ಕರ್ನಾಟಕದಲ್ಲಿರುವ ಲಕ್ಷಾಂತರ ಕುಟುಂಬಗಳು ಮಾರಕವಾದ ಹೆಚ್‌ಐವಿ ಕಾಯಿಲೆಯಿಂದ ನರಳುತ್ತಿದ್ದಾರೆ. ಅವರು ಮಾನಸಿಕವಾಗಿ ಕುಗ್ಗಿದ್ದಲ್ಲದೇ ಸಮಾಜಿಕ ಭಹಿಷ್ಕಾರಕ್ಕೆ ಒಳಗಾಗಿರುತ್ತಾರೆ. ಅಂತ ಕುಟುಂಬಗಳನ್ನು ಗುರುತುಸಿ ಸರಕಾರ ಆರ್ಥಿಕ ಸಹಾಯ ಧನ ಹಾಗೂ ಮಾಸಿಕ ವೇತನ ನಿಡಬೇಕು ಎಂದು ಸಮಾಜ ಸೇವಾ ಕಾರ್ಯಕರ್ತರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕ ಆಗ್ರಹಿಸಿತು.
ಜಿಲ್ಲೆಯ ಕಂಪ್ಲಿಯಲ್ಲಿ ಹೆಚ್‌ಐವಿ ಪೀಡಿತ ಕುಟುಂಬಗಳಿಗೆ ಅರ್ಥಿಕ ಧನ ಸಹಾಯ ಹಾಗೂ ಮಾಸಿಕ ಪಿಂಚಣಿ ನೀಡಲು ಒತ್ತಾಯಿಸಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
“ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹಾಗೂ ಬೇರೆಬೇರೆ ಕಾರಣಗಳಿಂದ ಹೆಚ್‌ಐವಿ ಎಂಬ ಮಾರಣಾಂತಿಕ ಕಾಯಿಲೆಗೆ ತುತ್ತಾಗಿರುವ ಕುಟುಂಬ ಹಾಗೂ ರೋಗಿಗಳನ್ನು ಗುರುತಿಸಿ ಸರಕಾರ ಆರ್ಥಿಕವಾಗಿ ಅವರ ಧನ ಸಹಾಯ ಮಾಡಬೇಕು. ಈಗಾಗಲೇ ಗೌಪ್ಯವಾಗಿ ಸರಕಾರ ಅಂತವರಿಗೆ ಔಷಧೋಪಚಾರ ಮಾಡುತ್ತಿದ್ದು, ಸರಕಾರಕ್ಕೆ ನಮ್ಮ ಸಂಘಟನೆಯಿಂದ ಅಭಿನಂದನೆಗಳು. ವಿಶೇಷ ಚೇತನರಿಗೆ, ವೃದ್ಯಾಪ್ಯರಿಗೆ, ವಿಧವೆಯರಿಗೆ ಮಾಸಿಕ ವೇತನ ನೀಡುವಂತೆ ಈ ಕಟುಂಬಗಳಿಗೂ ಮಾಸಿಕ ವೇತನ ನೀಡಬೇಕು” ಎಂದು ಆಗ್ರಹಿಸಿದರು.
“ಹೆಚ್ಐವಿ ಪೀಡಿತ ಸಂತ್ರಸ್ತರು ಸಮಾಜದಲ್ಲಿ ತಮ್ಮ ನೋವನ್ನು ಹೇಳಿಕೊಳ್ಳದೇ ಇದ್ದರೂ ಯಾವುದೋ ಕಾರಣದ ಮೂಲಕ ಸಮಾಜಕ್ಕೆ ಗೊತ್ತಾಗಿ ಉದ್ಯೋಗ, ಕೂಲಿ ಸಿಗುವುದಿಲ್ಲ. ಭಿಕ್ಷೆ ಬೇಡುವುದಕ್ಕೂ ಸ್ವಾಭಿಮಾನ ಅಡ್ಡಿ ಬರುತ್ತದೆ. ಇಂತವರ ಜೀವನ ಬಿಸಿ ತುಪ್ಪದಂತಾಗಿರುತ್ತದೆ. ಇಂತಹ ಕುಟುಂಬಗಳಿಗೆ ಮಾಸಾಶನ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣ, ಬಸ್ಸು-ರೈಲ್ವೆಗಳಲ್ಲಿ ಉಚಿತ ಪ್ರಯಾಣಕ್ಕೆ ಪಾಸ್, ರೂ 10 ಲಕ್ಷಗಳು ಸೋಂಕಿತ ಮಕ್ಕಳಿಗೂ ತಲುಪುವಂತೆ ಕಲ್ಪಿಸಿಕೊಡಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಬಳ್ಳಾರಿ | ಫೋನ್ ಬದಲಿಗೆ ಚೆಸ್‌ನಲ್ಲಿ ಆಸಕ್ತಿ ಬೆಳೆಸಿಕೊಳ್ಳಿ: ತಿರುಮಲ ಶಾಲೆ ಅಧ್ಯಕ್ಷ ಯಲ್ಲಪ್ಪ
ಈ ವೇಳೆ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ರಾಜಕುಮಾರ್, ಮರಿಗೌಡ ಸಣಾಪುರ, ಎಸ್ ಬಸವರಾಜ್, ಎ.ಎಸ್.ಯಲ್ಲಪ್ಪ, ಧನಕಾಯಿ ಬಸವರಾಜ್, ಇ.ಧನಂಜಯ್, ಲಕ್ಷ್ಮಣ, ಮಂಜು, ರವಿ ಮಣ್ಣೂರ, ರಾಮಾಂಜನಯ್ಯ, ವಸಂತ ಕಹಾಳೆ, ಎಚ್.ಬಸಪ್ಪ, ಶಾಮತಪ್ಪ, ಮಂಜು, ಗೋಪಾಲ್, ಹುಸೇನಪ್ಪ, ಪ್ರವೀಣ ಹಾಗೂ ಇತರರು ಉಪಸ್ಥಿತರಿದ್ದರು.





