ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ನೀಡುವ ‘ಡಾ.ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿ-2025ಗೆ ಕೃತಿಗಳನ್ನು ಆಹ್ವಾನಿಸುತ್ತಿದ್ದು, ಕೃತಿಗಳನ್ನು ಕಳುಹಿಸಲು ಮಾರ್ಚ್ 15 ಕೊನೆಯ ದಿನವಾಗಿದೆ.
ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಅಧ್ಯಕ್ಷೆ ಹೆಚ್ ಆರ್ ಸುಜಾತಾ ಅವರು ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದು, “ಈ ಪ್ರಶಸ್ತಿ ಪಡೆಯಲು 2025ನೇ ಸಾಲಿನಲ್ಲಿ ಪ್ರಕಟವಾದ ಕಥಾ ಸಂಕಲನಗಳನ್ನು ಕಳುಹಿಸಬೇಕಾಗಿದೆ. ಈ ಸಾಲಿನಲ್ಲಿ ಪಕಟವಾಗಿ, ಮೊದಲ ಮುದ್ರಣವಾಗಿರುವ ಕಥಾ ಸಂಕಲನಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುತ್ತಿದ್ದು, ಪ್ರಕಾಶಕರು ಅಥವಾ ಲೇಖಕರು ಕೃತಿಯ ಮೂರು ಪ್ರತಿಗಳನ್ನು ಪ್ರತಿಷ್ಠಾನದ ವಿಳಾಸಕ್ಕೆ ಕಳುಹಿಸಬೇಕು” ಎಂದು ತಿಳಿಸಿದ್ದಾರೆ.
ಪ್ರಶಸ್ತಿಯು 50 ಸಾವಿರ ರೂಪಾಯಿ ಬಹುಮಾನ, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರವನ್ನು ಒಳಗೊಂಡಿದ್ದು, ಆಯ್ಕೆಯಾದ ಕಥಾ ಸಂಕಲನಕ್ಕೆ 2026ರ ಜೂನ್ ತಿಂಗಳಿನಲ್ಲಿ, ಮಂಡ್ಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕೋರ್ಟ್ ಗೆ ಬಾಂಬ್ ಬೆದರಿಕೆ ಸಂದೇಶ; ಪೊಲೀಸ್ ತನಿಖೆ ಬಳಿಕ ಕಲಾಪ ಆರಂಭ
ಕೃತಿಗಳನ್ನು ಕಳುಹಿಸಬೇಕಿರುವ ವಿಳಾಸ
ಅಧ್ಯಕ್ಷರು, ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ(ರಿ), ನಂ.15, 2ನೇ ಅಡ್ಡರಸ್ತೆ, ನಿಸರ್ಗ ಬಡಾವಣೆ, ಉಲ್ಲಾಳ ಆರ್.ಟಿ.ಓ. ಕಚೇರಿ ಹತ್ತಿರ, ಬೆಂಗಳೂರು-560 091 ಈ ವಿಳಾಸಕ್ಕೆ ಕೃತಿಗಳನ್ನು ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ PH: 99803 05837ಕ್ಕೆ ಸಂಪರ್ಕಿಸಬಹುದಾಗಿದೆ.





