ಕೊರತೆಗಳ ಹಿನ್ನೆಲೆಯಲ್ಲಿ ಕೈಗೊಂಡ ದಂಡಾತ್ಮಕ ಕ್ರಮ ಮಾತ್ರ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.





