ಬೆಂಗಳೂರು | ರಾಜ್ಯ ಸರ್ಕಾರ ಪುಸ್ತಕೋದ್ಯಮವನ್ನು ಕಡೆಗಣಿಸುತ್ತಿದೆ: ಬರಹಗಾರ ನಿಡಸಾಲೆ ಪುಟ್ಟಸ್ವಾಮಯ್ಯ ಆರೋಪ

Date:

ರಾಜ್ಯ ಸರ್ಕಾರವು ಪುಸ್ತಕೋದ್ಯಮ ವನ್ನು ಕಡೆಗಣಿಸುತ್ತಿದೆ ಅದರಲ್ಲಿಯೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯನ್ನು ಉನ್ನತೀಕರಿಸಲು ಆಯುಕ್ತಾಲಯವನ್ನು ಮಾಡಿ ಹೋಗಿ ಅದೋಗತಿಗಿಳಿಸಿದೆ ಎಂದು ಕರ್ನಾಟಕ ರಾಜ್ಯದ ಪ್ರಕಾಶಕರು, ಲೇಖಕರು ಮತ್ತು ಮುದ್ರಕರ ಒಕ್ಕೂಟದ ಪ್ರತಿನಿಧಿಗಳ ಜತೆಗೆ ಕರ್ನಾಟಕ ಬರಹಗಾರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಿಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆಸಿದ ಪ್ರತಿಭಟನಾ ಪೂರ್ವಬಾವಿ ಸಭೆಯಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಪುಸ್ತಕ ಖರೀದಿ ನೀತಿ ಮತ್ತು ವಿಳಂಬ ಧೋರಣೆಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತ ಮಾತನಾಡಿದರು.

“ಸಾರ್ವಜನಿಕ ಇಲಾಖೆ ಪ್ರಕಾಶಕರು, ಲೇಖಕರು ಮತ್ತು ಮುದ್ರಕರನ್ನು ಕಡೆಗಣಿಸುತ್ತಿದೆ. ಇಲಾಖೆಯ ಆಯುಕ್ತರು ಮೈಮರೆತು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇವಲ ರಾಜಕಾರಣಿಗಳ ರೀತಿ ಭರವಸೆಗಳನ್ನು ನೀಡುತ್ತ ಕಾಲಾಹರಣ ಮಾಡುತಿದ್ದಾರೆ. ಕಮಿಷನರೆಟ್ ಆದ ದಿನದಿಂದ ಈವರೆಗೆ ಇಲಾಖೆಯಲ್ಲಿ ಯಾವುದೇ ಆಡಳಿತಾತ್ಮಕ ಬದಲಾವಣೆಗಳನ್ನು ಮಾಡದೆ ಪ್ರಕಾಶಕರು ಮತ್ತು ಲೇಖಕರನ್ನು ಕಂಬಸುತ್ತಿಸುತ್ತಿದ್ದಾರೆ” ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಲೇಖಕರು

“ಇಂತಹ ನಡೆಯ ವಿರುದ್ದ ನವೆಂಬರ್ 28ರಂದು ಶುಕ್ರವಾರ ರಾಜ್ಯದ ಎಲ್ಲ ಭಾಗದ ಪ್ರಕಾಶಕ ಸಂಘಟನೆಗಳು ಮತ್ತು ಹೆಸರಾಂತ ಸಾಹಿತಿಗಳು ಜೊತೆ ಸೇರಿ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಮಾಡಲಾಗುವುದು. ಅದರ ಮುಂದುವರೆದ ಭಾಗವಾಗಿ ಮುಂದಿನ ದಿನಗಳಲ್ಲಿ ಆಯುಕ್ತರ ಕಚೇರಿ ಮತ್ತು ಸಚಿವರ ಮನೆಯ ಮುಂಭಾಗದಲ್ಲಿ ರಾಜ್ಯದ ಎಲ್ಲ ಸಾಹಿತಿಗಳು, ಪ್ರಕಾಶಕರು, ಮುದ್ರಕರು ಧರಣಿ ಕೂರುತ್ತೇವೆ. ಅದಕ್ಕೂ ಬಗ್ಗದಿದ್ದರೆ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿಯೂ ಪ್ರತಿಭಟನೆ ನಡೆಸಿ ಹೋರಾಟವನ್ನು ತೀರ್ವಗೊಳಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾದ ವಸುಂಧರಾ ಭೂಪತಿಯವರು ಮಾತನಾಡಿ, “ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಚಿವರ ದಿವ್ಯ ನಿರ್ಲಕ್ಷದಿಂದ ಪುಸ್ತಕೋದ್ಯಮ ಸೊರಗುತ್ತಿದೆ. ಈ ಸಭೆ ಪ್ರಕಾಶಕರಿಗೆ ಹೋರಾಟದ ಚೈತನ್ಯವನ್ನು ತುಂಬಿದ್ದು, ಎಲ್ಲರೂ ಒಟ್ಟಾಗಿ ಹೋರಾಡೋಣ” ಎಂದರು.

ಹಿರಿಯ ಪತ್ರಕರ್ತೆ ಆರ್. ಪೂರ್ಣಿಮ ಮಾತನಾಡಿ, “ಈ ಹೋರಾಟ ಬಹಳ ಹಿಂದೆಯೇ ಆಗಬೇಕಿತ್ತು. ಈಗಲಾದರೂ ದೊಡ್ಡಮಟ್ಟದಲ್ಲಿ ಹೋರಾಟ ನಡೆಸದಿದ್ದರೆ ಉಳಿಗಾಲವಿಲ್ಲ” ಎಂದರು.

ಮೈಸೂರಿನ ಸಂವಹನ ಪ್ರಕಾಶನದ ಲೋಕಪ್ಪ ಅವರು ಮಾತನಾಡಿ, “ಸರ್ಕಾರ ಕಾಲಕ್ಕೆ ತಕ್ಕಂತೆ ಪುಸ್ತಕದ ಪುಟವಾರು ಬೆಲೆಯನ್ನು ಹೆಚ್ಚಿಸಿಲ್ಲ. ಅದೂ ಅಲ್ಲದೆ 2022ರ ಪಟ್ಟಿಯ ಬಿಡುಗಡೆ ಮಾಡಿಲ್ಲ. ವಾರ್ಷಿಕ ಬಜೆಟ್ ಕೂಡ ಅಂತಿಮವಾಗದೇ ಲೇಖಕರು/ಪ್ರಕಾಶಕರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಆಯುಕ್ತರ ಈ ದುರಾಡಳಿತದ ಧೋರಣೆ ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಲಬುರಗಿಯ ಸಿದ್ದಲಿಂಗೇಶ್ವರ ಪ್ರಕಾಶನದ ಬಸವರಾಜ ಕೊನೆಕ್ ಮಾತನಾಡಿ, “ಸಂಘಟನೆ ಹಮ್ಮಿಕೊಳ್ಳುವ ಧರಣಿಗೆ, ಪ್ರತಿಭಟನೆಗೆ ನಮ್ಮ ಭಾಗದ ಸಾಹಿತಿಗಳನ್ನು ಕರೆತರುತ್ತೇನೆ. ನಮ್ಮ ಉದ್ದೇಶ ಈಡೇರುವವರೆಗೆ ನಮ್ಮ ಹೋರಾಟ ನಿಲ್ಲಬಾರದು” ಎಂಬ ಕಿವಿಮಾತು ಹೇಳಿದರು.

ಸೃಷ್ಟಿ ನಾಗೇಶ್ ತಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ, “ಯುವ ಸಮೂಹವನ್ನು ಸ್ವಯಂ ಉದ್ಯೋಗ ಮಾಡಿ ಎಂದು ಸರ್ಕಾರ ಪ್ರೇರೇಪಿಸುತ್ತಿದೆ. ಆದರೆ ಗ್ರಂಥಾಲಯ ಇಲಾಖೆಯ ಆಮೆಗತಿಯ ಈ ನಡೆ ಯುವ ಪ್ರಕಾಶಕರ/ಬರಹಗಾರರ ಉತ್ಸಾಹವನ್ನು ಕುಂಠಿತಗೊಳಿಸಿದೆ. ಇಲಾಖೆಯಲ್ಲಿ ಪ್ರಕಾಶಕರನ್ನು ಪ್ರೋತ್ಸಾಹಿಸಲು ಸರ್ಕಾರವೇ ಹಿಂದೆ ಜಾರಿಗೆ ತಂದಿದ್ದ ಯೋಜನೆಗಳಾದ ಏಕಗವಾಕ್ಷಿ ಪುಸ್ತಕ ಖರೀದಿ ಯೋಜನೆ, ಆರ್‌ಆರ್‌ಎಲ್‌ಎಫ್, ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಸೇರಿದಂತೆ ಮುಂತಾದ ಯೋಜನೆಗಳು ಹಳ್ಳ ಹಿಡಿದಿವೆ. ಈಗಾಗಲೇ 5ರಿಂದ 6 ಬಾರಿ ಮುಖ್ಯಮಂತ್ರಿ, ಸಚಿವರಿಗೆ ಮನವಿ ಕೊಟ್ಟಿದ್ದರೂ ಯಾವುದೇ ಮನವಿಗಳಿಗೂ ಸ್ಪಂದಿಸದೆ, ಜಾಣ ಕಿವುಡು ಪ್ರದರ್ಶಿಸುತ್ತಿರುವುದು ಖಂಡನೀಯ” ಎಂದರು.

ಈ ಸುದ್ದಿ ಓದಿದ್ದೀರಾ? ಯಲ್ಲಾಪುರ | ರಾತ್ರಿ ಪೂರ್ತಿ ಅಕ್ರಮವಾಗಿ ಮರಳು ಸಾಗಾಟ; ಅರಣ್ಯ ಇಲಾಖೆಯ ಮೌನಕ್ಕೆ ಸಾರ್ವಜನಿಕರ ಆಕ್ರೋಶ

“ಎಂಟು ಜ್ಞಾನ ಪೀಠ ಮತ್ತು ಬೂಕರ್ ಪ್ರಶಸ್ತಿಯನ್ನು ಪಡೆದಿರುವ ನಮ್ಮ ಸಾಹಿತ್ಯ ವಲಯ ಇತ್ತೀಚಿಗೆ ಹಳ್ಳ ಹಿಡಿದಿರುವುದು ಸರ್ಕಾರದ ಬೇಜವಾಬ್ದಾರಿತನಕ್ಕೆ ಎಂಬುದು ಸ್ಪಷ್ಟ ಉದಾಹರಣೆಯಾಗಿದೆ. ಇಷ್ಟು ಮಂದಿ ಲೇಖಕ/ಪ್ರಕಾಶಕರು ಒಂದೆಡೆ ಸೇರಿರುವುದು ಐತಿಹಾಸಿಕವಾದದ್ದು” ಎಂದರು.

ದಾಮಿನಿ ಸತೀಶ್, ಅಭಿನವ ರವಿಕುಮಾರ್, ಲೇಖಕ ವಸುದೇಂದ್ರ, ಪ್ರಕಾಶಕರಾದ ಚಂದ್ರಕೀರ್ತಿ, ಪ್ರವೀಣ್ ಜಗಾಟ, ಬಿ.ಕೆ ಸುರೇಶ್, ಮಂಡ್ಯ ಸಂಕಥನದ ರಾಜೇಂದ್ರ ಪ್ರಸಾದ್, ಧಾತ್ರಿ ಉಮೇಶ್, ರಾಜೇಶ್ ಹೊನ್ನೇನಹಳ್ಳಿ, ಭೂಮಿ ಬುಕ್ಸ್‌ನ ವಿಶಾಲಾಕ್ಷಿ ಶರ್ಮ, ಅವಿರತ ಹರೀಶ್, ಸ್ವ್ವಾನ್ ಕೃಷ್ಣಮೂರ್ತಿ, ಸಿರಿವರ ರವೀಂದ್ರನಾಥ್, ಸಾಹಿತ್ಯಲೋಕದ ರಘುವೀರ್, ಅಮೂಲ್ಯ ಪುಸ್ತಕದ ಕೃಷ್ಣ ಚೆಂಗಡಿ ಹಲವು ಪ್ರಕಾಶಕರು, ಲೇಖಕರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...