ಬಳ್ಳಾರಿ | ರಾಜಕಾರಣಿಗಳು ಮಾತ್ರ ಗೂಂಡಾಗಳಲ್ಲ, ಅಧಿಕಾರಿಗಳೂ ಗೂಂಡಾಗಳೇ: ರವಿಕೃಷ್ಣಾ ರೆಡ್ಡಿ ಕಿಡಿ

Date:

ಬಳ್ಳಾರಿ ಜಿಲ್ಲೆಯಲ್ಲಿ ರಾಜಕಾರಣಿಗಳು ಮಾತ್ರ ಗೂಂಡಾಗಳಲ್ಲ. ಅಧಿಕಾರಿಗಳೂ ಗೂಂಡಾಗಳೇ. ಇಲ್ಲಿನ ಎಸ್‌ಪಿಗೆ ಕರ್ನಾಟಕದ ಪರಂಪರೆ ತಿಳಿದಂತಿಲ್ಲ. ಪಕ್ಷದ ಸಭೆಗೆ ಅನುಮತಿ ಪಡೆಯಲು ಹೋದರೆ ‘ಗೆಟ್‌ ಲಾಸ್ಟ್‌’ ಎಂದಿದ್ದಾರೆ ಎಂದು ಕೆಆರ್‌ಎಸ್‌ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ಪೊಲೀಸರ ನಡೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಕರ್ನಾಟಕಕ್ಕಾಗಿ ನಾವು’ ಹೆಸರಲ್ಲಿ ಕೆಆರ್‌ಎಸ್‌ ಪಕ್ಷ ಬೈಕ್‌ ಜಾಥಾ ಆರಂಭಿಸಿದ್ದು, ಈ ಜಾಥಾ ಮಂಗಳವಾರ (ಫೆ.27) ಬಳ್ಳಾರಿ ತಲುಪಿದೆ. ಈ ವೇಳೆ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಳ್ಳಾರಿಯೇನು ಅವರ ಅಪ್ಪನದ್ದಾ ಎಂದು ಗುಡುಗಿದ ಅವರು, ಇಲ್ಲಿನ ಅಧಿಕಾರಿಗಳಿಗೆ ಅಹಂಕಾರವಿದೆ ಎಂದರು.

ಇದು ಯಾರ ಅಪ್ಪನ ಆಸ್ತಿಯಲ್ಲ, ಜಹಗೀರಲ್ಲ. ಇದು ಕನ್ನಡಿಗರ ರಾಜ್ಯ. ಯಾವುದೋ ರಾಜ್ಯದಿಂದ ಬಂದು ಇಲ್ಲಿ ಗೂಂಡಾಗಿರಿ ಮಾಡುವುದನ್ನು ಅಧಿಕಾರಿಗಳು ನಿಲ್ಲಿಸಬೇಕು. ಕೆಆರ್‌ಎಸ್‌ ಪಕ್ಷ ಖಾಕಿಗೆ ಹೆದರುವುದಿಲ್ಲ ಎಂದು ಗುಡುಗಿದ ಅವರು, ಸ್ವಲ್ಪ ಅಹಂಕಾರ ಬಿಟ್ಟು ನಡೆಯಬೇಕು. ಈ ರಾಜ್ಯದಲ್ಲಿ ಐಪಿಎಸ್‌ ಅಧಿಕಾರಿಗಳೂ ಜೈಲು ನೋಡಿರುವ ಉದಾಹರಣೆಗಳಿವೆ. ಇದು ಎಸ್ಪಿ ಗಮನದಲ್ಲಿರಬೇಕು ಎಂದು ಎಚ್ಚರಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...