ಬಿಎಂಟಿಸಿ ಕಂಡಕ್ಟರ್‌ಗಳು UPI ಹಣವನ್ನು ಜೇಬಿಗಿಳಿಸಿದ ಪ್ರಕರಣ: ಹೊಸ ವ್ಯವಸ್ಥೆಗೆ ಚಿಂತನೆ

Date:

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಮೂವರು ಕಂಡಕ್ಟರ್‌ಗಳು ಯುಪಿಐ ಸ್ಕ್ಯಾನರ್‌ ಟಿಕೆಟ್‌ ಹಣವನ್ನು ದುರುಪಯೋಗಪಡಿಸಿಕೊಂಡ ಕಾರಣಕ್ಕಾಗಿ ಕರ್ತವ್ಯದಿಂದ ಅಮಾನತುಗೊಳಸಲಾಗಿದೆ.

ಬೆಂಗಳೂರಿನ ಬಹುತೇಕ ಜನರು ತಮ್ಮ ದಿನನಿತ್ಯದ ಸಂಚಾರಕ್ಕಾಗಿ ಅವಲಂಬಿಸಿರುವ ಬಿಎಂಟಿಸಿ ಬಸ್‌ಗಳಲ್ಲಿ ಸಾರ್ವಜನಿಕರು ಪಾವತಿಸುವ ಹಣವನ್ನು ವೈಯಕ್ತಿಕ ಯುಪಿಐ ಐಡಿಗಳನ್ನು ಬಳಸಿಕೊಂಡು ದುರ್ಬಳಕೆ ಮಾಡಿಕೊಳ್ಳಲಾಗಿದ್ದು ಸುರೇಶ್‌, ಮಂಚೇಗೌಡ ಮತ್ತು ಅಶ್ಫಕ್‌ ಖಾನ್‌ ಎಂಬುವವರು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2025 ಡಿಸೆಂಬರ್‌ನಲ್ಲಿ ಯುಪಿಐ ಆಧಾರಿತ ಟಿಕೆಟ್‌ ವ್ಯವಸ್ಥೆಯ ಬಳಕೆಯಲ್ಲಿ ಗಂಭೀರ ಅಕ್ರಮಗಳು ಕಂಡುಬಂದಿದೆ. ಅದರ ಆಧಾರದ ಮೇಲೆ ತನಿಖೆ ನಡೆಸಿದಾಗ ಕಂಡಕ್ಟರ್‌ಗಳು ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್‌ಗಳನ್ನು ಬಳಸುತ್ತಿರುವುದು ಕಂಡು ಬಂದಿದ್ದು, ನಿಯಮಗಳನ್ನು ಉಲ್ಲಂಘಿಸಿ ಸಂಚಾರ ಪಾವತಿಯನ್ನು ಸಂಗ್ರಹಿಸಿರುವುದು ತಿಳಿದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಿಎಂಟಿಸಿ ಅಧಿಕಾರಿಗಳ ಪ್ರಕಾರ, “ಕಂಡಕ್ಟರ್‌ಗಳು ಯುಪಿಐ ಮೂಲಕ ಹಣ ಸಂಗ್ರಹಿಸುವಾಗ ಚಾಲಕರಿಗೆ ಟಿಕೆಟ್‌ ನೀಡುವುದನ್ನು ನಿರಾಕರಿಸಿದ್ದಾರೆ. ಇದರಲ್ಲಿ 3 ಸಾವಿರದಿಂದ 54 ಸಾವಿರದ ತನಕ ಹಣವನ್ನು ಕಂಡಕ್ಟರ್‌ಗಳು ತಮ್ಮ ಖಾತೆಗಳಿಗೆ ಪಡೆದಿದ್ದಾರೆ” ಎಂದು ಗುರುತಿಸಲಾಗಿದೆ

ವಿಚಾರಣೆಯ ಸಂದರ್ಭದಲ್ಲಿ ಮೂರು ಕಂಡಕ್ಟರ್‌ಗಳು ನಿಯಮಗಳ ವಿರುದ್ಧವಾಗಿ ಹಣದು ತೆಗೆದುಕೊಂಡಿರುವುದು ತಿಳಿದಿದೆ. ಮುಂದಿನ ತನಿಖೆಯವರೆಗೆ ಮೂರು ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ. ಅಮಾನತುಗೊಂಡ ಮೂರು ಸಿಬ್ಬಂದಿಗಳಲ್ಲಿ ಇಬ್ಬರು ಕಂಡಕ್ಟರ್‌ಗಳು ಹಾಗೂ ಮತ್ತೊಬ್ಬರು ಚಾಲಕ-ಕಂಡಕ್ಟರ್ ಆಗಿದ್ದಾರೆ.

“ಮೂರು ಸಿಬ್ಬಂದಿಗಳು ಟಿಕೆಟ್‌ಗಳನ್ನು ನೀಡದೆ ವೈಯಕ್ತಿಕ ಯುಪಿಐ ಖಾತೆಗಳ ಮೂಲಕ ಪ್ರಯಾಣದ ಮೊತ್ತವನ್ನು ಸಂಗ್ರಹಿಸಿರಬಹುದು. ಹಣ ಪಾವತಿಸಿದ ನಂತರ ಟಿಕೆಟ್‌ ನೀಡುವುದು ಕಡ್ಡಾಯವೆಂದು ಪ್ರಯಾಣಿಕರಿಗೆ ತಿಳಿದಿರದ ಕಾರಣವೇ, ಈ ರೀತಿಯಲ್ಲಿ ದುರುಪಯೋಗಪಡಿಸಿಕೊಂಡಿರಬಹುದು” ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೊಸ ವ್ಯವಸ್ಥೆ

“ಬಿಎಂಟಿಸಿಯು ಡೈನಾಮಿಕ್‌ QR ಆಧಾರಿತ UPI ಪಾವತಿ ವ್ಯವಸ್ಥೆಯನ್ನು ಜಾರಿಗೆ ತರುವ ಪ್ರಕ್ರಿಯೆಯಲ್ಲಿ ತೊಡಗಿದೆ. ಹೊಸ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ, ಭದ್ರತೆಯನ್ನು ಕಾಯ್ದುಕೊಳ್ಳುವ ಮತ್ತು ಶುಲ್ಕ ಸಂಗ್ರಹಣೆಗಾಗಿ ಫೂಲ್‌ಪ್ರೂಫ್‌ (foolproof mechanism) ಕಾರ್ಯವಿಧಾನವನ್ನು ರಚಿಸಲಾಗುತ್ತಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಬಿಎಂಟಿಸಿ ಅಧಿಕಾರಿಗಳ ಇಂತಹ ದುರ್ನಡತೆಯನ್ನು ಸಹಿಸಲಾರದು. ಸಾರ್ವಜನಿಕ ಹೊಣೆಗಾರಿಗೆ, ಕೆಲಸದಲ್ಲಿ ಪಾರದರ್ಶಕತೆ ಹಾಗೂ ಸಾರ್ವಜನಿಕ ಆದಾಯವನ್ನು ಕಾಪಾಡುವ ಬಗ್ಗೆ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ತರಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಬಿಎಂಟಿಸಿ ನಿಗಮ ಮಂಡಳಿಯ ಉಪಾಧ್ಯಕ್ಷರಾದ ನಿಕೇತ್ ರಾಜ್ ಮೌರ್ಯ ʼಈದಿನʼ ಜೊತೆ ಮಾತನಾಡಿ “ಬಿಎಂಟಿಸಿ ಕಂಡಕ್ಟರ್‌ಗಳ ವಿರುದ್ಧ ಈಗಾಗಲೇ ಶಿಸ್ತಿನ ಕ್ರಮಕೈಗೊಳ್ಳಲಾಗಿದೆ. ನಮ್ಮಲ್ಲಿ ಈ ರೀತಿಯ ಪ್ರಕರಣಗಳನ್ನು ಪತ್ತೆ ಹಚ್ಚಲು ಪ್ರತ್ಯೇಕ ಇಲಾಖೆ ಇದೆ. ಈ ತಪ್ಪನ್ನು ಮುಂದೆ ಆಗದ ರೀತಿಯಲ್ಲಿ ನೋಡಿಕೊಳ್ಳುತ್ತೇವೆ. ಹೊಸ ವ್ಯವಸ್ಥೆ ಜಾರಿಯ ಬಗ್ಗೆ ಚಿಂತಿಸಲಾಗಿದೆ” ಎಂದರು.

Manoj
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

37 ಸಾವಿರ ಕೋಟಿ ಗುತ್ತಿಗೆ ಹಣ ಬಾಕಿ; ತಕ್ಷಣ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ

ರಾಜ್ಯ ಸರಕಾರ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರಿಗೆ ಬರಬೇಕಾದ ಬಾಕಿ ಮೊತ್ತ 37,370...

ಕರ್ನಾಟಕ ಶಾಲಾ ಶಿಕ್ಷಣದ ಸ್ಥಿತಿಗತಿ ಕುರಿತ ಒಂದು ದಿನದ ವಿಚಾರ ಸಂಕಿರಣ: ಒಮ್ಮತದ ನಿರ್ಣಯ

ಒಂದು ಸಮಗ್ರ ನೀತಿಯು ಅಸ್ತಿತ್ವದಲ್ಲಿಲ್ಲದಿದ್ದಾಗ ನೀತಿ, ಕಾರ್ಯಕ್ರಮ, ತೀರ್ಮಾನಗಳು ಸಂವಿಧಾನ ಹಾಗೂ...

ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಿ : ಮಠಾಧಿಪತಿಗಳ ಒಕ್ಕೂಟದಿಂದ ಸಿಎಂಗೆ ಮನವಿ

ವಿಶ್ವಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ಬೀದರ್ ಜಿಲ್ಲೆಯ ಬಸವಕಲ್ಯಾಣ ನೆಲದಲ್ಲಿ ಸಾರ್ವಜನಿಕ...