ಬೆಳಗಾವಿ | ದೌರ್ಜನ್ಯಕ್ಕೊಳಗಾದ ಬಡ ಅಂಗನವಾಡಿ ಸಹಾಯಕಿಗೆ ಬೇಕು ನೆರವು

Date:

ಮಕ್ಕಳು ಹೂವು ಕಿತ್ತರು ಎಂಬ ಕಾರಣಕ್ಕೆ ಜಮೀನಿನ ಮಾಲೀಕ ಆಂಗನವಾಡಿ ಸಹಾಯಕಿ ಸುಗಂಧಾ ಗಜನಾನ ಮೋರೆಯವರ ಮೂಗು ಕೊಯ್ದಿರುವ ಘಟನೆ ಬೆಳಗಾವಿಯ ಬಸುರ್ತೆಯಲ್ಲಿ ನಡೆದಿದೆ. ದುರ್ಘಟನೆಯಲ್ಲಿ ದೌರ್ಜನ್ಯಕೊಳಗಾಗಿರುವ ಸಹಾಯಕಿ ಜೀವನ್ಮರನದ ಹೋರಾಟ ನಡೆಸುತ್ತಿದ್ದಾರೆ. ಅವರ ಚಿಕಿತ್ಸೆಗಾಗಿ ಸರ್ಕಾರ ಮತ್ತು ಸಂಘಸಂಸ್ಥೆಗಳು ನೆರವು ನೀಡಬೇಕೆಂದು ಅವರ ಕುಟುಂಬಸ್ಥರು ಅಂಗಲಾಚಿದ್ದಾರೆ.

ಬಸುರ್ತೆ ಗ್ರಾಮದಲ್ಲಿ ಸೋಮವಾರ ಅಂಗನವಾಡಿ ಮಕ್ಕಳು ತಮ್ಮ ಮನೆಯ ಆವರಣದಲ್ಲಿ ಹೂವುಗಳನ್ನು ಕಿತ್ತಿದ್ದಾರೆ ಎಂಬ ಕಾರಣಕ್ಕೆ ಮನೆಯ ಮಾಲಿಕ ಕಲ್ಯಾಣಿ ಮೋರೆ ಎಂಬಾತ ಮಕ್ಕಳನ್ನು ಹೊಡೆಯಲು ಹೋಗಿದ್ದರು. ಆ ವೇಳೆ, ಅಂಡನವಾಡಿ ಸಹಾಯಕಿ ಸುಗಂಧಾ ಅವರು ಮಾಲೀಕನನ್ನು ತಡೆದಿದ್ದರು. ಇದರಿಂದ ವಿಚಲಿತನಾದ ದುಷ್ಟ ಕುಲ್ಯಾಣಿ ಮೊರೆ ಕುಡುಗೋಲಿನಿಂದ ಆಕೆಯ ಮೂಗನ್ನು ಕೊಯ್ದಿದ್ದನು. ಘಟನೆಯಲ್ಲಿ ಗಂಭೀರ ಗಾಯಗೊಂಡ ಸುಗಂಧಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂಗು ಕೊಯ್ದಿರುವುದರಿಂದ ಶ್ವಾಸನಾಳಕ್ಕೆ ರಕ್ತ ಹೋಗಿದ್ದು, ಆಕೆ ಸಾವು ಬದುಕಿನ ಮಧ್ಯೆ ಹೊರಾಡುತ್ತಿದ್ದಾರೆ. ಆಕೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಚಿಕಿತ್ಸೆ ಮತ್ತು ಆಸ್ಪತ್ರೆ ವೆಚ್ಚದ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಸಂತ್ರಸ್ತೆಯ ಸಹೋದರಿ ಯಲ್ಲು ಪಾಟಿಲ್, “ನಾವು ಬಡವರು. ದುಡಿಯದಿದ್ದರೆ ಹೊಟ್ಟೆ ತುಂಬುವದಿಲ್ಲ. ಅಂಗನವಾಡಿ ಸಹಾಕಿಯಾಗಿ ಕೆಲಸ ಮಾಡುತ್ತಿರುವ ನಮ್ಮ ಸಹೋದರಿಯ ದುಡಿಮೆಯಿಂದಲೇ ಇಡಿ ಕುಟುಂಬ ಬದುಕುತ್ತಿದೆ. ಒಂದು ವೇಳೆ ಅವರು ಅಂಗನವಾಡಿಗೆ ಹೋಗದಿದ್ದರೆ ಜೀವನ ನಡೆಯುವದಿಲ್ಲ” ಎಂದಿದ್ದಾರೆ.

“ಸುಗಂಧಾ ಅವರ ಪತಿಗೆ ಮಾತು ಬರುವದಿಲ್ಲ. ನಮ್ಮ ಬದುಕು ತೊಂದರೆಯಲ್ಲಿದೆ. ಚಿಕಿತ್ಸೆ ನೀಡುತ್ತಿರುವ ವೈದ್ಯರು ಬದುಕುವುದು ಕಷ್ಟವಿದೆ, ಬದುಕಿಸಲು ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ನಮ್ಮಂತಹ ಬಡವರು ಬದಕುವುದು ಹೇಗೆ? ನಮ್ಮ ಸಹೋದರಿಯ ಮೇಲೆ ಹಲ್ಲೆ ಮಾಡಿರುವ ಆರೋಪಿಗೆ ಶಿಕ್ಷೆಯಾಗಬೇಕು ಮತ್ತು ನಮ್ಮ ಬಡ ಕುಟುಂಬಕ್ಕೆ ಸರ್ಕಾರ ಮತ್ತು ಸಂಘಸಂಸ್ಥೆಗಳು ಸಹಾಯ ಮಾಡಬೇಕು” ಎಂದು ಕಣ್ಣಿರು ಹಾಕಿದರು.

ಅಂಗನವಾಡಿಯ ಶಿಕ್ಷಕಿ ಮೀರಾ ಬಾಲಕೃಷ್ಣ ಮೋರೆ ಮಾತನಾಡಿ, “ನಾನು ಮಕ್ಕಳನ್ನು ಆಟವಾಡಿಸುತ್ತಿದ್ದಾಗ, ಕೆಲವು ಮಕ್ಕಳನ್ನು ಸುಗಂಧಾ ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದರು. ಆ ಮಕ್ಕಳು 2 ಹೂವುಗಳನ್ನು ಕಿತ್ತಿದ್ದಾರೆ. ಕಾರಣಕ್ಕೆ ಮಾಲೀಕ ಮಕ್ಕಳು ಮತ್ತು ಆಕೆಯ ಮೇಲೆ ಹಲ್ಲೆ ಮಾಡಿ, ಆಕೆಯ ಮೂಗು ಕೊಯ್ದಿದ್ದಾನೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್‌ ಕೂಡ ಸಿಗಲಿಲ್ಲ. ಹಾಲಿನ ವಾಹನದಲ್ಲಿ ಆಸ್ಪತ್ರೆಗೆ ಕರೆತಂದು ಸೇರಿಸಿದ್ದೇವೆ. ಸಂತ್ರಸ್ತೆಯ ಕುಟುಂಬದ ಬಳಿ ಹಣವಿಲ್ಲ. ಆಸ್ಪತ್ರೆ ಖರ್ಚಿಗೆ ಒಂದಷ್ಟು ಹಣವನ್ನು ಬೇರೆಯವರಿಂದ ಹೊಂದಿಸಿ ಕೊಟ್ಟಿದ್ದೇವೆ. ಅವರಿಗೆ ಹಣದ ನೆರವಿನ ಅಗತ್ಯವಿದೆ” ಎಂದು ಹೇಳಿದ್ದಾರೆ.

ಸಿಐಟಿಯು ತಾಲೂಕು ಅಧ್ಯಕ್ಷೆ ಮಂದಾ ನೇವಗಿ ಈದಿನ.ಕಾಮ್ ಜೊತೆ ಮಾತನಾಡಿ, “ಅಂಗನವಾಡಿ ಸಹಾಯಕಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಜಿಲ್ಲೆಯಲ್ಲೇ ಈ ರೀತಿ ಪದೇ ಪದೇ ಮಹಿಳೆಯರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ?: ಬೆಳಗಾವಿಯಲ್ಲಿ ಮತ್ತೊಂದು ಅಮಾನುಷ ಘಟನೆ; ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ – ಆರೋಪ

“ಅಂಗವಾಡಿ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪೋನಿನ ಮೂಲಕ ವಿಷಯ ತಿಳಿದುಕೊಂಡಿದ್ದಾರೆ. ಅದು ವೈಯಕ್ತಿಕ ಜಗಳ ಎಂದಿದ್ದಾರೆ. ಆದರೆ, ಇದು ವೈಯಕ್ತಿಕ ಜಗಳ ಹೇಗೆ ಆಗುತ್ತದೆ. ಅಂಗನವಾಡಿಯಲ್ಲಿ ಇದ್ದಾಗ ಮಕ್ಕಳ ಕಾರಣಕ್ಕೆ ಜಗಳ ನಡೆದು ದೌರ್ಜನ್ಯ ನಡೆದಿದೆ/ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಸಂಪೂರ್ಣ ಖರ್ಚನ್ನು ಭರಿಸಬೇಕು. ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು. ಘಟನೆ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಸಂತ್ರಸ್ತೆಗೆ ನೆರವು ನೀಡಬಯಸುವವರು “ಹೆಸರು:ಗಜಾನನ ನಾರಾಯಣ‌ ಮೋರೆ, A/C NO:89050231798, IFSC CODE – KVGB0002212, ಕರ್ನಾಟಕ ಗ್ರಾಮಿಣ ವಿಕಾಸ ಗ್ರಾಮಿಣ ಬ್ಯಾಂಕ್” ಖಾತೆಗೆ ಹಣ ಜಮೆ ಮಾಡಬಹುದು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...