ಬೆಂಗಳೂರು ನಗರದಲ್ಲಿ ಪ್ರತಿಭಟನೆಗಳ ಮೇಲಿನ ನಿಷೇಧವನ್ನು ಸರ್ಕಾರ ಹಿಂಪಡೆಯಬೇಕು- ಸಂಘಟನೆಗಳ ಒತ್ತಾಯ

Date:

ಬೆಂಗಳೂರು ನಗರದಲ್ಲಿ ವಿವಿಧ ಸಂಘಟನೆಗಳು ಟೌನ್‌ಹಾಲ್‌ ಮುಂಭಾಗ, ಮೈಸೂರು ಬ್ಯಾಂಕ್‌ ವೃತ್ತ, ಫ್ರೀಡಂ ಪಾರ್ಕ್‌ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುತ್ತಾ ಬಂದಿವೆ. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ನಗರದಲ್ಲಿ ಸಂಚಾರಕ್ಕೆ ಅಡಚಣೆಯಾಗುತ್ತದೆ ಎಂಬ ನೆಪ ಹೇಳಿ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನಾ ಸಭೆಗಳನ್ನು ನಡೆಸಬೇಕು ಎಂಬ ನಿಯಮ ಜಾರಿಗೆ ತಂದಿದೆ. ಈ ನಿಯಮವನ್ನು ರದ್ದುಪಡಿಸಬೇಕು ಎಂದು ಪ್ರಗತಿಪರ ಸಂಘಟನೆಗಳು ಹೇಳುತ್ತಲೇ ಬಂದಿವೆ. ಇದೀಗ ಸರ್ಕಾರಿ ಜಾಗಗಳಲ್ಲಿ ಅನುಮತಿ ಪಡೆಯದೇ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ ಎಂಬ ಸರ್ಕಾರದ ಆದೇಶ ಮತ್ತು ಅದಕ್ಕೆ ಕೋರ್ಟ್‌ ತಡೆ ಕೊಟ್ಟಿರುವ ಹಿನ್ನೆಲೆಯಲ್ಲಿ ಮತ್ತೆ ಈ ವಿಷಯ ಚರ್ಚೆಗೆ ಬಂದಿದೆ.

ಹೋರಾಟದ ಹಕ್ಕಿಗಾಗಿ ಜನಾಂದೋಲನ ಸಂಘಟನೆ ಸರ್ಕಾರದ ಮುಂದೆ ಕೆಲವು ಹಕ್ಕೊತ್ತಾಯವನ್ನು ಸಲ್ಲಿಸಿದೆ.

1.ಉಚ್ಚ ನ್ಯಾಯಾಲಯ ನೀಡಿದ ತಡೆಯಾಜ್ಞೆ ವಿರುದ್ಧ ಮನವಿ ಹೋಗುವ ಬದಲು ಈ ಆದೇಶವನ್ನು ತಕ್ಷಣ ಹಿಂಪಡೆಯಬೇಕು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2.ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಕ್ಕುಗಳಿಗೆ ಸಂಬಂಧಿಸಿದ ಯಾವುದೇ ಹೊಸ ನಿಯಮ ಜಾರಿಗೊಳಿಸುವ ಮೊದಲು ನಾಗರಿಕ ಸಮಾಜ, ಸಂವಿಧಾನ ತಜ್ಞರು ಮತ್ತು ನಾಗರಿಕರೊಂದಿಗೆ ಸಾರ್ವಜನಿಕ ಸಮಾಲೋಚನೆ ನಡೆಸಬೇಕು.

3.ಪ್ರತಿಭಟನೆಗಳನ್ನು Freedom Park ಗೆ ಮಾತ್ರ ಸೀಮಿತಗೊಳಿಸಿರುವ Licensing and Regulation of Protests, Demonstrations and Protest Marches (Bengaluru City) Order, 2021 ಅನ್ನು ರದ್ದುಪಡಿಸಬೇಕು.

4.ಪೊಲೀಸ್ ಕಾಯ್ದೆ ಮತ್ತು ಸ್ಥಳೀಯ ಕಾನೂನುಗಳ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಅಧಿಕಾರಗಳನ್ನು ಬಳಸಿಕೊಂಡು ದ್ವೇಷದ ಅಥವಾ ಹಿಂಸಾತ್ಮಕ ಚಟುವಟಿಕೆಗಳನ್ನು (ಉದಾ: ಆರ್‌ಎಸ್ಸೆಸ್ ಶಾಖೆಗಳು, ಡ್ರಿಲ್ಲುಗಳು) ನಿಯಂತ್ರಿಸಬೇಕು, ಬದಲಿಗೆ ಪ್ರಜಾಸತ್ತಾತ್ಮಕ ಚಟುವಟಿಕೆಗಳನ್ನು ನಿರ್ಬಂಧಿಸಬಾರದು.

5.ಸಾರ್ವಜನಿಕ ಸ್ಥಳಗಳು ಜನರದ್ದಾಗಿವೆ. ಅವು ಸಂವಾದ, ಪ್ರತಿರೋಧ ಮತ್ತು ಸಾಮೂಹಿಕ ಚಟುವಟಿಕೆಗಳ ಪ್ರಮುಖ ವೇದಿಕೆಗಳು. ಅವುಗಳ ಮೇಲಿನ ನನಿರ್ಬಂಧದಿಂದ ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಧಕ್ಕೆಯುಂಟಾಗುತ್ತದೆ. ಪ್ರತಿಭಟನೆ ಅನಾನುಕೂಲವಲ್ಲ, ಬದಲಿಗೆ ಅದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ವ್ಯವಸ್ಥೆಯ ನಾಡಿ.

6.ನಾವು ದ್ವೇಷಪರ ಸಂಘಟನೆಗಳ ವಿರುದ್ಧ ಸರ್ಕಾರದ ದೃಢ ಕ್ರಮಕ್ಕೆ ಬೆಂಬಲ ನೀಡುತ್ತೇವೆ. ಆದರೆ ದ್ವೇಷದ ವಿರುದ್ಧ ಹೋರಾಟವು ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳನ್ನು ದುರ್ಬಲಗೊಳಿಸುವ ಮೂಲಕ ಸಾಧ್ಯವಿಲ್ಲ. ಪ್ರಜಾಸತ್ತಾತ್ಮಕ ಸಮಾಜವನ್ನು ಸರ್ವಾಧಿಕಾರಿ ವ್ಯವಸ್ಥೆಯಿಂದ ಬೇರ್ಪಡಿಸುವುದು ಈ ಸ್ವಾತಂತ್ರ್ಯಗಳೇ.

ಸಂಘಟನೆಗಳ ತಕರಾರು

ಅಕ್ಟೊಬರ್ 18, 2025 ರಂದು ಸರ್ಕಾರ ಹೊರಡಿಸಿದ್ದ ಸಾರ್ವಜನಿಕ ಸ್ಥಳಗಳ ಬಳಕೆ ಕುರಿತ ಆದೇಶ ಅನುಷ್ಠಾನವನ್ನು ಕರ್ನಾಟಕದ ಉಚ್ಚ ನ್ಯಾಯಾಲಯ ಸ್ಥಗಿತಗೊಳಿಸಿದೆ. ಈ ಆದೇಶವು ರಾಜ್ಯದಾದ್ಯಂತ ಸಭೆ, ರ‍್ಯಾಲಿ ಹಾಗೂ ಸಾರ್ವಜನಿಕ ಸಮಾರಂಭಗಳ ಮೇಲೆ ನಿಬಂಧನೆ ಹೇರುತ್ತಿತ್ತು.

ಈ ಆದೇಶದ ಪ್ರಕಾರ, ಯಾವುದೇ ಸರ್ಕಾರಿ ಆಸ್ತಿ (ರಸ್ತೆ, ಉದ್ಯಾನ, ಶಾಲೆ, ಕೆರೆ ಅಥವಾ ಸರ್ಕಾರ ನಿರ್ವಹಿಸುವ ಯಾವುದೇ ಆಸ್ತಿ) ಬಳಕೆಗೆ ಸಂಬಂಧಿಸಿದಂತೆ ಸಂಬಂಧಿತ ಅಧಿಕಾರಿಗಳಿಂದ (ಎಸ್‌ಪಿ / ಡಿಸಿ ಮುಂತಾದವರು) ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಹತ್ತುಕ್ಕಿಂತ ಹೆಚ್ಚು ಜನರು (ವಿವಾಹ ಅಥವಾ ಅಂತ್ಯಕ್ರಿಯೆ ಹೊರತುಪಡಿಸಿ) ಸಂಚರಿಸಿದರೆ ಅದನ್ನು “ರ‍್ಯಾಲಿ” ಎಂದು ಪರಿಗಣಿಸಲಾಗುತ್ತದೆ ಎಂದು ಈ ಆದೇಶ ಹೇಳಿತ್ತು.

ಈ ಆದೇಶವನ್ನು ಆತುರದಲ್ಲಿ ಹೊರಡಿಸಲಾಗಿದ್ದು, ಇದು ಸಾರ್ವಜನಿಕ ಹಾಗೂ ಪ್ರಜಾಸತ್ತಾತ್ಮಕ ಚಟುವಟಿಕೆಗಳಿಗೆ ತೀವ್ರ ಹಾನಿ ಮಾಡುವ ಸಾಧ್ಯತೆಯಿತ್ತು. ಈ ಆದೇಶವು ಈಗಾಗಲೇ ಅಸ್ತಿತ್ವದಲ್ಲಿರುವ ಪ್ರತಿಭಟನೆ ಮತ್ತು ರ‍್ಯಾಲಿಗಳ ಮೇಲಿನ ನಿಬಂಧನೆಗಳಿಗೆ ಮತ್ತಷ್ಟು ತಡೆಗಳನ್ನೇ ಸೇರಿಸಿತ್ತು. ಹೀಗಾಗಿ ಹೈಕೋರ್ಟ್‌ನ ಹಸ್ತಕ್ಷೇಪವು ಸಂವಿಧಾನಾತ್ಮಕ ಹಕ್ಕುಗಳ ಪರವಾಗಿದೆ. ಆದರೆ ಮುಖ್ಯಮಂತ್ರಿಯವರು ಈ ತಾತ್ಕಾಲಿಕ ಸ್ಥಗಿತದ ವಿರುದ್ಧ ಅಪೀಲು ಮಾಡಲಿದ್ದಾರೆ ಎಂಬ ಅವರ ಹೇಳಿಕೆಯಿಂದ ನಮಗೆ ಆತಂಕವಾಗಿದೆ.

ರಾಷ್ಟ್ರ ಸ್ವಯಂ ಸೇವಕ ಸಂಘ (ಆರ್‌.ಎಸ್.ಎಸ್) ಸಾರ್ವಜನಿಕ ಮೈದಾನಗಳನ್ನು, ಶಾಲೆಗಳನ್ನು ದ್ವೇಷ, ಅಸಹಿಷ್ಣುತೆ ಮತ್ತು ಸಶಸ್ತ್ರ ಮನೋಭಾವದ ಸಿದ್ಧಾಂತ ಹರಡುವಿಕೆಯಿಗಾಗಿ ಬಳಸುತ್ತಿರುವ ಬಗ್ಗೆ ಸರ್ಕಾರಕ್ಕೆ ಆತಂಕವಿದ್ದ ಹಾಗೆ ನಮಗೂ ಸಹ ಅದೇ ಆತಂಕವಿದೆ. ಆದರೆ, ಇಂತಹ ಚಟುವಟಿಕೆಗಳನ್ನು ಪ್ರಸ್ತುತ ಕಾನೂನುಗಳ ಮೂಲಕ ನಿಯಂತ್ರಿಸಬೇಕು – ಎಲ್ಲ ನಾಗರಿಕರ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳನ್ನು ಕುಗ್ಗಿಸುವ ಮೂಲಕವಲ್ಲ. ಉದಾಹರಣೆಗೆ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸರ್ಕಾರವು ಶಾಲೆಗಳನ್ನು ಶೈಕ್ಷಣಿಕೇತರ ಉದ್ದೇಶಗಳಿಗೆ ಬಳಸುವುದನ್ನು ನಿಷೇಧಿಸುತ್ತಾ 2013ರಲ್ಲೇ ಸರ್ಕ್ಯುಲರ್ ಹೊರಡಿಸಿತ್ತು. ಆದರೆ ಅದು ಪೂರ್ಣವಾಗಿ ಜಾರಿಗೆ ಬರಲಿಲ್ಲ. ಉದಾಹರಣೆಗೆ, 2025ರ ಜುಲೈ 13ರಂದು ಮಹದೇವಪುರದ ರಾಮಗೊಂದನಹಳ್ಳಿ ಸರ್ಕಾರಿ ಶಾಲಾ ಮೈದಾನದಲ್ಲಿ ಬಿಜೆಪಿ “ಅಕ್ರಮ ಬಾಂಗ್ಲಾದೇಶಿಗಳನ್ನು ಗುರುತಿಸುವ ತರಬೇತಿ” ಕಾರ್ಯಕ್ರಮವನ್ನು ನಡೆಸಿತ್ತು. ಆರ್‌ಎಸ್ಎಸ್ ಶಾಖೆಗಳೂ ಇದೇ ಸರ್ಕ್ಯುಲರ್ ಉಲ್ಲಂಘಿಸಿ ನಡೆದಿದ್ದವು.

ಬೆಂಗಳೂರು ನಗರದಲ್ಲಿ ಈಗಾಗಲೇ ಪ್ರತಿಭಟನೆಗಳ ಮೇಲೆ ತೀವ್ರ ನಿರ್ಬಂಧಗಳಿವೆ. Licensing and Regulation of Protests, Demonstrations and Protest Marches (Bengaluru City) Order, 2021 ಎಂಬ ಆದೇಶವು ಎಲ್ಲ ಪ್ರತಿಭಟನೆಗಳನ್ನು ನಿಯಂತ್ರಿಸುತ್ತದೆ. ಹಾಗೆಯೇ Licensing and Controlling of Assemblies and Processions (Bengaluru City) Order, 2009 ಸಭೆ ಮತ್ತು ಮೆರವಣಿಗೆಗಳ ನಿಯಂತ್ರಣಕ್ಕೆ ಅನ್ವಯಿಸುತ್ತದೆ. ಈ ಎರಡು ಆದೇಶಗಳು ಇದ್ದು ಬೆಂಗಳೂರಿನಲ್ಲಿ ಯಾವುದೇ ಸಂಘಟನೆಗೆ ಮೆರವಣಿಗೆ ಮಾಡಲು ಅನುಮತಿ ನೀಡುತ್ತಿರಲಿಲ್ಲ. ಮೇ ದಿನಾಚರಣೆ ಮೆರವಣಿಗೆಗೆ ಸಹ ಅನುಮತಿ ನೀಡಲಾಗಿರಲಿಲ್ಲ. ಆದರೆ ಆರ್‌ಎಸ್ಎಸ್‌ಗೆ ಬೆಂಗಳೂರಿನಲ್ಲಿ ಮೆರವಣಿಗೆ ನಡೆಸಲು ಅನುಮತಿ ನೀಡಲಾಗಿತ್ತು. ಆರ್‌ಎಸ್ಎಸ್ ಚಟುವಟಿಕೆಗಳಿಗೆ ನಿರ್ಬಂಧ ಮಾಡಲು ಅಸ್ತಿತ್ವದಲ್ಲಿರುವ ಈ ಆದೇಶಗಳಲ್ಲೇ ಕ್ರಮ ಕೈಗೊಳ್ಳಬಹುದಾಗಿತ್ತು. ಅದು ಬಿಟ್ಟು ಸರ್ಕಾರ ಈ ಹೊಸ ಆದೇಶವನ್ನು ಆತುರದಲ್ಲಿ ಹೊರಡಿಸಿತು.

ಇತ್ತೀಚೆಗೆ ಹೈಕೋರ್ಟ್ ಸ್ಥಗಿತಗೊಳಿಸಿದ ಈ ಆದೇಶ ತನ್ನ ಉದ್ದೇಶದ ವ್ಯಾಪ್ತಿಯನ್ನು ಮೀರಿತ್ತು. ಇದು ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ಮಹಿಳಾ ಚಳವಳಿ ಮತ್ತು ಅನೇಕ ನಾಗರಿಕ ಚಟುವಟಿಕೆಗಳಿಗೆ ತೀವ್ರ ಅಡಚಣೆ ಉಂಟುಮಾಡುವಂತಿತ್ತು. ಸಂವಿಧಾನದ ಮೂಲಭೂತ ಹಕ್ಕುಗಳಾದ ಅನುಚ್ಛೇದ 19(1)(a)- ಅಭಿವ್ಯಕ್ತಿಯ ಸ್ವಾತಂತ್ರ್ಯ, 19(1)(b) – ಶಾಂತಿಪೂರ್ಣವಾಗಿ ಶಸ್ತ್ರವಿಲ್ಲದೆ ಸಭೆ ಸೇರುವ ಹಕ್ಕು ಮತ್ತು 19(1)(c) – ಸಂಘಟನೆ ಸ್ಥಾಪನೆ ಹಕ್ಕುಗಳ ಮೇಲೆ ಇದು ನಿರ್ಬಂಧ ಹೇರುತ್ತಿತ್ತು.

ಈ ಹಕ್ಕುಗಳು ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂಲಭಿತ್ತಿಗಳು. ಇವುಗಳ ಮೇಲೆ ವಿಧಿಸಲಾಗುವ ನಿರ್ಬಂಧಗಳು ಸಮಂಜಸ, ಅಗತ್ಯ ಮತ್ತು ಉದ್ದೇಶಪೂರ್ವಕವಾಗಿರಬೇಕು. ಆದರೆ ಸಾರ್ವಜನಿಕ ಸ್ಥಳಗಳ ಬಳಕೆಯ ಮೇಲಿನ ಈ ಸಂಪೂರ್ಣ ನಿಷೇಧ ಸಂವಿಧಾನದ ಈ ಮಾನದಂಡಗಳನ್ನು ಪ್ರಕಾರ ಇರಲಿಲ್ಲ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಸ್‌ಐಆರ್ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಕರ್ನಾಟಕ ದಿಕ್ಸೂಚಿಯಾಗಬೇಕು: ಪ್ರೊ. ಯೋಗೇಂದ್ರ ಯಾದವ್

ಕರ್ನಾಟಕವು ಹಲವು ವಿಷಯಗಳಲ್ಲಿ ದೇಶಕ್ಕೆ ದಿಕ್ಸೂಚಿಯಾಗಿದೆ. ಎಸ್‌ಐಆರ್‍‌ ವಿರುದ್ಧದ ಹೋರಾಟದಲ್ಲಿಯೂ ದೇಶಕ್ಕೆ...

ಶಾಲಾ ಶಿಕ್ಷಣದಲ್ಲಿ ಕಡ್ಡಾಯವಾಗಿ ‘ಹಿಂದಿ’ ತೆಗೆಯಬೇಕು: ಹಿಂದಿ ವಿರೋಧಿ ಕರ್ನಾಟಕ

ಕರ್ನಾಟಕದಲ್ಲಿ ಶೈಕ್ಷಣಿಕವಾಗಿ ಪ್ರತಿ ವರ್ಷ ನಡೆಯುವ ಎಸ್ ಎಸ್ ಎಲ್ ಸಿ...

ಬೇಲಿಯೇ ಎದ್ದು ಹೊಲ ಮೇಯ್ದಂತೆ ಮಾಡಿದ ಮಾಹಿತಿ ಆಯೋಗ; ಕಾಯ್ದೆಯ ವಾರ್ಷಿಕ ವರದಿ ನೀಡಲು ‘ಗೌಪ್ಯತೆ’ಯ ನೆಪ

ಮಾಹಿತಿ ಹಕ್ಕು ಕಾಯ್ದೆ-2005ರಡಿ ಸಾರ್ವಜನಿಕ ಪ್ರಾಧಿಕಾರಗಳು ಪಾರದರ್ಶಕವಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು...

ಒಳಮೀಸಲಾತಿ: 56,000 ಹುದ್ದೆಗಳ ನೇಮಕಾತಿಗೆ ಹೊರಡಿಸಿದ ಅಧಿಸೂಚನೆ ರದ್ದತಿಗೆ ಸರ್ಕಾರ ಒಪ್ಪಿಗೆ

ಇತ್ತೀಚೆಗೆ 56,432 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲು...