ದುಡಿಯುವ ಜನರ ಹಕ್ಕುಗಳ ರಕ್ಷಣೆಗಾಗಿ ನ.26ರಂದು ‘ಬೆಂಗಳೂರು ಚಲೋ’

Date:

ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಒತ್ತಾಯಿಸಿ ಅಸುರಕ್ಷಿತ ಕಾರ್ಮಿಕರ ಐಕ್ಯ ಆಂದೋಲನದ ಅಡಿಯಲ್ಲಿ ನ.26ರಂದು ‘ಬೆಂಗಳೂರು ಚಲೋ’ ಹೋರಾಟ ಹಮ್ಮಿಕೊಳ್ಳಲಾಗಿದೆ. ಅಂದು, ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ದುಡಿಯುವ ಜನರ ಹಕ್ಕುಗಳಿಗಾಗಿ ಆಹೋರಾತ್ರಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕರ್ನಾಟಕ ಶ್ರಮಿಕ ಶಕ್ತಿಯ ರಾಜ್ಯಾಧ್ಯಕ್ಷ ವರದರಾಜೇಂದ್ರ ತಿಳಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಅಸಂಘಟಿತ, ಗುತ್ತಿಗೆ, ಸ್ಕೀಂ ಹಾಗೂ ಕೃಷಿ ಕಾರ್ಮಿಕರನ್ನೊಳಗೊಂಡಂತೆ ಸೇವಾ ಭದ್ರತೆಯಿಲ್ಲದ ಕಾರ್ಮಿಕರ ಒಳಿತಿಗಾಗಿ ಹೋರಾಟ ನಡೆಸಲು ತೀರ್ಮಾನಿಸಿ ಸರಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದ್ದಾರೆ.

ಐಕ್ಯ ಆಂದೋಲನದ ಪ್ರಮುಖ ಹಕ್ಕೊತ್ತಾಯಗಳು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
  1. ಕಾರ್ಮಿಕರ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಿ, ಎಲ್ಲ ರೀತಿಯ ಕಾರ್ಮಿಕರಿಗೂ ಅಗತ್ಯ ಹಾಗೂ ತ್ಪರಿತ ಸಹಾಯ ಮಾಡಲು, ಮಧ್ಯಸ್ಥಿಕೆ ವಹಿಸಲು ಹಾಗೂ ಅವರ ಕುಂದು ಕೊರತೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರವು ಎಲ್ಲ ತಾಲೂಕು, ಜಿಲ್ಲೆ ಹಾಗೂ ಮಹಾನಗರ ಪಾಲಿಕೆ ಮಟ್ಟಗಳಲ್ಲಿ ಕಾರ್ಮಿಕರ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಿಬೇಕು.
  2. ಕನಿಷ್ಠ ವೇತನ, ಅಕುಶಲ ಕಾರ್ಮಿಕರಿಗೆ ಕರ್ನಾಟಕ ಸರ್ಕಾರವು ನಿಗದಿಪಡಿಸಿದ ಕನಿಷ್ಠ ವೇತನವನ್ನು ಎಲ್ಲ ಅಸಂಘಟಿತ ಕಾರ್ಮಿಕರಿಗೆ ನೀಡಬೇಕು. ಈಗಿನ ಕನಿಷ್ಠ ವೇತನಗಳ ಅನುಸೂಚಿಗಳಲ್ಲಿ ಇಲ್ಲದ ಕಾರ್ಮಿಕರನ್ನು ಅವುಗಳಲ್ಲಿ ಸೇರಿಸಬೇಕಾದ ಕನಿಷ್ಠ ವೇತನಗಳನ್ನು ಪ್ರತೀ ವರ್ಷಕನ್ನೂ ಮರ್ಪ್ರೈಸ್‌ ಇಂಡೆಕ್ಸ್ ಪ್ರಕಾರ ಪರಿಷ್ಕರಿಸಬೇಕು.
  3. ಸಾಮಾಜಿಕ ಭದ್ರತಾ ಮಂಡಳಿ ಹಮಾಲಿ, ಸಫಾಯಿ-ನೀರು ಕರ್ಮಚಾರಿಗಳು, ಟೈಲರ್, ತೋಟ ನೇಕಾರ, ಮನೆ ಕೆಲಸದವರು,ಬೀಡಿ ಕಾರ್ಮಿಕರು, ಕೃಷಿ-ಮನರೇಗಾ ಕಾರ್ಮಿಕರು ಮುಂತಾದ ಎಲ್ಲಾ ಅಸುರಕ್ಷಿತ ಕಾರ್ಮಿಕರಿಗಾಗಿ ಸಾಮಾಜಿಕ ಭದ್ರತಾ ಮಂಡಳಿಯನ್ನು ಸ್ಥಾಪಿಸಬೇಕು.
  4. 12 ಗಂಟೆಗಳ ಕೆಲಸದ ಅವಧಿಯನ್ನು ರದ್ದುಗೊಳಿಸಬೇಕು. ಅಂತರ ರಾಷ್ಟ್ರೀಯ ಕಾರ್ಮಿಕ ನಿಯಮದ 8 ಗಂಟೆಗಳ ಕೆಲಸವನ್ನು ಪಾಲಿಸಬೇಕು. ಹೆಚ್ಚುವರಿ ಕೆಲಸಕ್ಕೆ ಎರಡು ಪಟ್ಟು ಓವರ್‌ಮೇತನವನ್ನು ನೀಡಬೇಕು.
  5. ನರೇಗಾ ಕೆಲಸವನ್ನು 200 ದಿನಗಳಿಗೆ ವಿಸ್ತರಿಸಬೇಕು. ನಂಜುಂಡಪ್ಪ ಸಮಿತಿಯ ವರದಿಯ ಪ್ರಕಾರ ಹಿಂದುಳಿದಿರುವ ಎಲ್ಲಾ ತಾಲೂಕುಗಳಲ್ಲಿ ರಾಜ್ಯ ಸರ್ಕಾರದಿಂದ ನರೇಗಾ ಕೆಲಸವನ್ನು 200 ದಿನಗಳಿಗೆ ವಿಸ್ತರಿಸಬೇಕು.
  6. ಶ್ರಮಜೀವಿಗಳನ್ನು ಗುಲಾಮರಂತೆ ನಡೆಸಿಕೊಳ್ಳುವ ಜೀತಗಾರಿಕೆ, ಬಿಟ್ಟಿ ಚಾಕ್ರಿ ಮತ್ತಿತರೆ ಅಮಾನವೀಯ ಪದ್ಧತಿಗಳು ಕೂಡಲೇ ಕೊನೆಗೊಳ್ಳಬೇಕು. ಜೀತವಿ ಮುಕ್ತರ ಸಮಗ್ರ ಪುನರ್ವಸತಿ ತ್ವರಿತ ವಾಗಿಜಾರಿಯಾಗಬೇಕು: ಕರ್ನಾಟಕ ಸರ್ಕಾರದ ಅತ್ಯಂತ ದೋಷಪೂರಿತವಾದ ಮಾದರಿ ಕಾರ್ಯವಿಧಾನವನ್ನು (SOP) ತಕ್ಷಣವೇ ಹಿಂಪಡೆಯಬೇಕು. ಕೊಡಗಿ ನಿನ್ಮನೆಯಲ್ಲಿರುವ ಹಾಗೂ ಗಣಿ ಸ್ಥಳಾಂತರ ಕಾರ್ಮಿಕರಿಗೆ ಸಮಗ್ರ ಪುನರ್ವಸತಿ ಯೋಜನೆಯನ್ನು ಕಲ್ಪಿಸಬೇಕು.
  7. ವಲಸೆ ಕಾರ್ಮಿಕರ ರಕ್ಷಣೆ- ವಲಸೆ ಕಾರ್ಮಿಕರಿಗೆ ರಕ್ಷಣೆ ನೀಡಬೇಕು. ಅವರಿಗೆ ಪಿಡಿಎಸ್ ವ್ಯವಸ್ಥೆಗೆ (ಪಡಿತರಆಹಾರ) ಪ್ರವೇಶವಿರಬೇಕು. ಅವರ ವಸತಿ ಸ್ಥಳದಲ್ಲಿ ನೀರು, ಶೌಚಾಲಯ ಮತ್ತು ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಅವರ ಮಕ್ಕಳಿಗೆ ಶಿಕ್ಷಣ, ವಸತಿಸ ವಸತಿ ಸೌಲಭ್ಯಗಳು ಆರೋಗ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ರಾಜ್ಯಸರ್ಕಾರವು ಬೆಂಬಲಿಸುವಂತೆ ನೀತಿಯನ್ನು ರೂಪಿಸಬೇಕು. ಅವರನ್ನು ವಲಸೆ ಕಾರ್ಮಿಕರ ಅಂತರ-ರಾಜ್ಯವಲಸೆ ನೋಂದಣಿಯಲ್ಲಿ ನೋಂದಾಯಿಸಬೇಕು.
  8. ಅಂಗನವಾಡಿ, ಬಿಸಿಊಟ ಹಾಗೂ ಆಶಾ ಕಾರ್ಯಕರ್ತರನ್ನು ಕಾರ್ಮಿಕರೆಂದೇ ಪರಿಗಣಿಸಬೇಕು. ಗೌರವಧನದ ಬದಲು ಅವರಿಗೆ ಗೌರವದ ವೇತನ ಜಾರಿಯಾಗಬೇಕು. ಇತರ ಕಾರ್ಮಿಕರಂತೆ ಕಾರ್ಮಿಕರಿಗೂ ಸಾಮಾಜಿಕ ಕಲ್ಯಾಣಮಂಡಳಿಯನ್ನು ಸ್ಥಾಪಿಸಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಜನಶಕ್ತಿಯ ಪೂರ್ಣಿಮಾ, ಸಿದ್ದರಾಜು, ಕೆ.ದೇವರಾಜ, ಮಾದೇವ, ರಾಜು. ಶಿಲ್ಪ, ಬಿ.ಕೃಷ್ಣಪ್ಪ ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...