ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ವಿಫಲವಾಗಿರುವ ಪುರಸಭೆಯ ನಿರ್ಲಕ್ಷ್ಯ ಮತ್ತೊಮ್ಮೆ ಜನರ ಜೀವಕ್ಕೆ ಅಪಾಯ ತಂದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಒಂದೇ ದಿನದಲ್ಲಿ ಒಂದೇ ಬೀದಿನಾಯಿ ಮಕ್ಕಳು ಸೇರಿದಂತೆ ಏಳು ಜನರಿಗೆ ಕಚ್ಚಿದ ಘಟನೆ ನಡೆದಿದೆ.
ಪಟ್ಟಣದ ಎಂಜಿ ಹೌಸಿಂಗ್ ಕಾಲೋನಿಯಲ್ಲಿ ಕಿರಾಣಿ ಅಂಗಡಿಗೆ ತೆರಳಿ ಮರಳುತ್ತಿದ್ದ ಬಾಲಕಿಯ ಮೇಲೆ ನಾಯಿ ಏಕಾಏಕಿ ದಾಳಿ ನಡೆಸಿದ್ದು, ಬಳಿಕ ಅಕ್ಕಪಕ್ಕದ ಓಣಿಗಳಲ್ಲಿ ಇನ್ನೂ ಆರು ಮಂದಿಯ ಮೇಲೂ ದಾಳಿ ಮುಂದುವರಿಸಿದೆ. ದಾಳಿಯಿಂದ ತಲೆ, ಕೈ, ಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೊಂದೆಡೆ ಕೆ.ಸಿ. ನಗರ, ಇಂದಿರಾ ನಗರ ಸೇರಿದಂತೆ ಪಟ್ಟಣದ ವಿವಿಧ ಗಲ್ಲಿಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಬೀದಿನಾಯಿಗಳ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ
ಈ ಸುದ್ದಿ ಓದಿದ್ದಿರಾ ? ಜೇನುಗೂಡುಗಳ ಹಿಂದೆ ಅಲೆದಾಡುವ ಅಲೆಮಾರಿಗಳು: ಅಡವಿ ಶಿಕಾರಿ ಸಮುದಾಯದ ಹೋರಾಟದ ಬದುಕು
ಒಂದೇ ವರ್ಷದಲ್ಲಿ 10 ಜನ ಬೀದಿ ನಾಯಿಗಳಿಂದ ಪ್ರಾಣ ಕಳೆದುಕೊಂಡಿದ್ದಾರೆ.





