ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ಕ್ಷೇತ್ರವು ದೇವಸ್ಥಾನ ಪ್ರಾಧಿಕಾರ, ಯುಜಿಡಿ, ನಗರಸಭೆ, ಮನೆ ಮನೆಗೆ ಕುಡಿಯುವ ನೀರು ಸೇರಿದಂತೆ ಹತ್ತು ಹಲವು ಮೂಲಭೂತ ಸೌಲಭ್ಯಗಳೊಂದಿಗೆ ಅಭಿವೃದ್ಧಿಯತ್ತ ವೇಗವಾಗಿ ಮುನ್ನಡೆಯುತ್ತಿದ್ದು, ಇತಿಹಾಸ ಪುಟದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಹ ಪ್ರಗತಿ ಕಂಡಿದೆ ಎಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.
ನಗರದ ಎಸ್.ಕೆ. ಹೈಸ್ಕೂಲ್ ಮೈದಾನದಲ್ಲಿ ಸೋಮವಾರ ಜರುಗಿದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
₹213 ಕೋಟಿ ಅನುದಾನದ ಯಲ್ಲಮ್ಮ ದೇವಸ್ಥಾನದ ವಿವಿಧ ಕಾಮಗಾರಿಗಳಿಗೆ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೂಮಿಪೂಜೆ ನೆರವೇರಿಸಲಿದ್ದಾರೆ. ಕ್ಷೇತ್ರಕ್ಕೆ ಪ್ರತ್ಯೇಕ ಆರ್‌ಟಿಒ ಕಚೇರಿ, ಯರಗಟ್ಟಿಗೆ ಪೊಲೀಸ್ ಠಾಣೆ, ₹41 ಕೋಟಿ ವೆಚ್ಚದಲ್ಲಿ ನೂರು ಹಾಸಿಗೆಯ ಸೌಲಭ್ಯವಿರುವ ಸುಸಜ್ಜಿತ ತಾಲ್ಲೂಕು ಆಸ್ಪತ್ರೆ ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸವ`ಗಾಯ ಆಸ್ಪತ್ರೆಗಳನ್ನಾಗಿಸುವುದು a V ಅಗತ್ಯ ಸ್ಥಳಗಳಲ್ಲಿ ಹೊಸ ಪಿಎಚ್‌ಸಿಗಳನ್ನು ತೆರೆಯುವ ಯೋಜನೆಗಳಿವೆ ಎಂದು ಹೇಳಿದರು.
ಸವದತ್ತಿಯ ಉಪವಿದ್ಯುತ್ ಕೇಂದ್ರವನ್ನು ಹೆಸ್ಕಾಂ ವಿಭಾಗವಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.
ತಹಶೀಲ್ದಾರ ಎಂ.ಎನ್. ಹೆಗ್ಗನ್ನವರ, ಬಿಇಒ ಎ.ಎ. ಖಾಜಿ ಮಾತನಾಡಿದರು. ಪಿಎಸ್‌ಐ ಲಕ್ಷ್ಮಣ ಗೋಡಿ ನೇತೃತ್ವದಲ್ಲಿ ಪೊಲೀಸ್, ಗೃಹರಕ್ಷಕದಳ, ಎನ್‌ಸಿಸಿ, ಸೌಟ್ಸ್ ಮತ್ತು ಗೈಡ್ಸ್ ದಳಗಳಿಂದ ಶಾಸಕ ವಿಶ್ವಾಸ್ ವೈದ್ಯ ಗೌರವ ರಕ್ಷೆ ಸ್ವೀಕರಿಸಿದರು.
ವಿವಿಧ ಶಾಲೆಗಳ ವಿದ್ಯಾರ್ಥಿಗಳು ದೇಶಾಭಿಮಾನದ ರೂಪಕಗಳನ್ನು ಪ್ರದರ್ಶಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ₹50 ಸಾವಿರ ನಗದು ನೀಡಿ ಸನ್ಮಾನಿಸಲಾಯಿತು. ಕೃಷಿ, ಕುಸ್ತಿ, ಕರಾಟೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು.
ಅಶ್ವಥ್ ವೈದ್ಯ, ಪೌರಾಯುಕ್ತ ಸಂಗನಬಸಯ್ಯ, ಪಿಐ ಸುರೇಶ್ ಬೆಂಡೆಗುಂಬಳ, ಇಒ ಆನಂದ ಬಡಕುಂದ್ರಿ, ಶಿವಕುಮಾರ ರಾಠೋಡ, ಜಗದೀಶ ಶಿರಸಂಗಿ, ಪ್ರವೀಣ ರಾಮಪ್ಪನವರ, ಶಿವಾನಂದ ಪಟ್ಟಣಶೆಟ್ಟಿ, ಕ| `ಜೇರ, ಕಿರಣ ಕುರಿ ಉಪಸ್ಥಿತರಿದ್ದರು.




