ಬೆಂಗಳೂರು ದಕ್ಷಿಣ ಜಿಲ್ಲೆಯ ಕೆ ಆರ್ ಪುರಂ ವಲಯದ ತ್ರಿವೇಣಿನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಲಾಖೆಯ ಜೊತೆಗೂಡಿ ಅಸೋಸಿಯೇಷನ್ ಫಾರ್ ಪೀಪಲ್ ವಿತ್ ಡಿಸೆಲಿಬಿಟಿ(ಎಪಿಡಿ) ಸಂಸ್ಥೆಯ ಸಹಯೋಗದೊಂದಿಗೆ ವಿಶೇಷ ಚೇತನ ಮಕ್ಕಳ ಪೋಷಕರಿಗೆ ಮಕ್ಕಳ ಶಿಕ್ಷಣ ಮತ್ತು ಪುನರ್ವಸತಿಯನ್ನು ಕಲ್ಪಿಸುವ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿಲಾಗಿತ್ತು.
ವಿಶೇಷ ಚೇತನರ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ವಿದ್ಯಾ ಶೆಣೈಯವರು ಉದ್ಘಾಟನೆ ಮಾಡಿ, ಮಕ್ಕಳ ಶಿಕ್ಷಣ ಮತ್ತು ಪುನರ್ವಸತಿಯನ್ನು ಕಲ್ಪಿಸುವ ಬಗ್ಗೆ ಪೋಷಕರಿಗೆ ಮಾರ್ಗದರ್ಶನ ನೀಡಿದರು.
ಜೊತೆಗೆ ಸಮನ್ವಯಧಿಕಾರಿಯಾದ ಗೀತಾ ಭಟ್ ಮತ್ತು ವಿನೋದ ಅವರು ಮಕ್ಕಳ ಯೋಗ ಕ್ಷೇಮದ ಬಗ್ಗೆ ಅವರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ತಿಳಿಸಿದರು.
ಇದನ್ನು ಓದಿದ್ದೀರಾ? ವಿಜಯಪುರ | ಎಸ್‌ಬಿಐ ಬ್ಯಾಂಕ್‌ಗೆ ನುಗ್ಗಿದ ಮುಸುಕುಧಾರಿಗಳ ತಂಡ: 8 ಕೋಟಿ ನಗದು, 50 ಕೆ.ಜಿ. ಚಿನ್ನ ದೋಚಿ ಪರಾರಿ!
ಎಪಿಡಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಯಾದ ಬಸವರಾಜ್ ಅವರು ಶ್ರವಣ ದೋಷ ಮಕ್ಕಳ ಉಪಕರಣ ಬಳಕೆಯ ಬಗ್ಗೆ ಸ್ವಾರಸ್ಯಕರವಾಗಿ ಪೋಷಕರಿಗೆ ಜಾಗೃತಿ ಮೂಡಿಸಿಸಿದರು. ಕಾರ್ಯಕ್ರಮದಲ್ಲಿ ಎಪಿಡಿ ಸಂಸ್ಥೆಯ ಫಿಸಿಯೋಥೆರಪಿಸ್ಟ್ ಸೈಫುನ್ನಿಸಾ, ಶಿಕ್ಷಕರಾದ ಹಾಲಪ್ಪ ಎಂ ಎಚ್ ಮತ್ತು ಪಸಿರಾಜ್ ಕೂಡ ಭಾಗವಹಿಸಿ, ಸಹಕರಿಸಿದರು.





