ಬಳ್ಳಾರಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ದೀಪಾವಳಿ ಹಬ್ಬದಂದು ಜೂಜು ಅಡ್ಡೆಗಳ ಮೇಲೆ ದಾಳಿ ಮಾಡಿರುವ ಜಿಲ್ಲಾ ಪೊಲೀಸರು, 178 ಪ್ರಕರಣಗಳಲ್ಲಿ ಸುಮಾರು 1136 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ ಜೆ ಮಾಹಿತಿ ನೀಡಿ, ಅಕ್ಟೋಬರ್ 20 ರಿಂದ 22ರ ವರೆಗೆ ನಡೆದ ದಾಳಿಯಲ್ಲಿ ಒಟ್ಟು ರೂ.17,31,140 ಲಕ್ಷಗಳಷ್ಟು ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.
ಕಳೆದ ವರ್ಷವೂ ಜಿಲ್ಲೆಯಲ್ಲಿ ದೀಪಾವಳಿ ಹಬ್ಬದಂದು ನಿಖರವಾದ ಮಾಹಿತಿ ಆಧರಿಸಿ ಜೂಜು ಅಡ್ಡೆಗಳ ಮೇಲೆ ದಾಳಿ ಮಾಡಲಾಗಿತ್ತು, ಆಗಲೂ 137 ಪ್ರಕರಣಗಳಲ್ಲಿ, 833 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ರೂ. 16 ಲಕ್ಷ ಹಣ ವಶಕ್ಕೆ ಪಡೆಯಲಾಗಿತ್ತು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಬಳ್ಳಾರಿ | ಗುಡಾರ ನಗರದಿಂದ ಶ್ರೀಧರಗಡ್ಡೆವರೆಗೆ ರಸ್ತೆಗುಂಡಿ ಮುಚ್ಚುವಂತೆ ಎಸ್‌ಯುಸಿಐ ಒತ್ತಾಯ
ಪ್ರತಿ ವರ್ಷ ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೊಟೇಲ್, ಲಾಡ್ಜ್, ಕಚೇರಿಗಳು, ಹೊಲ, ತೋಟದ ಮನೆಗಳು ಸೇರಿದಂತೆ ಹಲವೆಡೆ ವ್ಯಾಪಕವಾಗಿ ಅಂದರ್ ಬಾಹರ್ ಆಟ ಆಡಲಾಗುತ್ತದೆ. ಈ ಕುರಿತ ದೂರುಗಳು ಹಾಗೂ ಖಚಿತ ಮಾಹಿತಿ ಆಧರಿಸಿ ಪೊಲೀಸ್ ಇಲಾಖೆ ಈ ದಾಳಿ ನಡೆಸಿದೆ.





