ಪ್ರತಿಷ್ಠಿತ ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿ (KLE)ಯನ್ನು ನಾಲ್ಕು ದಶಕಗಳ ಕಾಲ ಮುನ್ನಡೆಸಿ ಸಂಸ್ಥೆಗೆ ಜಾಗತಿಕ ಮನ್ನಣೆ ತಂದುಕೊಟ್ಟ ಡಾ. ಪ್ರಭಾಕರ ಕೋರೆ ಅವರು ಚೇರಮನ್ ಹುದ್ದೆಯಿಂದ ಹಿಂದೆ ಸರಿದಿದ್ದಾರೆ.
ಗುರುವಾರ ರಾತ್ರಿ ನಡೆದ ಬೆಳವಣಿಗೆಯಲ್ಲಿ ತಮ್ಮ ನಾಮಪತ್ರವನ್ನು ಹಿಂಪಡೆಯುವ ಮೂಲಕ 1985ರಿಂದ ನಿರಂತರವಾಗಿ ಅಲಂಕರಿಸಿದ್ದ ಪ್ರತಿಷ್ಠಿತ ಸ್ಥಾನವನ್ನು ತ್ಯಜಿಸಿದ್ದಾರೆ. ಡಾ. ಕೋರೆ ಅವರ ನಿರ್ಧಾರದಿಂದಾಗಿ KLE ನಿರ್ದೇಶಕ ಮಂಡಳಿಗೆ 12 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ನಿರ್ದೇಶಕ ಮಂಡಳಿಯಲ್ಲಿ ಕೋರೆಯವರ ಪುತ್ರಿ ಡಾ. ಪ್ರೀತಿ ದೊಡವಾಡ ಹಾಗೂ ಪುತ್ರ ಅಮಿತ್ ಕೋರೆ ಮುಂದುವರಿದಿದ್ದಾರೆ.
ಮಹಾಂತೇಶ ಕೌಜಲಗಿ ಅಧ್ಯಕ್ಷರಾಗಿ, ಬಸವರಾಜ ತಟವಟಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅಮಿತ್ ಕೋರೆ, ಪ್ರವೀಣ ಬಾಗೇವಾಡಿ, ಡಾ. ಪ್ರೀತಿ ದೊಡವಾಡ, ಮಹಾಂತೇಶ ಕವಟಗಿಮಠ, ಮಲ್ಲಿಕಾರ್ಜುನ ಕೊಳ್ಳಿ, ವಿಜಯ ಮೆಟಗುಡ್, ಜಯಾನಂದ ಮುನವಳ್ಳಿ, ಮಂಜುನಾಥ ಮುನವಳ್ಳಿ, ಬಸವರಾಜ ಪಾಟೀಲ, ವಿಶ್ವನಾಥ ಪಾಟೀಲ, ಯಲ್ಲನಗೌಡ ಪಾಟೀಲ ಹಾಗೂ ಅನಿಲ ಪಟ್ಟೇದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.




