ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪಿಹೆಚ್‌ಡಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಿನ್ನೆಲೆ ವಿಶ್ವವಿದ್ಯಾಲಯ ಆಡಳಿತ ಮಹತ್ವದ ಎರಡು ನಿರ್ಧಾರಗಳನ್ನು ಕೈಗೊಂಡಿದೆ. ಕುಲಪತಿ ಡಾ. ತ್ಯಾಗರಾಜ್ ವಾರ್ತಾಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದರು.
ವಿದ್ಯಾರ್ಥಿನಿಗೆ ಪಿಹೆಚ್‌ಡಿ ಅರ್ಹತೆ ದೃಢ
ವಿದ್ಯಾರ್ಥಿನಿ ಅಕಾಡೆಮಿಕ್ ಮಾನದಂಡಗಳನ್ನು ಪೂರೈಸಿರುವುದು ವಿಶೇಷ ಸಿಂಡಿಕೇಟ್ ಸಭೆಯಲ್ಲಿ ಪರಿಶೀಲನೆಯ ಬಳಿಕ ದೃಢಪಟ್ಟಿದೆ.
ವಿದ್ಯಾರ್ಥಿನಿ ನಿಯಮಾನುಸಾರ ಅರ್ಜಿ ಸಲ್ಲಿಸಿದರೆ ಅವರಿಗೆ ಪಿಹೆಚ್‌ಡಿ ಪದವಿ ನೀಡಲಾಗುತ್ತದೆ, ಎಂದು ಕುಲಪತಿ ತಿಳಿಸಿದರು.
ಪ್ರಾಧ್ಯಾಪಕ ಕೆ.ಎಲ್.ಎನ್. ಮೂರ್ತಿಗೆ ಕಡ್ಡಾಯ ನಿವೃತ್ತಿ
ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪ್ರಾಧ್ಯಾಪಕ ಕೆ.ಎಲ್.ಎನ್. ಮೂರ್ತಿಗೆ ಕಡ್ಡಾಯ ನಿವೃತ್ತಿ ವಿಧಿಸಲಾಗಿದೆ.
ವಿದ್ಯಾರ್ಥಿಗಳೊಂದಿಗೆ ವರ್ತಿಸುವ ಸಂಬಂಧ ವಿಶ್ವವಿದ್ಯಾಲಯದಲ್ಲಿ ಸ್ಪಷ್ಟ ಮಾರ್ಗಸೂಚಿಗಳಿವೆ. ಅವುಗಳನ್ನು ಉಲ್ಲಂಘಿಸಿದ ಕಾರಣ ಕಠಿಣ ಕ್ರಮ ಅಗತ್ಯವಾಯಿತು, ಎಂದು ಕುಲಪತಿ ತ್ಯಾಗರಾಜ್ ಹೇಳಿದರು.
ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ಸುಧಾರಿತ ಅಕಾಡೆಮಿಕ್ ವಾತಾವರಣಕ್ಕಾಗಿ ವಿಶ್ವವಿದ್ಯಾಲಯ ಬದ್ಧವಾಗಿದೆ ಎಂದು ಅವರು ತಿಳಿಸಿದರು.





