ಬೆಳಗಾವಿ | ಸಾಲ ಕಟ್ಟದ್ದಕ್ಕೆ ಹಸುಗೂಸು-ಬಾಣಂತಿಯನ್ನು ಮನೆಯಿಂದ ಹೊರ ಹಾಕಿದ ಫೈನಾನ್ಸ್ ಕಂಪೆನಿ

Date:

''ನಮ್ಮ ಮಗಳು ಬಾಣಂತನಕ್ಕೆ ಮನೆಗೆ ಬಂದಿದ್ಲು, ಆಕೆಯ ಆರೈಕೆ ಹಾಗೂ ಆಸ್ಪತ್ರೆಗೆ ತೋರಿಸುವ ಸಲುವಾಗಿ 3 ತಿಂಗಳ ಕಂತು ಬಾಕಿಯಿತ್ತು. ಆಕೆಗೆ ಹೆರಿಗೆಯಾಗಿ, 45 ದಿನಗಳ ಆಕೆಯ ಹಸುಗೂಸು ಇದೆ. ಮಗು-ಬಾಣಂತಿ ಬೆಚ್ಚಗಿರಬೇಕಾಗಿದೆ. ಇಂತಹ ಸಮಯದಲ್ಲಿ ನಮ್ಮ ಮನೆಗೆ ಫೈನಾನ್ಸಿನವರು ಪೊಲೀಸರನ್ನು ಕರೆದುಕೊಂಡು ಬಂದು, ನಮ್ಮ ಏಕೈಕ ಆಶ್ರಯವಾಗಿದ್ದ ಮನೆಯನ್ನು ಸೀಜ಼್ ಮಾಡಿದ್ದಾರೆ. ಹೊರಹಾಕಿದ್ದಾರೆ. ಚಳಿಯಲ್ಲಿ ನಡುಗುತ್ತಿದ್ದೇವೆ...''

ಫೈನಾನ್ಸ್ ಕಂಪನಿಯೊಂದು ನಡುರಾತ್ರಿ ಎನ್ನುವುದನ್ನೂ ನೋಡದೆ ಬಾಣಂತಿ ಸೇರಿದಂತೆ ಇಡೀ ಕುಟುಂಬವನ್ನು ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದಲ್ಲಿ ನಡೆದಿದ್ದು, ಕಂಪೆನಿಯ ಕೃತ್ಯಕ್ಕೆ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಚೆನ್ನೈ ಮೂಲದ ‘ಇಕ್ವಿಟಾಸ್ ಸ್ಮಾಲ್ ಫೈನಾನ್ಸ್’ ಕಂಪೆನಿಯಲ್ಲಿ ಎರಡು ವರ್ಷದ ಹಿಂದೆ ರೈತ ಶಂಕ್ರಪ್ಪ ಗದ್ದಾಡಿ ಹೈನುಗಾರಿಕೆ ಮಾಡಲು ₹5 ಲಕ್ಷ ಸಾಲ ಪಡೆದಿದ್ದರು. ಇದೀಗ ಸಾಲ ಮರುಪಾವತಿಸಿಲ್ಲವೆಂದು ಮನೆಯನ್ನು ಸೀಜ಼್ ಮಾಡಿದ್ದಾರೆ. ಶಂಕ್ರಪ್ಪನ ಮಗಳು ಬಾಣಂತಿ ಸಂಗೀತಾ ಅವರ ಮನವಿಗೂ ಸ್ಪಂದಿಸದ ಫೈನಾನ್ಸ್ ಸಿಬ್ಬಂದಿ ತೀರಾ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಕಂಪೆನಿಯ ಹೃದಯಹೀನ ಕೃತ್ಯಕ್ಕೆ ಇಡೀ ಕುಟುಂಬ ಕೊರೆಯುವ ಚಳಿಯಲ್ಲಿ ಮನೆಯಿಂದ ಹೊರಗೇ ಇದ್ದು, ರಾತ್ರಿ ಕಳೆದಿದೆ. ಬಾಣಂತಿ ಮಗುವಿಗೆ ಹಾಲುಣಿಸಲಾಗದೆ ಕಣ್ಣೀರು ಹಾಕಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಬೆಳಗಾವಿ | ಎತ್ತಿನ ಗಾಡಿಯ ಚಕ್ರದಲ್ಲಿ ಸಿಲುಕಿ ಮಹಿಳೆ ಸಾವು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರೈತ ಶಂಕ್ರಪ್ಪ ಮಾತನಾಡಿ, “ಈಗಾಗಲೇ ತಿಂಗಳಿಗೆ 14,390ರಂತೆ 37 ಕಂತುಗಳ ಮೂಲಕ 3 ಲಕ್ಷದ 16 ಸಾವಿರ ಸಾಲ ತೀರಿಸಲಾಗಿದೆ. ಮಿಕ್ಕ ಸಾಲ ಮರುಪಾವತಿಸಲು ಒಂದು ತಿಂಗಳು ಕಾಲಾವಕಾಶ ಕೇಳಿದರೂ ಫೈನಾನ್ಸ್‌ನವರು ನಮ್ಮ ಮನವಿಗೆ ಸ್ಪಂದಿಸಿಲ್ಲ. ಇದೇ ಸಮಯದಲ್ಲಿ ನಮ್ಮ ಮಗಳು ಬಾಣಂತನಕ್ಕೆ ಮನೆಗೆ ಬಂದಿದ್ದಾಳೆ. ಆಕೆಯ ಆರೈಕೆ ಹಾಗೂ ಆಸ್ಪತ್ರೆಗೆ ತೋರಿಸುವ ಸಲುವಾಗಿ 3 ತಿಂಗಳ ಕಂತು ಬಾಕಿ ಉಳಿದಿತ್ತು. ಈಗ ಆಕೆಗೆ ಹೆರಿಗೆಯಾಗಿ, 45 ದಿನಗಳ ಆಕೆಯ ಹಸುಗೂಸು ಇದೆ. ಈ ಸಮಯದಲ್ಲಿ ಮಗು ಮತ್ತು ಬಾಣಂತಿ ಬೆಚ್ಚಗಿರಬೇಕಾಗಿದೆ. ಇಂತಹ ಸಮಯದಲ್ಲಿ ನಮ್ಮ ಮನೆಗೆ ಫೈನಾನ್ಸಿನವರು ಪೊಲೀಸರನ್ನು ಕರೆದುಕೊಂಡು ಬಂದು, ನಮ್ಮ ಏಕೈಕ ಆಶ್ರಯವಾಗಿದ್ದ ಮನೆಯನ್ನು ಸೀಜ಼್ ಮಾಡಿದ್ದಾರೆ. ಈಗ ನಮಗೆ ಇರಲು ಸೂರು ಇಲ್ಲದಂತಾಗಿದೆ” ಎಂದು ಅಳಲು ತೋಡಿಕೊಂಡರು.

ಈ ಕುರಿತು ಸ್ಥಳೀಯ ರೈತ ಮುಖಂಡ ಮಂಜುನಾಥ ಈ ದಿನ ಡಾಟ್ ಕಾಮ್ ಜೊತೆ ಮಾತನಾಡಿ, “ಫೈನಾನ್ಸ್ ಕಂಪನಿಯ ನಡೆಯನ್ನು ವಿರೋಧಿಸಿ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...