ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಕೇಂದ್ರ ಬಜೆಟ್ ಕರ್ನಾಟಕ ವಿರೋಧಿ ಬಜೆಟ್ ಆಗಿದ್ದು, ರೈತರು, ಯುವಕರು ಮತ್ತು ಉದ್ಯೋಗ ಸೃಷ್ಟಿಗೆ ಯಾವುದೇ ನೈಜ ಸ್ಪಂದನೆ ನೀಡಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಕಟುವಾಗಿ ಟೀಕಿಸಿದ್ದಾರೆ.
ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಘೋಷಿಸಲಾದ 5,300 ಕೋಟಿ ರೂ. ಅನುದಾನವನ್ನು ವರ್ಷಗಳಿಂದ ತಡೆದು ಇಟ್ಟು, ಈ ಬಾರಿಯೂ ಬಜೆಟ್‌ನಲ್ಲಿ ಉದ್ದೇಶಪೂರ್ವಕವಾಗಿ ಮೌನ ವಹಿಸಲಾಗಿದೆ. ಇದು ಉತ್ತರ ಭಾರತ ಕೇಂದ್ರೀಕೃತ ರಾಜಕಾರಣದ ಫಲಿತಾಂಶ ಎಂದು ಅವರು ಆರೋಪಿಸಿದರು.
15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ 11,495 ಕೋಟಿ ರೂ. ಅನುದಾನ ಬಿಡುಗಡೆಗೆ ಕೇಂದ್ರ ಸರ್ಕಾರ ಸ್ಪಷ್ಟ ನಿರ್ಲಕ್ಷ್ಯ ತೋರಿದೆ. ಈಗಾಗಲೇ 16ನೇ ಹಣಕಾಸು ಆಯೋಗದ ಪ್ರಕ್ರಿಯೆ ಆರಂಭವಾಗಿರುವುದರಿಂದ ಈ ಹಣ ರಾಜ್ಯಕ್ಕೆ ಸಿಗುವುದೇ ಎಂಬುದು ಗಂಭೀರ ಸಂಶಯವಾಗಿದೆ ಎಂದು ಹೇಳಿದರು.

ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಬೈಕ್ ಡಿಕ್ಕಿ: ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿ ಸಾವು
ನೀರಾವರಿ, ಮೆಟ್ರೋ, ರೈಲ್ವೆ ಸೇರಿದಂತೆ ಕರ್ನಾಟಕದ ಮೂಲಸೌಕರ್ಯ ಯೋಜನೆಗಳಿಗೆ ಒಂದು ರೂಪಾಯಿ ಹೆಚ್ಚುವರಿ ಅನುದಾನವೂ ಘೋಷಿಸಿಲ್ಲ. ಮಧ್ಯಮ ವರ್ಗದ ತೆರಿಗೆದಾರರಿಗೆ ತೆರಿಗೆ ವಿನಾಯಿತಿ ಕೇವಲ ಘೋಷಣೆಯಲ್ಲೇ ಉಳಿದಿದ್ದು, ಈ ಬಜೆಟ್ ಜನವಿರೋಧಿ ಮತ್ತು ರಾಜ್ಯ ವಿರೋಧಿ ಎಂದು ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.