ಬೆಳಗಾವಿ ನಗರದ ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ದುರಂತ ಸಂಭವಿಸಿ ಒಬ್ಬ ಯುವಕ ಪ್ರಾಣ ಕಳೆದುಕೊಂಡಿದ್ದಾನೆ.
ವಡ್ಡರವಾಡಿ ನಿವಾಸಿ ರಾಹುಲ್ ಬ್ಯಾಕವಾಡಕರ್ (33) ಬೃಹತ್ ಗಣೇಶ ಮೂರ್ತಿಯನ್ನು ಜಕ್ಕೇರಿ ಹೊಂಡದಲ್ಲಿ ವಿಸರ್ಜನೆ ಮಾಡಲು ಸಿದ್ದಪಡಿಸುವಾಗ ನೀರಿಗೆ ಬಿದ್ದು ದುರ್ಮರಣ ಹೊಂದಿದ್ದಾರೆ. ಮೂರ್ತಿಯ ಜೊತೆಗೆ ನೀರಿಗೆ ಬಿದ್ದ ಅವರನ್ನು ಜತೆಯಲ್ಲಿದ್ದವರು ತಕ್ಷಣವೇ ಎತ್ತಿ ಹೊರತೆಗೆದರೂ, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.





