ದಾವಣಗೆರೆ | ಚಿರತೆ ದಾಳಿ, ಆಹಾರಕ್ಕಾಗಿ ಕುರಿಗಳ ಮಾರಣಹೋಮ; 27 ಕುರಿ ಬಲಿ

Date:

ಕುರಿ ಹಿಂಡಿನ ಮೇಲೆ ಚಿರತೆ ರಾತ್ರಿ ದಾಳಿ ನಡೆಸಿ 27ಕ್ಕೂ ಹೆಚ್ಚು ಕುರಿಗಳು ಚಿರತೆ ದಾಳಿಗೆ ಬಲಿಯಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಚಿರತೆ ತನ್ನ ಆಹಾರಕ್ಕಾಗಿ ಮಾರಣಹೋಮ ನೆಡೆಸಿದೆ. ಘಟನೆಯು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹೊಳೆಸಿರಿಗೆರೆ ಕ್ರಾಸ್ ಬಳಿ ನಂದಿಗುಡಿ ರಸ್ತೆಯ ತೋಟವೊಂದರಲ್ಲಿ ಜರುಗಿದೆ.‌

ಹರಿಹರ ತಾಲ್ಲೂಕಿನ ಹೊಳೆಸಿರಿಗೆರೆ ಕ್ರಾಸ್ ಬಳಿಯ ಸ್ಥಳೀಯರೊಬ್ಬರ ಅಡಿಕೆ ತೋಟದಲ್ಲಿ ಬೀಡುಬಿಟ್ಟಿದ್ದ ಉತ್ತರ ಕರ್ನಾಟಕದಿಂದ ಆಹಾರಕ್ಕಾಗಿ ವಲಸೆ ಬಂದ ಕುರಿ ಹಿಂಡಿನ ಮೇಲೆ ಮಂಗಳವಾರ ತಡರಾತ್ರಿ ಚಿರತೆಯೊಂದು ದಾಳಿ ನಡೆಸಿದೆ. ದಾಳಿಯ ಪರಿಣಾಮವಾಗಿ 27 ಕುರಿ ತೀವ್ರ ಗಾಯಗೊಂಡು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

1002454526
Oplus_131072

ಕುರಿಗಳು ಚಿಕ್ಕೋಡಿ ತಾಲ್ಲೂಕಿನ ಸದಲಗ ಗ್ರಾಮದ ಸೋಮಣ್ಣ ಅವರಿಗೆ ಸೇರಿದ್ದು. ಹೊಳೆಸಿರಿಗೆರೆ ಕ್ರಾಸ್ ಸಮೀಪದ ನಂದಿಗುಡಿ, ಯಲವಟ್ಟಿ ರಸ್ತೆಯ ತೋಟವೊಂದರಲ್ಲಿ ಕುರಿಗಳೊಂದಿಗೆ ಬೀಡುಬಿಟ್ಟಿದ್ದು, ತಡರಾತ್ರಿ ದಾಳಿಗೆ ಒಳಗಾಗಿವೆ. ಕುರಿಗಳು ಎಲ್ಲೆಂದರಲ್ಲಿ ಸತ್ತು ಬಿದ್ದಿವೆ. ಮಾಲೀಕರಿಗೆ 3-4 ಲಕ್ಷದಷ್ಟು ನಷ್ಟ ಸಂಭವಿಸಿದೆ ಎನ್ನಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸ್ಥಳೀಯರೊಬ್ಬರು ಮಾಹಿತಿ ನೀಡಿ “ಶಿವಮೊಗ್ಗ, ಹೊನ್ನಾಳಿಗೆ ಹೋಗುವ ರಾಜ್ಯ ಹೆದ್ದಾರಿಯ ಮಲೆಬೆನ್ನೂರು ಬಳಿಯ ಬೆಟ್ಟ ಗುಡ್ಡಗಳ ಮಧ್ಯದಿಂದ ಚಿರತೆಗಳು ಆಹಾರಕ್ಕಾಗಿ ಅಡ್ಡಾಡುತ್ತವೆ. ಕೆಲವೊಮ್ಮೆ ರಸ್ತೆಯ ಬದಿಯಲ್ಲಿ ವಾಹನ ಸವಾರರಿಗೆ ಕಾಣಿಸಿಕೊಂಡ ಉದಾಹರಣೆಗಳಿವೆ. ಕುರಿ ಹಿಂಡಿನ ಜಾಡು ಹಿಡಿದು ಚಿರತೆ ದಾಳಿ ಮಾಡಿರಬಹುದು” ಎಂದು ಅಭಿಪ್ರಾಯಪಟ್ಟರು.

1002454541

ಬಳ್ಳಾರಿ, ಬೆಳಗಾವಿ, ವಿಜಯಪುರ, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಿಂದ ಪ್ರತಿ ವರ್ಷ ಕುರಿಗಾಹಿಗಳು ಹಿಂಡು ಹಿಂಡಾಗಿ ಕುರಿಗಳನ್ನು ಆಹಾರಕ್ಕಾಗಿ ವಲಸೆ ಕರೆದುಕೊಂಡು ಹೋಗುತ್ತಾರೆ. ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ನೀರಾವರಿ, ಮಲೆನಾಡಿನ ಪರಿಸರದಲ್ಲಿ ಕುರಿಗಳಿಗೆ ಆಹಾರಕ್ಕಾಗಿ ಬೇಕಾಗುವ ಮೇವು, ಹಸಿರು ಹುಲ್ಲುಗಾವಲು, ಮತ್ತು ನೀರಿನ ಮೂಲಗಳು ಸಾಕಷ್ಟು ಸಿಗುವುದರಿಂದ, ತೋಟಗಳಲ್ಲಿ ಹಸಿರು ಮೇವು ದೊರೆಯುವ ಈ ಭಾಗಗಳಲ್ಲಿ ಹೆಚ್ಚು ಹೆಚ್ಚಾಗಿ ತೋಟಗಳಲ್ಲಿ ಕುರಿ ಉಳಿಸಿಕೊಂಡು ಬೀಡು ಹಾಕುತ್ತಾರೆ. ಇದರಿಂದಾಗಿ ತೋಟಗಳಿಗೆ ಪಶುಗೊಬ್ಬರ ಕೂಡ ದೊರೆತಂತಾಗುತ್ತದೆ. ತೋಟದ ಮಾಲೀಕರು ಕೂಡ ಒಪ್ಪಂದದ ಮೂಲಕ ಅಲ್ಪಸ್ವಲ್ಪ ಹಣ ನೀಡುತ್ತಾರೆ.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಆಹಾರದಲ್ಲಿ ಹುಳುಪತ್ತೆ: ಶಿಸ್ತು ಕ್ರಮಕ್ಕೆ ದಸಂಸ ಆಗ್ರಹ

ಚಿರತೆ ಕುರಿಗಳ ಮೇಲೆ ದಾಳಿ ನೆಡೆಸಿದ ಮಾಹಿತಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದೆ.‌ ಅಲ್ಲದೇ ಚಿರತೆ ಸೆರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...