ಬಳ್ಳಾರಿ | ಜಾತ್ಯತೀತ ಹೋರಾಟಕ್ಕೆ ಯಶಸ್ಸು ಖಚಿತ: ಸಿರಿಗೇರಿ ಪನ್ನಾರಾಜ್

Date:

ಯಾವುದೇ ಸಮಸ್ಯೆಯನ್ನು ಪಕ್ಷಾತೀತ, ಜಾತ್ಯತೀತವಾಗಿ ಹೋರಾಟ ಮಾಡಿ, ಕೊನೆಯ ಹಂತದವರೆಗೂ ಹೋರಾಟವನ್ನು ಕೊಂಡೊಯ್ದಾಗ ಅದಕ್ಕೆ ತಾರ್ಕಿಕ ಅಂತ್ಯ ಸಿಕ್ಕು ಯಶಸ್ಸು ಸಿಗಲಿದೆ ಎಂದು ಸಾಮಾಜಿಕ ಹೋರಾಟಗಾರ, ಲೆಕ್ಕಪರಿಶೋಧಕ ಸಿರಿಗೇರಿ ಪನ್ನಾರಾಜ್ ಹೇಳಿದರು.

ನಗರದ ಬಿಡಿಎ ಸಭಾಂಗಣದಲ್ಲಿ ಇಂದು ಹಾಲು ಉತ್ಪಾದಕರ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“1990 ರಲ್ಲಿ ರಚನೆಯಾಗಿದ್ದ ಹೆಚ್‌ಕೆಡಿಬಿಯಲ್ಲಿ ಬಳ್ಳಾರಿಯನ್ನು ಕೈಬಿಡಲಾಗಿತ್ತು. ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ನೇತೃತ್ವದ ಸರ್ಕಾರದಿಂದ ಹೆಚ್‌ಕೆಡಿಬಿ ಅಭಿವೃದ್ಧಿಗೆ ರೂ.40 ಕೋಟಿ ಅನುದಾನ ಘೋಷಣೆಯಾಗಿತ್ತು. ಹೆಚ್‌ಕೆಡಿಬಿಯಲ್ಲಿ ಬಳ್ಳಾರಿಯನ್ನು ಸೇರಿಸಲು ಬಳ್ಳಾರಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‌ನ ಅಂದಿನ ಅಧ್ಯಕ್ಷರಾಗಿದ್ದ ಕೆ.ತಿಮ್ಮಪ್ಪ ಅವರ ಮುಂದಾಳತ್ವದಲ್ಲಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಹೋರಾಟ ಮಾಡಿ ಬಳ್ಳಾರಿ ಜಿಲ್ಲೆಯನ್ನು ಎಚ್‌ಕೆಡಿಬಿ ವ್ಯಾಪ್ತಿಗೆ ತರಲಾಯಿತು” ಎಂದು ಸ್ಮರಿಸಿಕೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಎಲ್ಲಾ ಸರ್ಕಾರಗಳಿಂದ ಬಳ್ಳಾರಿ ಜಿಲ್ಲೆಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿಲ್ಲ. ಕಾಮಗಾರಿ ಪೂರ್ಣಗೊಂಡಿದ್ದರೂ ಗಡಿಯಾರ ಗೋಪುರ ಉದ್ಘಾಟನೆ ವಿಳಂಭವಾಗುತ್ತಿದೆ. ಪ್ರತ್ಯೇಕ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆಯಾಗುತ್ತಿಲ್ಲ. ಹೀಗೆ ಬಳ್ಳಾರಿ ಜಿಲ್ಲೆಗೆ ಸತತ ಅನ್ಯಾಯವಾಗುತ್ತಿದೆ.
ದೇಶ ಉದ್ಧಾರ ಆದರೆ ನಾವು ಉದ್ಧಾರ ಆಗುತ್ತೇವೆ ಎಂಬ ಬಾಬು ಜಗಜೀವನ್ ರಾಮ್ ಹೇಳಿದಂತೆ ನಮ್ಮೂರು ಉದ್ಧಾರ ಆದರೆ, ನಾವು ಉದ್ಧಾರ ಆಗುತ್ತೇವೆ” ಎಂದರು.

“ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಹಾಲು ಒಕ್ಕೂಟದ ಆಡಳಿತ ಮಂಡಳಿ ಅವಧಿ ಈಗಾಗಲೇ ಮುಗಿದಿದೆ. ಚುನಾವಣೆ ನಡೆದು ಹೊಸ ಆಡಳಿತ ಮಂಡಳಿ ಬರಬೇಕಿತ್ತು. ಕೆಲವೊಂದು ತಾಂತ್ರಿಕ ಕಾರಣಗಳಿಂದ ಬಂದಿಲ್ಲ. ರಾಬಕೊವಿಯಲ್ಲಿ ಕಳೆದ ವರ್ಷ ರೈತರ ಹಾಲಿನ ದರವನ್ನು ಕಡಿತಗೊಳಿಸಿದ್ದು ರೂ 1.5ಗಳನ್ನು ವಾಪಸ್ ಕೊಡಿಸುವುದು. ಕೊಳಗಲ್ಲು ಬಳಿಯ ಮೆಗಾಡೈರಿ ನಿರ್ಮಾಣಕ್ಕೆ ಗುರುತಿಸಿರುವ 15 ಎಕರೆ ಜಮೀನಿಗೆ ಒಕ್ಕೂಟದಿಂದ ರೂ 2.92 ಕೋಟಿ ಹಣ ಕೊಡಿಸಿ, ಕೆಎಂಇಆರ್‌ಸಿ ರೂ 132 ಕೋಟಿ ಅನುದಾನದಲ್ಲಿ ಬಳ್ಳಾರಿಯಲ್ಲೇ ಮೆಘಾಡೈರಿ ಸ್ಥಾಪಿಸುವುದು ಹೋರಾಟದ ಮೊದಲ ಉದ್ದೇಶವಾಗಿದೆ” ಎಂದರು.

ಇದನ್ನೂ ಓದಿ: ಬಳ್ಳಾರಿ | ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಒತ್ತಾಯ

ರಾಬಕೊವಿ ಒಕ್ಕೂಟದ ಮಾಜಿ ನಿರ್ದೇಶಕ ವೀರಶೇಖರರೆಡ್ಡಿ ಮಾತನಾಡಿ, “ಒಕ್ಕೂಟದಲ್ಲಿ ಈ ಹಿಂದೆ ನಾನು ಸಹ ಹಾಲಿ ಅಧ್ಯಕ್ಷರ ವಿರುದ್ಧವೇ ಸಾಕಷ್ಟು ಹೋರಾಟ ಮಾಡಿದ್ದೇವೆ. ಬಳ್ಳಾರಿ ಸಹಕಾರ ಸಂಘಗಳ ಉಪನಿಬಂಧಕರು, ನಿಬಂಧಕರು, ಕಲಬುರ್ಗಿ ವಿಭಾಗದ ರಾಯಚೂರು ಜಂಟಿ ನಿಬಂಧಕರು ಸೇರಿ ನಾಲ್ಕು ಕಡೆ ಒಕ್ಕೂಟದ ಹಾಲಿ ಅಧ್ಯಕ್ಷರ ವಿರುದ್ಧ ನಾವು ದೂರು ನೀಡಿದ್ದೇವೆ. ನಾಲ್ಕು ಕಡೆಯೂ ನಮಗೆ ಜಯಸಿಕ್ಕಿದೆ. ಆದರೆ, ಈ ಎಲ್ಲ ಆದೇಶಗಳಿಗೆ ಹಾಲಿ ಅಧ್ಯಕ್ಷರು, ಹೈಕೋರ್ಟ್ನಲ್ಲಿ ತಡೆಯಾಜ್ಞೆ ತಂದು ಅಧ್ಯಕ್ಷರಾಗಿ ಮುಂದುವರೆಯುತ್ತಿದ್ದಾರೆ. ವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಪ್ರಮಾಣ ಕಡಿಮೆಯಾಗಿದೆ. ಪರಿಣಾಮ ಸೊಸೈಟಿಗಳ ಸಂಖ್ಯೆಯೂ ಕಡಿತವಾಗಿದೆ. ಹಿಂದೆ 170ಕ್ಕೂ ಹೆಚ್ಚು ಇದ್ದ ಸೊಸೈಟಿಗಳ ಸಂಖ್ಯೆ ಇಂದು ಕೇವಲ 30-40ಕ್ಕೆ ಇಳಿಕೆಯಾಗಿದೆ. ಹಾಗಾಗಿ ಹಾಲು ಉತ್ಪಾದನೆ ಮಾಡಿ ಸೊಸೈಟಿಗಳ ಸಂಖ್ಯೆ ಜಾಸ್ತಿ ಮಾಡಿಕೊಳ್ಳಬೇಕು. ರೈತರಲ್ಲಿ ಜಾಗೃತಿ ಮೂಡಿಸಬೇಕು” ಎಂದು ಮನವಿ ಮಾಡಿದರು.

ಒಕ್ಕೂಟದ ನಿರ್ದೇಶಕ ಧನುಂಜಯ ಹಮಾಲ್ ಮಾತನಾಡಿ, “ಮೆಗಾಡೈರಿ ನಿರ್ಮಾಣಕ್ಕೆ ಮಂಜೂರಾಗಿರುವ ಕೆಎಂಇಆರ್‌ಸಿ ಅನುದಾನವನ್ನು ಗಣಿಬಾಧಿತ ಪ್ರದೇಶವಾದ ಬಳ್ಳಾರಿ, ಸಂಡೂರು ಬಿಟ್ಟು ಬೇರೆಕಡೆ ಬಳಸಲು ಬರಲ್ಲ. ಮೆಗಾಡೈರಿ ಸ್ಥಾಪನೆಗೆ ಬಳ್ಳಾರಿಯ ಕೊಳಗಲ್ಲು ಬಳಿ ಗುರುತಿಸಿರುವ 15 ಎಕರೆ ಭೂಮಿಗೆ ಎನ್‌ಡಿಬಿಬಿ ಸಹ ಅನುಮೋದನೆ ನೀಡಿದೆ. ಆದರೆ, ಜಮೀನಿಗೆ ಇರುವ ಮೌಲ್ಯ ರೂ 2.92 ಕೋಟಿ ಹಣವನ್ನು ಪಾವತಿಸುವಲ್ಲಿ ಒಕ್ಕೂಟ ವಿಳಂಬ ಧೋರಣೆ ಅನುಸರಿಸುತ್ತಿದೆ. ಒಕ್ಕೂಟದ ಹಾಲಿ ಅಧ್ಯಕ್ಷರು, ಸಿಎಂ ಆಪ್ತರೆಂದು, ಒಕ್ಕೂಟದ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲುವ ಸಲುವಾಗಿ ಈ ಹುನ್ನಾರ ನಡೆಸಲಾಗುತ್ತಿದೆ” ಎಂದು ಆರೋಪಿಸಿದರು.

ಇದನ್ನೂ ಓದಿ: ಬಳ್ಳಾರಿ | ದಲಿತರಿಗೆ ಸೇರಿದ ಜಾಗ, ಬಾವಿ ಅತಿಕ್ರಮಣ; ತೆರವಿಗೆ ಪಿ ಶೇಖರ್ ಆಗ್ರಹ

ವಿಚಾರ ಸಂಕೀರ್ಣದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಆರ್.ಮಾಧವರೆಡ್ಡಿ, ಕಮ್ಯುನಿಷ್ಟ್ ಪಕ್ಷದ ಶಿವಶಂಕರ್, ತುಂಗಭದ್ರಾ, ದರೂರು ಪುರುಷೋತ್ತಮಗೌಡ, ಯಶ್ವಂತ್‌ರಾಜ್ ನಾಗಿರೆಡ್ಡಿ, ವೆಂಕಟೇಶ್ ಹೆಗಡೆ, ಜೋಳದರಾಶಿ ತಿಮ್ಮಪ್ಪ, ಈ. ಗಾದೆಪ್ಪ ಮಿಂಚು ಸೀನಾ, ಹನುಮಂತ, ಜೆ.ಸತ್ಯಬಾಬು, ಸಂಗನಕಲ್ಲು ವಿಜಯ್ ಕುಮಾರ್, ಹುಸೇನಪ್ಪ, ದುರುಗಪ್ಪ ತಳವಾರ್, ಮೋಹನ್ , ಕ ಮೋಕ ಮುದಿಮಲ್ಲಯ್ಯ, ಬರಮ ರೆಡ್ಡಿ, ಸಿಂಧುನೂರು ಸತ್ಯನಾರಯಣ, ಗಂಗಾಧರ ಸಂಗನಕಲ್ಲು, ಸತ್ಯ, ಜನಾರ್ದನ್, ಗಾಳಿ ಬಸವ ರಾಜ್, ಉಮೇಶ್ ಹಾಗೂ ಇತರರಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...