ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಟಿಕೆಟ್ ಮತ್ತು ಬ್ಯಾಗೇಜ್ ಪರಿಶೀಲಿಸುವ ನೆಪದಲ್ಲಿ ದಕ್ಷಿಣ ಕೊರಿಯಾ ಮೂಲದ ಮಹಿಳಾ ಪ್ರವಾಸಿಯೊಬ್ಬರ ಮೇಲೆ ಸಿಬ್ಬಂದಿಯೊಬ್ಬರು ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜನವರಿ 19 ರಂದು ಈ ಘಟನೆ ನಡೆದಿದ್ದು, ಸಂತ್ರಸ್ತೆ ನೀಡಿದ ದೂರಿನನ್ವಯ ಆರೋಪಿ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ಕಿಮ್ ಸುಂಗ್ ಕ್ಯುಂಗ್ ಅವರು ಮಾಧ್ಯಮದ ಮುಂದೆ ತಮ್ಮ ಗುರುತನ್ನು ಬಹಿರಂಗಪಡಿಸಲು ಸಮ್ಮತಿಸಿದ್ದು, ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಎಫ್‌ಐಆರ್ (FIR) ನಲ್ಲಿ ದಾಖಲಾಗಿರುವ ಮಾಹಿತಿಯ ಪ್ರಕಾರ, ಸಂತ್ರಸ್ತ ಮಹಿಳೆ ಇಮಿಗ್ರೇಷನ್ ಪ್ರಕ್ರಿಯೆಯನ್ನು ಮುಗಿಸಿದ ನಂತರ ಆರೋಪಿಯು ಮಹಿಳೆಯನ್ನು ತಡೆದಿದ್ದಾನೆ. ಮಹಿಳೆಯ ಚೆಕ್-ಇನ್ ಬ್ಯಾಗ್‌ನಲ್ಲಿ ‘ಬೀಪಿಂಗ್ ಸೌಂಡ್’ (ಶಬ್ದ) ಕೇಳಿಸುತ್ತಿದೆ ಎಂದು ಆತ ಸುಳ್ಳು ಹೇಳಿದ್ದಾನೆ. ಅಲ್ಲದೆ, ಬ್ಯಾಗ್ ಅನ್ನು ಕೌಂಟರ್‌ನಲ್ಲಿ ವಿಸ್ತೃತವಾಗಿ ಪರಿಶೀಲಿಸಿದರೆ ವಿಮಾನ ಏರುವುದು ತಡವಾಗಬಹುದು ಎಂದು ನಂಬಿಸಿ, ‘ವೈಯಕ್ತಿಕ ತಪಾಸಣೆ’ ನಡೆಸುವ ನೆಪದಲ್ಲಿ ಅವರನ್ನು ಶೌಚಾಲಯದ ಬಳಿ ಕರೆದೊಯ್ದಿದ್ದಾನೆ.
ಈ ದಿನ ಸಂಪಾದಕೀಯ | ರಾಜ್ಯಪಾಲರು ಕೇಂದ್ರದ ಕೈಗೊಂಬೆಯಲ್ಲ- ಆಯಾ ರಾಜ್ಯದ ಜನಾದೇಶ ಧಿಕ್ಕರಿಸುವ ನಡೆ ಸಂವಿಧಾನಬಾಹಿರ
ಅಲ್ಲಿ ಆರೋಪಿಯು ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಮಹಿಳೆ ಪ್ರತಿರೋಧ ತೋರಿದಾಗ, “ಓಕೆ, ಥ್ಯಾಂಕ್ಯೂ” ಎಂದು ಹೇಳಿ ಅಲ್ಲಿಂದ ತೆರಳಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯಿಂದ ಆಘಾತಕ್ಕೊಳಗಾದ ಮಹಿಳೆ ತಕ್ಷಣವೇ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ, ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.





