ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಿ ʼಗುಂಡಿ ಮುಕ್ತ ರಸ್ತೆʼಗಳೆಂದು ಘೋಷಿಸುವಂತೆ ಆಯುಕ್ತ ರಾಜೇಂದ್ರ ಚೋಳನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಚಿಕ್ಕಪೇಟೆ ವಿಭಾಗದ ವ್ಯಾಪ್ತಿಯಲ್ಲಿನ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಸುಮಾರು 25 ಕಿ.ಮೀ ವ್ಯಾಪ್ತಿ ದ್ವಿಚಕ್ರ(ಬೈಕ್) ವಾಹನದ ಮೂಲಕ ಸಂಚರಿಸಿ ರಸ್ತೆ ಗುಂಡಿಗಳು, ಕೈಗೊಂಡ ರಸ್ತೆ ದುರಸ್ತಿ ಕಾಮಗಾರಿ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದರು.

ಪರಿಶೀಲನೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ನೀಡಿದ ಪ್ರಮುಖ ಸೂಚನೆ ನೀಡಿದ್ದು, “ತುರ್ತಾಗಿ ಎಲ್ಲ ರಸ್ತೆ ಗುಂಡಿಗಳನ್ನು ಉತ್ತಮ ರೀತಿಯಲ್ಲಿ ಮುಚ್ಚಬೇಕು. ಜಂಕ್ಷನ್‌ಗಳ ಅಭಿವೃದ್ಧಿ, ವೃತ್ತಗಳ ಅಭಿವೃದ್ಧಿ ಮಾಡಬೇಕು. ಹೊಸೂರು ರಸ್ತೆ ಮೇಲ್ಮೈ ಡಾಂಬರೀಕರಣ(resurfacing)ವಾಗಬೇಕು. ರಸ್ತೆ ಬದಿ ತ್ಯಾಜ್ಯ ಬ್ಲಾಕ್ ಸ್ಪಾಟ್‌ಗಳ ತೆರವು ಹಾಗೂ ಬ್ಲಾಕ್ ಸ್ಪಾಟ್‌ಗಳಾಗದಂತೆ ತಡೆಯಬೇಕು. ಪಾದಚಾರಿ ಮಾರ್ಗಗಳನ್ನು ದುರಸ್ತಿಗೊಳಿಸಿ ಪಾದಚಾರಿಗಳ ಸಂಚಾರ ಸುಗಮಗೊಳಿಸಬೇಕು. ಜೆಸಿ ರಸ್ತೆಯಲ್ಲಿನ ನಗರ ಪಾಲಿಕೆ ಜಾಗದ ಸುತ್ತಲೂ ಕಾಂಪೌಂಡ್/ತಂತಿಬೇಲಿ ಹಾಕಬೇಕು. ಜತೆಗೆ ಸದರಿ ಜಾಗದ ಅಭಿವೃದ್ಧಿಗೆ ಡಿಪಿಆರ್ ತಯಾರಿಸಬೇಕು ಎಂದು ತಿಳಿಸಿದರು.

ಸ್ಥಳ ಪರಿಶೀಲನೆ ನಡೆಸಿದ(ಸಂಚರಿಸಿದ) ರಸ್ತೆಗಳು
ಬುಲ್ ಟೆಂಪಲ್ ರೋಡ್, ವಾಣಿವಿಲಾಸ್ ರೋಡ್, ಶಂಕರ್ ಮಠ್ ರೋಡ್, ಕೆ ಆರ್ ರಸ್ತೆ, ನ್ಯಾಷನಲ್ ಕಾಲೇಜ್ ಲೆಫ್ಟ್ ವಾಣಿವಿಲಾಸ್ ರಸೆ, ವೆಸ್ಟ್ ಗೇಟ್, ಆರ್‌ವಿ ರಸ್ತೆ, ಟೀಚರ್ಸ್ ಕಾಲೇಜ್ ಲೆಫ್ಟ್, ಕನಕನಪಾಳ್ಯ ರಸ್ತೆ, ಟಿ ಮರಿಗೌಡ ರಸ್ತೆ, ಹೊಸೂರು ರಸ್ತೆ, ಕೃಂಬಿಗಲ್ ರಸ್ತೆ ವೆಸ್ಟ್ ಗೇಟ್ ರೈಟ್, ಜೆಸಿ ರಸ್ತೆ, ಪೂರ್ಣಿಮಾ ಟಾಕೀಸ್ ರಸ್ತೆ, ಲಾಲ್‌ಬಾಗ್ ರಸ್ತೆಗಳಲ್ಲಿ ಸಂಚರಿಸಿದ ಆಯುಕ್ತರು ಸ್ಥಳ ಪರಿಶೀಲನೆ ನಡೆಸಿದರು.
ಈ ಸುದ್ದೆಇ ಓದಿದ್ದೀರಾ? ಭೀಮಾ ನದಿ ಅಬ್ಬರ | ಪ್ರವಾಹಪೀಡಿತ ಗ್ರಾಮಗಳ ಸಂಖ್ಯೆ 85ಕ್ಕೆ ಏರಿಕೆ; 6,664 ಜನ ಸಂತ್ರಸ್ತರ ರಕ್ಷಣೆ
ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಮುಖ್ಯ ಅಭಿಯಂತ ವಿಜಯಕುಮಾರ್ ಹರಿದಾಸ್, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಎಇಇ, ಎಇ, ಜೆಇ ಅಧಿಕಾರಿಗಳು, ಮಾರ್ಷಲ್‌ಗಳು ಸೇರಿದಂತೆ ಸಂಬಂಧಪಟ್ಟವರು ಇದ್ದರು.





