ಬೆಂಗಳೂರು | ಬ್ಯಾರಿಸ್ ಸೆಂಟ್ರಲ್ ಕಮಿಟಿಯ ನೂತನ ಅಧ್ಯಕ್ಷರಾಗಿ ಶಬೀರ್ ಬ್ರಿಗೇಡ್ ಮರು ಆಯ್ಕೆ

Date:

ಬೆಂಗಳೂರಿನಲ್ಲಿ ಉದ್ಯೋಗ, ವ್ಯಾಪಾರ ಸೇರಿದಂತೆ ತಮ್ಮ ಬದುಕು ಕಟ್ಟಿಕೊಂಡಿರುವ ಕರಾವಳಿ‌ ಭಾಗದ ಬ್ಯಾರಿ ಸಮುದಾಯದ ಯುವಕರೇ ಕಟ್ಟಿಕೊಂಡಿರುವ ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಇದರ ವಾರ್ಷಿಕ ವಿಶೇಷ ಮಹಾಸಭೆಯು ಕ್ವೀನ್ಸ್ ರೋಡ್‌ನ ದಾರುಸ್ಸಲಾಂ ಸಭಾಂಗಣದಲ್ಲಿ ಬುಧವಾರ(ಜುಲೈ 9) ಸಂಜೆ ನಡೆಯಿತು.

ಸಭೆಯು ಉಬೈದ್ ಮಲ್ಲೇಶ್ವರಂ ಅವರ ಕಿರಾಅತ್ ಮೂಲಕ ಆರಂಭಗೊಂಡಿತು. ಪ್ರಾಸ್ತಾವಿಕವಾಗಿ ಶಬೀರ್ ಬ್ರಿಗೇಡ್ ಮಾತನಾಡಿದರು.

ಕಳೆದ ಒಂದು ವರ್ಷ ಅವಧಿಯ ಖರ್ಚು ವೆಚ್ಚ, ವಾರ್ಷಿಕ ಕೆಲಸಕಾರ್ಯಗಳ ವರದಿಯನ್ನು ಪ್ರಧಾನ ಕಾರ್ಯದರ್ಶಿ ನಾಸಿರ್ ಕೆಂಪಿ ವಾಚಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹೊಸ ನಾಯಕತ್ವ ಆಯ್ಕೆ ಪ್ರಕ್ರಿಯೆಯನ್ನು ಬಿಸಿಸಿಯ ಮಾರ್ಗದರ್ಶಕರಾದ ಸುಹೈಲ್ ಕಂದಕ್ ಹಾಗೂ ಹನೀಫ್ ಖಾನ್ ಕೊಡಾಜೆ ನೆರವೇರಿಸಿ ಕೊಟ್ಟರು.

1001285380

ನೂತನವಾಗಿ 55 ಸದಸ್ಯರ ಕಾರ್ಯಕಾರಿಣಿ ಸಮಿತಿಯು ಆಯ್ಕೆಗೊಂಡ ನಂತರ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆ ನಡೆಸಿ ಮುಂಬರುವ 2 ವರ್ಷಗಳ ಅವಧಿಗೆ ಹೊಸ ನಾಯಕತ್ವವನ್ನು ಆರಿಸಲಾಯಿತು.

ನೂತನವಾಗಿ ರಚಿಸಲಾದ ಕಮಿಟಿಗೆ ಅಧ್ಯಕ್ಷರಾಗಿ ಶಬೀರ್ ಬ್ರಿಗೇಡ್ ಅವರನ್ನು ಪುನರಾಯ್ಕೆ ಮಾಡಲಾಯಿತು.

1001285046

ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಕೆಂಪಿ, ಉಪಾಧ್ಯಕ್ಷರುಗಳಾಗಿ ಗಫೂರ್ ಕೆಂಟ್, ಸಮದ್ ಕುಂತೂರ್, ಸಂಶುದ್ದೀನ್ ಕುಕ್ಕಾಜೆ, ಸಲೀತ್ ಮಾರ್ಥಳ್ಳಿ, ಸಲೀಂ ಸಿ ಎಂ ಹಾಗೂ ಕಾರ್ಯದರ್ಶಿಗಳಾಗಿ ಝಮೀರ್ ಉಳ್ಳಾಲ್, ಮಾಝಿನ್ ಕಾವಳಕಟ್ಟೆ, ರಹೀಮ್ ಚಿಕ್ಕಪೇಟೆ, ಸಮದ್ ಮದ್ದಡ್ಕ, ಹಾರಿಸ್ ಜಿ ಎಸ್ ಕೆ ಅವರನ್ನು ಆಯ್ಕೆ ಮಾಡಲಾಯಿತು.

ಕೋಶಾಧಿಕಾರಿಯಾಗಿ ರಿಫಾಯಿ ವಸಂತನಗರ ಮತ್ತು ಮಾಧ್ಯಮ ಕಾರ್ಯದರ್ಶಿಯಾಗಿ ಬಶೀರ್ ಅಡ್ಯನಡ್ಕ, ಕಾನೂನು ಕಾರ್ಯದರ್ಶಿಯಾಗಿ ಅಡ್ವೋಕೇಟ್ ಖಲಂದರ್ ಕೊಯ್ಲ, ಪಿ ಆರ್ ಕಾರ್ಯದರ್ಶಿಯಾಗಿ ಅಯ್ಯುಬ್ ಕೋರಮಂಗಲ, ಆರೋಗ್ಯ ಕಾರ್ಯದರ್ಶಿಯಾಗಿ ರಫೀಕ್ ಪಾನೆಲ, ಕ್ರೀಡಾ ಕಾರ್ಯದರ್ಶಿಯಾಗಿ ಬದ್ರುದ್ದಿನ್ ಕಾಜೂರ್, ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯದರ್ಶಿಯಾಗಿ ಆಫ್ಜಲ್ ಉಚ್ಚಿಲ ಅವರನ್ನು ಆಯ್ಕೆ ಮಾಡಲಾಯಿತು.

ಸಂಘಟನಾ ಕಾರ್ಯದರ್ಶಿಗಳಾಗಿ ಶಿಹಾಬ್ ಕಾಟಿಪಳ್ಳ, ಹಾರಿಸ್ ಬೆಳ್ಮ, ಆಸೀಫ್ ಪಿ ಕೆ, ಸವಾದ್ ಆರ್ ಟಿ ನಗರ, ಖಲಂದರ್ ಅವರನ್ನು ಪದಾಧಿಕಾರಿಗಳಾಗಿ ನೇಮಿಸಲಾಯಿತು.

1001285381

ಸಭೆಯನ್ನುದ್ದೇಶಿಸಿ ಮಾತನಾಡಿದ ಮಾರ್ಗದರ್ಶಕ ಹನೀಫ್ ಖಾನ್ ಕೊಡಾಜೆ, “ಪ್ರವಾದಿ ಮುಹಮ್ಮದ್ (ಸ) ಅವರು ಈ ಲೋಕಕ್ಕೆ ಬಂದ ಇಸ್ಲಾಮಿನ ಅಂತಿಮ ಪ್ರವಾದಿಗಳು. ಅವರು ತಮ್ಮ ಜನರೊಂದಿಗೆ ಸೌಮ್ಯ ಹಾಗೂ ಪ್ರೀತಿಯ ಸ್ವಭಾವದಿಂದ ವರ್ತಿಸಿ, ಜನಾನುರಾಗಿ ಆಗಿ ಕೆಲಸ ಮಾಡಿದ್ದಾರೆ. ಅದುವೇ ನಮ್ಮ ಎಲ್ಲಾ ಕೆಲಸ ಕಾರ್ಯಗಳಿಗೆ ಮಾರ್ಗವಾಗಬೇಕು. ಅವರ ಜೀವನ ಶೈಲಿಯನ್ನು ನಾವು ಕೂಡ ಅಳವಡಿಸಿ, ಬ್ಯಾರಿ ಸಮುದಾಯದ ಉನ್ನತಿಗೆ ಶ್ರಮಿಸಬೇಕು.‌ ಸಮುದಾಯದ ಎಲ್ಲಾ ಆಗುಹೋಗುಗಳಿಗೆ ಸ್ಪಂದಿಸುವ ಸೂಕ್ಷ್ಮ ಮನಸ್ಸು ಹೊಂದುವವರಾಗಬೇಕು” ಎಂದು ಸಲಹೆ ನೀಡಿದರು.

1001285529

ಬ್ಯಾರಿ ಸಮುದಾಯದ ರಾಜಕೀಯ ಮುಖಂಡ ಸುಹೈಲ್ ಕಂದಕ್ ಮಾತನಾಡುತ್ತಾ, “ಬೆಂಗಳೂರಿನಲ್ಲಿರುವ ಬ್ಯಾರಿಗಳನ್ನು ಒಂದುಗೂಡಿಸುವ ಮಹತ್ವದ ಉದ್ದೇಶವನ್ನಿಟ್ಟು, ಕಳೆದ ಒಂದೂವರೆ ವರ್ಷಗಳ ಹಿಂದೆ ಆರಂಭಗೊಂಡ ಬ್ಯಾರಿಸ್ ಸೆಂಟ್ರಲ್ ಕಮಿಟಿ ಸಮುದಾಯದ ನಡುವೆ ಒಳ್ಳೆಯ ಹೆಸರು ಗಳಿಸುವಲ್ಲಿ ಯಶಸ್ವಿಯಾಗಿದೆ. ಅದಕ್ಕೆ ಎಲ್ಲರ ಸಹಕಾರ, ನಿಸ್ವಾರ್ಥ ಸೇವೆ ಕೂಡ ಕಾರಣ. ಬ್ಯಾರಿ ಸಮುದಾಯವು ರಾಜಕೀಯ ಸೇರಿದಂತೆ ಎಲ್ಲಾ ರಂಗಗಳಲ್ಲಿ ಯಶಸ್ಸನ್ನು ಕಾಣಬೇಕು” ಎಂದು ಆಶಿಸಿದರು.

ಸಭೆಯಲ್ಲಿ ಸಂಶುದ್ದೀನ್ ಕುಕ್ಕಾಜೆ ಸ್ವಾಗತಿಸಿದರು. ನಾಸಿರ್ ಕೆಂಪಿ ಧನ್ಯವಾದಗೈದರು. ಸಂಪೂರ್ಣ ಕಾರ್ಯಕ್ರಮವನ್ನು ಬಶೀರ್ ಅಡ್ಯನಡ್ಕ ನಿರೂಪಿಸಿದರು.

1001285527
1001285528
1001285541
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...