ಬಳ್ಳಾರಿ | ಕೋಮು ಪ್ರಚೋದನೆ ಹಿನ್ನೆಲೆ 5 ವರ್ಷದಲ್ಲಿ 483 ಪ್ರಕರಣ ದಾಖಲು: ಎಸ್‌ಪಿ ಶೋಭಾರಾಣಿ

Date:

ಕೋಮು ಪ್ರಚೋದನೆ ಪ್ರಕರಣಗಳ ಸಂಖ್ಯೆಗಳು ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ವಾಗುತ್ತಲೇ ಇವೆ. ಐದು ವರ್ಷಗಳಲ್ಲಿ ಕೋಮುವಾದ ಪ್ರಚೋದಿಸುವ ಮತ್ತು ದ್ವೇಷ ಭಾಷಣ ವೈಭವೀಕರಿಸುವ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ 483 ಪ್ರಕರಣಗಳು ದಾಖಲಾಗಿವೆ ಎಂದು ಬಳ್ಳಾರಿ ಎಸ್‌ಪಿ ಶೋಭಾರಾಣಿ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ 2020ರಿಂದ 2024ರವರೆಗಿನ 5 ವರ್ಷಗಳಲ್ಲಿ ಕೋಮುವಾದ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ 56 ಪ್ರಕರಣ, ಮಂಗಳೂರು ನಗರದಲ್ಲಿ 36, ಬೆಂಗಳೂರು ನಗರ ಮತ್ತು ತುಮಕೂರು ಜಿಲ್ಲೆಯಲ್ಲಿ ತಲಾ 33 ಪ್ರಕರಣಗಳು ದಾಖಲಾಗಿವೆ.

ಬಾಗಕಲಕೋಟೆ 29, ಕೊಡಗು 27, ಮಂಡ್ಯದಲ್ಲಿ 26, ಬೆಳಗಾವಿ ನಗರ ಮತ್ತು ಕೊಪ್ಪಳ ಜಿಲ್ಲೆಯಲ್ಲಿ 25, ದಾವಣಗೆರೆ 24, ಧಾರವಾಡ ಜಿಲ್ಲೆಯಲ್ಲಿ 22 ಮತ್ತು ಹುಬ್ಬಳ್ಳಿ-ಧಾರವಾಡ ನಗರದಲ್ಲಿ 19 ಪ್ರಕರಣಗಳು ದಾಖಲಾಗಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಮನಗರ, ಚಿಕ್ಕಬಳ್ಳಾಪುರ, ಮೈಸೂರು, ಹಾಸನ, ಚಾಮರಾಜನಗರ, ಚಿತ್ರದುರ್ಗ, ಉತ್ತರ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಂಥ ಪ್ರಕರಣ ವರದಿಯಾಗಿಲ್ಲ ಎಂದು ಗೃಹ ಇಲಾಖೆಯ ಮೂಲಗಳು ಹೇಳುತ್ತವೆ.

ನಾಲ್ಕು ವರ್ಷಗಳಿಂದ ಒಂದೂ ಕೋಮುವಾದದ ಪ್ರಕರಣ ಕಾಣದ ಮಂಡ್ಯ ಜಿಲ್ಲೆಯಲ್ಲಿ 2024ರಲ್ಲಿ ಒಂದೇ ವರ್ಷ 26 ಪ್ರಕರಣ ದಾಖಲಾಗಿವೆ. ಈ ಸಾಲಿನಲ್ಲಿ ಜಿಲ್ಲೆಯೊಂದರಲ್ಲಿ ದಾಖಲಾದ ಅತ್ಯಧಿಕ ಸಂಖ್ಯೆ ಪ್ರಕರಣಗಳಿವು.

ಸುಳ್ಳು ಸುದ್ದಿಯ 247 ಪ್ರಕರಣ

“ಸಾಮಾಜಿಕ ಮಾಧ್ಯಮದಲ್ಲಿ ಕೋಮುವಾದ ಹರಡಲು ಸುಳ್ಳುಸುದ್ದಿಗಳೂ ನೆರವಾಗುತ್ತಿವೆ. 2021ರಿಂದ 2024ರವರೆಗೆ ಇಂಥ 247 ಪ್ರಕರಣ ವರದಿಯಾಗಿದೆ ಎಂಬುದು ಅಂಕಿ ಅಂಶಗಳಿಂದ ಗೊತ್ತಾಗಿದೆ. ಇದರಲ್ಲಿ ಬೆಂಗಳೂರು ನಗರ 99 ಸುಳ್ಳು ಸುದ್ದಿಗಳ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಉತ್ತರ ಕನ್ನಡ ಜಿಲ್ಲೆ 45, ಕೊಡಗು 3, ಶಿವಮೊಗ್ಗ 10, ತುಮಕೂರು 9 ಸುದ್ದಿಗಳ ಮೂಲಕ ಮೊದಲ ಐದು ಸ್ಥಾನದಲ್ಲಿವೆ” ಎಂದು ಪೊಲೀಸರು ತಿಳಿಸಿದ್ದಾರೆ.

“ಸಾಮಾಜಿಕ ಮಾಧ್ಯಮಗಳಲ್ಲಿ ಆಗುವ ಚರ್ಚೆಗಳನ್ನು ನಿರಂತರ ಪರಿಶೀಲಸುತ್ತೇವೆ. ಅನುಮಾನಾಸ್ಪದ ಗುಂಪುಗಳ ಪಟ್ಟಿ ನಮ್ಮ ಬಳಿ ಇದೆ. ಹಾನಿಕಾರಕ ಪೋಸ್ಟ್‌ಗಳು ಕಂಡರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ” ಎಂದರು.

“ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುವ ಪ್ರಚೋದನಾಕಾರಿ ಅಂಶಗಳ ಮೇಲೆ ನಿಗಾವಹಿಸಲು ಪ್ರತಿ ಜಿಲ್ಲೆಯ ಪ್ರತಿ ಠಾಣೆ ಸಿಇಎನ್(ಸೈಬ‌ರ್ ಅಪರಾಧ ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ ಪೊಲೀಸ್‌) ವಿಭಾಗ ಎಸ್‌ಪಿ ಕಚೇರಿಯಲ್ಲಿ ‘ಸಾಮಾಜಿಕ ಮಾಧ್ಯಮ ವಿಚಕ್ಷಣಾ’ ತಂಡ ಇದೆ. ಈ ತಂಡಗಳು ಸ್ಥಳೀಯ ಮತ್ತು ಜಿಲ್ಲೆಯಲ್ಲಿ ಚರ್ಚೆಯಾಗುವ ವಿಷಯಗಳನ್ನು ಗಮನಿಸುತ್ತವೆ. ‘ಪೊಲೀಸ್ ಸಿಬ್ಬಂದಿಯೇ ಕೆಲ ಅನುಮಾನಾಸ್ಪದ ಗುಂಪುಗಳಲ್ಲಿ ಗೌಪ್ಯವಾಗಿ ಸೇರಿ ಅಲ್ಲಿನ ವಿಷಯಗಳ ಮೇಲೆ ಕಣ್ಣಿಟ್ಟಿರುತ್ತಾರೆ. ಸಮಾಜಕ್ಕೆ ಹಾನಿಕರ ವಿಷಯಗಳು ಪೋಸ್ಟ್ ಆಗಿರುವುದು ಕಂಡುಬಂದರೆ ಅದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತರಲಾಗುತ್ತದೆ. ಬಳಿಕ ಸಂಬಂಧಿಸಿದವರನ್ನು ಕೂಡಲೇ ಕರೆಸಿ ಪೋಸ್ಟ್ ಡಿಲೀಟ್ ಮಾಡಲಾಗುತ್ತದೆ ಅಥವಾ ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದು ಬಳ್ಳಾರಿಯ ಸಿಇಎನ್ ವಿಭಾಗದ ಡಿವೈಎಸ್‌ಪಿ ಸಂತೋಷ್ ಚೌಹಾಣ್ ತಿಳಿಸಿದರು.

ಕೋಮುವಾದ ಪ್ರಕರಣಗಳ ಸಂಖ್ಯೆ ಏರಿಕೆ ವರ್ಷ: ಪ್ರಕರಣ 2020ರಲ್ಲಿ 51, 2021ರಲ್ಲಿ 72, 2022ರಲ್ಲಿ 99, 2023ರಲ್ಲಿ 118, 2024ರಲ್ಲಿ 143ಕ್ಕೆ ಏರಿಕೆಯಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...