ಉದ್ಯಮಿ ರೈತ : ವಾಣಿಜ್ಯ ಮೇಳದಲ್ಲಿ 250ಕ್ಕೂ ಹೆಚ್ಚು ಸಾವಯವ ಮಳಿಗೆಗಳ ದಂಡು

Date:

ʼಉತ್ಪಾದನೋತ್ತರ ಕೃಷಿ – ರೈತರ ಸಬಲೀಕರಣʼ ಪರಿಕಲ್ಪನೆಯಡಿ ರೈತರನ್ನು ಉದ್ಯಮಿಗಳನ್ನಾಗಿಸುವ ಆಶಯದಡಿ ಕೃಷಿ ಇಲಾಖೆಯು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ʼಅಂತರರಾಷ್ಟ್ರೀಯ ವಾಣಿಜ್ಯ ಮೇಳ-2026ʼಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಫೆ.06 ರಂದು ಚಾಲನೆ ನೀಡಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 104 ಸಾಧಕರಿಗೆ ಕೃಷಿ ಪ್ರಶಸ್ತಿ ಹಾಗೂ 18 ಸಾಧಕರಿಗೆ ಕೃಷಿ ಪಂಡಿತ್‌ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು, ಅನೇಕ ಸಾವಯವ ಕೃಷಿಕರು ಮಳಿಗೆಗಳನ್ನು ಹಾಕಿದ್ದರು. ಕೃಷಿಕರನ್ನು ಉದ್ಯಮಿಗಳನ್ನಾಗಿ ಹಾಗೂ ರೈತರಿಂದ ನೇರವಾಗಿ ಮಾರಾಟ ಮಾಡುವ ಉದ್ದೇಶವೇ ಈ ಮೇಳದ ಪ್ರಮುಖ ಗುರಿಯಾಗಿದೆ. ಸುಮಾರು 250 ಕ್ಕೂ ಹೆಚ್ಚು ಮಳಿಗೆಗಳು ಮೇಳದಲ್ಲಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತುಮಕೂರು ಜಿಲ್ಲಾ ಪ್ರಾದೇಶಿಕ ಸಹಕಾರಿ ಸಾವಯವ ಕೃಷಿಕರ ಸಂಘದ ಫೆಡರೇಶನ್‌, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಪ್ರಾಂತಿಯ ಸಹಕಾರ ಸಾವಯವ ಕೃಷಿ ಸಂಘಗಳ ಒಕ್ಕೂಟ, ವಿಜಯಪುರ ಜಿಲ್ಲಾ ಪ್ರಾದೇಶಿಕ ಸಹಕಾರಿ ಸಾವಯವ ಕೃಷಿಕರ ಸಂಘದ ಫೆಡರೇಶನ್‌, ಹುನಗುಂದ ತೋಟಗಾರಿಕಾ ಫಾರ್ಮರ್‌ ಪ್ರೊಡ್ಯೂಸರ್‌ ಕಂಪನಿ, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ, ಕರ್ನಾಟಕ ಸೋಪ್ಸ್‌ ಮತ್ತು ಡಿಟರ್ಜೆಂಟ್‌ ಲಿಮಿಟೆಡ್‌ ಹೀಗೆ 50 ಕ್ಕೂ ಹೆಚ್ಚು ಸರ್ಕಾರಿ ಮಳಿಗೆಗಳನ್ನು ಮೇಳದಲ್ಲಿ ಹಾಕಲಾಗಿತ್ತು.

krishi 1

ಅದೇ ರೀತಿಯಲ್ಲಿ ಸರ್ಕಾರೇತರ ಉದ್ಯಮಿಗಳಾದ ಮೈಸೂರಿನ ಸಹಜ ಆರ್ಗ್ಯಾನಿಕ್ಸ್‌, ತುಮಕೂರಿನ ಕಲ್ಪ ಆಗ್ರೋ ಉತ್ಪನ್ನಗಳು, ಮಂಡ್ಯದ ಸಂಪೂರ್ಣ ಸಾವಯವ ಕೃಷಿಕರ ಸಂಘ, ಬೆಂಗಳೂರಿನ ನ್ಯೂಟ್ರಿಯೋ ಕಂಪನಿ, ಹಾವೇರಿ ಜಿಲ್ಲೆಯ ಕುರಿ ಉಣ್ಣೆಯ ಉತ್ಪಾದನ ಕೇಂದ್ರ ಸೇರಿದಂತೆ 200ಕ್ಕೂ ಹೆಚ್ಚು ಮಳಿಗೆಗಳನ್ನು ನಿಯೋಜನೆ ಮಾಡಲಾಗಿತ್ತು.  

50ಕ್ಕೂ ಹೆಚ್ಚು ದೇಶಿ ತಳಿಗಳನ್ನು ಸಂರಕ್ಷಣೆ ಮಾಡಿದ್ದಕ್ಕಾಗಿ 2008ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಕೋಲಾರ ಜಿಲ್ಲೆ, ಮುಳಬಾಗಿಲು ತಾಲ್ಲೂಕಿನಿಂದ ʼಪಾಪಮ್ಮʼ ಬಂದಿದ್ದರು. ʼಈದಿನʼ ಜೊತೆ ಮಾತನಾಡಿದ ಅವರು “ಅವರೆ ಬೀಜ, ತೊಗರಿ ಬೀಜ, ಪಡವಲಕಾಯಿ, ಬೆಂಡೆಕಾಯಿ, ನುಗ್ಗೆಕಾಯಿ, ಹೀರೆಕಾಯಿ, ಕಡ್ಡಿರಾಗಿ, ಮುದ್ದುರಾಗಿ, ಬಿಳಿ ನವಣೆ, ಹಾಲುಸಾಮೆ, ಕೆಂಪುರಾಗಿ, ಗಿಡ್ಡರಾಗಿ, ಕರಿರಾಗಿ, ನಾಟಿ ಹಾರಕ ಸೇರಿದಂತೆ ಅನೇಕ ದೇಶಿ ತಳಿಗಳನ್ನು ಸಂರಕ್ಷಣೆ ಮಾಡುತ್ತ ಬಂದಿದ್ದೇವೆ. ಇವೆಲ್ಲವನ್ನು ಸಾವಯವ ಕೃಷಿಯ ಮೂಲಕವೇ ಉಳಿಸಿಕೊಂಡಿದ್ದೇವೆ. ನಮ್ಮ ದೇಶಿ ತಳಿಗಳು ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ” ಎಂದು ಅಭಿಪ್ರಾಯಪಟ್ಟರು.

krishii

ಮೇಳದಲ್ಲಿ ಮಳಿಗೆಯನ್ನು ಹಾಕಿದ್ದ ಬೆಟ್ಟಸ್ವಾಮಿ ʼಈದಿನʼ ಜೊತೆ ಮಾತನಾಡಿ “ನಮ್ಮ ಸಂಪೂರ್ಣ ಸಾವಯವ ಕೃಷಿಕರ ಸಂಘವಿದೆ. ಅದರಲ್ಲಿ 236 ರೈತರಿದ್ದೀವಿ. ನಾವು ಬೆಳೆದಿರುವಂತ ಪದಾರ್ಥಗಳನ್ನು ನೇರವಾಗಿ ಮಾರುಕಟ್ಟೆ ಮಾಡಲು ಮೇಳಕ್ಕೆ ಬಂದಿದ್ದೇವೆ. ನಮ್ಮ ಸಂಘದಿಂದ ಸಾವಯವ ಕೃಷಿಯ ಬಗ್ಗೆ ತರಬೇತಿ ಸಹ ನೀಡುತ್ತೇವೆ. ನಮ್ಮ ಭೂಮಿ ಉಳಿದರೆ ನಮ್ಮ ಮುಂದಿನ ಬದುಕು ಉಳಿಯುತ್ತದೆ. ಹೊಸದಾಗಿ ಸಾವಯವ ಕೃಷಿ ಮಾಡಲು ಬಯಸುವ ರೈತರು ನಮಗೆ ಸಂಪರ್ಕ ಮಾಡಬಹುದು” ಎಂದರು. ಅವರ ಮೊಬೈಲ್‌ ಸಂಖ್ಯೆ – 9844608835

ಫೆ 06 ರಿಂದ 08 ರ ತನಕ ನಡೆಯುವ ಮೇಳದಲ್ಲಿ ಸಾವಿರಾರು ರೈತರು, ಕೃಷಿ ತಜ್ಞರು, ಉದ್ಯಮಿಗಳು, ಕೃಷಿ ವಿದ್ಯಾರ್ಥಿಗಳು ಸೇರಿದಂತೆ ಲಕ್ಷಾಂತರ ನಾಗರಿಕರು ಭಾಗವಹಿಸುವ ನಿರೀಕ್ಷೆಯಿದೆ.

Manoj
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಚಿವ ಮಹಾದೇವಪ್ಪ ಜಾತಿವಾಗಿ, ಢೋಂಗಿ ರಾಜಕಾರಣಿ: ಅಸ್ಪೃಶ್ಯ ಅಲೆಮಾರಿ ಮಹಾಒಕ್ಕೂಟ ಆರೋಪ

“ಮಹಾದೇವಪ್ಪನವರೇ ನೀವೊಬ್ಬ ಅಪ್ಪಟ ಜಾತಿವಾಗಿ, ಸುಳ್ಳುಗಾರ ಢೋಂಗಿ ರಾಜಕಾರಣಿ. ಬಾಬಾ ಸಾಹೇಬರ...

ರಾಜ್ಯ ಬಜೆಟ್; ದಾವಣಗೆರೆಗೆ ಕೊಟ್ಟಿದ್ದೆಷ್ಟು? ನಿರೀಕ್ಷೆಗಳೇನಿತ್ತು

2026–27ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಿಗೆ ವಿವಿಧ...

ರೈತರ ಸಾಲ ಮನ್ನಾ ಮಾಡಲು ಆಗ್ರಹ: ವಿಧಾನಸೌಧ ಮುತ್ತಿಗೆ ಯತ್ನ

ರಾಷ್ಟ್ರೀಕೃತ, ಸಹಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಇರುವಂತಹ ರೈತರ ಸಾಲವನ್ನು ಸಂಪೂರ್ಣವಾಗಿ...

37 ಸಾವಿರ ಕೋಟಿ ಗುತ್ತಿಗೆ ಹಣ ಬಾಕಿ; ತಕ್ಷಣ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ

ರಾಜ್ಯ ಸರಕಾರ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರಿಗೆ ಬರಬೇಕಾದ ಬಾಕಿ ಮೊತ್ತ 37,370...