ವಚನಸಂದೇಶ ಹಾಗೂ ಪರಿಸರ ಜಾಗೃತಿಯ ಉದ್ದೇಶದೊಂದಿಗೆ ಉಳವಿಗೆ ಪಾದಯಾತ್ರೆ ಅನ್ನು ದಿನಾಂಕ 18-01-2026 ថ ៥ 6.00 3 ಆಯೋಜಿಸಲಾಗಿದೆ. ಪಾದಯಾತ್ರೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕು ಬಸವಯೋಗ ಮಂಟಪ, ಬಳೋಬಾಳದಿಂದ ಪ್ರಾರಂಭವಾಗಲಿದೆ.
ಈ ಸಂದರ್ಭದಲ್ಲಿ ಶ್ರೀ ಉಳವಿ ಚನ್ನಬಸವೇಶ್ವರ ಮಹಾಮನೆ ದಾಸೋಹ ಸಮಿತಿ ವತಿಯಿಂದ ಮಹಾಮನೆಯಲ್ಲಿ 31-01-2026ರಿಂದ 03-02-2026 ರವರೆಗೆ ಅನ್ನದಾಸೋಹ ಹಾಗೂ ಜ್ಞಾನದಾಸೋಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಪಾದಯಾತ್ರೆಯಲ್ಲಿ ಬಸವಯೋಗ ಮಂಟಪ ಬಳೋಬಾಳ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಬೆಳಗಾವಿ ಘಟಕ, ಶ್ರೀ ಕುಂಪಿ ಬಸವೇಶ್ವರ ಪಾದಯಾತ್ರಾ ಸಮಿತಿ, ಬೆಣಚಿನಮರಡಿ ಗ್ರಾಮದ ಸದಸ್ಯರು ಹಾಗೂ ಮುಖಂಡರು ಭಾಗವಹಿಸಲಿದ್ದಾರೆ ಎಂದು ಉಳವಿ ಪಾದಯಾತ್ರೆ ‘ಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




